ಮಣಿಪುರದ ನರಸೇನಾದಲ್ಲಿ ಕುಕಿ ಉಗ್ರರ ದಾಳಿ, ಇಬ್ಬರು CRPF ಯೋಧರು ಹುತಾತ್ಮ

Manipur: ಲೋಕಸಭೆ ಚುನಾವಣೆಯ (Loksabha Election 2024) ಎರಡನೇ ಹಂತದಲ್ಲಿ (CRPF Personnel Killed-Manipur) ಮಣಿಪುರದ ಹೊರಭಾಗದಲ್ಲಿ ಹೆಚ್ಚಿನ ಮತದಾನ ನಡೆದಿದ್ದು

ಕಳೆದ ವರ್ಷಕ್ಕೆ ಹೋಲಿಸಿದರೆ ಹಿಂಸಾಚಾರ ಘಟನೆಗಳು ಕಡಿಮೆಯಾಗಿವೆ ಮಣಿಪುರದಲ್ಲಿ ಶೇಕಡಾ 75 ರಷ್ಟು ಮತದಾನವಾಗಿದ್ದು, ಯಾವುದೇ ಸಮಸ್ಯೆಯಾಗಿಲ್ಲ ಎಂದು ಮಣಿಪುರ (Manipura) ಮುಖ್ಯ

ಚುನಾವಣಾಧಿಕಾರಿ ಹೇಳಿದರು. 2019ರ ಚುನಾವಣೆಗೆ ಹೋಲಿಸಿದರೆ ಹೊರ ಮಣಿಪುರ ಕ್ಷೇತ್ರದಲ್ಲಿ ಮತದಾನವು ಹೆಚ್ಚು ಶಾಂತಿಯುತವಾಗಿ ನಡೆಯಿತು ಎಂದು ಝಾ ತಿಳಿಸಿದ್ದಾರೆ.

ಈ ಮೊದಲು, ಏಪ್ರಿಲ್ (April) 19 ರಂದು ಮೊದಲ ಹಂತದ ಮತದಾನದ ವೇಳೆ ಹಲವು ಹಿಂಸಾಚಾರದ ಘಟನೆಗಳು ವರದಿಯಾದ ನಂತರ ಇನ್ನರ್ ಮಣಿಪುರ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಏಪ್ರಿಲ್ 22 ರಂದು

ಮರು ಮತದಾನ ನಡೆಸಲಾಗಿತ್ತು. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) 88 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಏಳು ಹಂತಗಳ ಸಾರ್ವತ್ರಿಕ

ಚುನಾವಣೆಗೆ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ (CRPF Personnel Killed-Manipur) ಪ್ರದೇಶಗಳಲ್ಲಿ 102 ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆದಿದೆ.

ಮಣಿಪುರದ ನರಸೇನಾ ಪ್ರದೇಶದಲ್ಲಿ ಮತದಾನದ ನಂತರದಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಕುಕಿ ಉಗ್ರರು (Kuki Terrorists) ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF)

ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.ಮಧ್ಯರಾತ್ರಿಯಿಂದ ಕುಕಿ ಉಗ್ರರು ಬೆಳಗಿನ ಜಾವದವರೆಗೆ ಸಿಆರ್‌ಪಿಎಫ್ (CRPF) ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಹುತಾತ್ಮ ಯೋಧರು ರಾಜ್ಯದ ಬಿಷ್ಣುಪುರ್

ಜಿಲ್ಲೆಯ ನರಸೇನಾ ಪ್ರದೇಶದಲ್ಲಿ ನಿಯೋಜಿಸಲಾದ ಸಿಆರ್‌ಪಿಎಫ್ 128 ಬೆಟಾಲಿಯನ್‌ನವರಾಗಿದ್ದರು.

ಇದನ್ನು ಓದಿ: ಹಾಸನ ಪೆನ್‌ಡ್ರೈವ್ ಪ್ರಕರಣ: ಮಹಿಳೆಯರ ವಿಡಿಯೋ ಶೇರ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳಿ.

Exit mobile version