Bilkis Bano Case: ಬಿಲ್ಕಿಸ್ ಬಾನೊ ಪ್ರಕರಣ ‘ಅಪರಾಧಿಗಳು ಮತ್ತೆ ಜೈಲು ಸೇರುವವರೆಗೆ ಹಿಂತಿರುಗುವುದಿಲ್ಲ’ ಗ್ರಾಮ ತೊರೆದ ಮುಸ್ಲಿಮರು

Culprits Must be sent to jail

New Delhi : ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು(Gujarat Government) ಬಿಡುಗಡೆ ಮಾಡಿದ ನಂತರ, ರಂಧಿಕ್ಪುರ ಗ್ರಾಮದ ಮುಸ್ಲಿಮರು ತಮ್ಮ ಮನೆಗಳನ್ನು ತೊರೆದು ಹೋಗಿದ್ದಾರೆ ಎನ್ನಲಾಗಿದೆ.

ಅತ್ಯಾಚಾರಿಗಳು ಮತ್ತೆ ಜೈಲಿಗೆ (JAIL) ಸೇರಿದರೆ ಮಾತ್ರ ನಾವು ಹಿಂತಿರುಗುವುದಾಗಿ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ವಲಸೆ ಹೋಗಿರುವ ಮುಸ್ಲಿಮರು, ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡುವಂತೆ ಗುಜರಾತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಮರಳಲು ಪೊಲೀಸ್ (POLICE) ರಕ್ಷಣೆಯನ್ನು ಕೋರಿದ್ದಾರೆ.

https://fb.watch/f8cnvyGaPe/ ಟ್ರಾಫಿಕ್ ಪೊಲೀಸ್ ರೌಡಿಸಂ

ಮಾದ್ಯಮಗಳ ವರದಿ ಪ್ರಕಾರ, ರಂಧಿಕ್ಪುರ ಗ್ರಾಮದ ಹಲವು ಮುಸ್ಲಿಂ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು, ಈಗ ದೇವಗಡ (DEVGAD) ಬರಿಯಾದಲ್ಲಿ ವಾಸಿಸುತ್ತಿದ್ದಾರೆ. ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬ ಕೂಡ ದೇವಗಢ್ ಬರಿಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿವೆ.

ಗ್ರಾಮ ತೊರೆದಿರುವ ಸಮೀರ್ ಘಾಚಿ, ತಮ್ಮ ಸಂಪೂರ್ಣ ಕುಟುಂಬದೊಂದಿಗೆ ರಂಧಿಕ್ಪುರ ಗ್ರಾಮವನ್ನು ತೊರೆದು ದೇವಗಢ್ ಬರಿಯಾದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದು, ಈ ಕುರಿತು ಮಾತನಾಡಿ,

ಆ 11 ಮಂದಿ ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಜೈಲಿನಿಂದ ಬಿಡುಗಡೆಯಾದ ಬಗ್ಗೆ ನಮಗೆ ಮೊದಲು ತಿಳಿದಿರಲಿಲ್ಲ, ಆದರೆ ಅವರು ಗ್ರಾಮಕ್ಕೆ ಮರಳಿದ ನಂತರ ಪಟಾಕಿ ಮತ್ತು ಸಂಗೀತದೊಂದಿಗೆ ಸಂಭ್ರಮಿಸಿದರು.

ಇದನ್ನೂ ಓದಿ : https://vijayatimes.com/facts-about-tree/

ಆಗ ನಮಗೆ ವಿಷಯ ತಿಳಿಯಿತು. ನಂತರ ಭಯದಿಂದ ನಮ್ಮ ಗ್ರಾಮವನ್ನು ತೊರೆದು ದೇವಗಢ್ ಬರಿಯಾಕ್ಕೆ ವಲಸೆ ಹೋಗಲು ನಿರ್ಧರಿಸಿದೇವು.

ಎಲ್ಲಾ 11 ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡಬೇಕು ಮತ್ತು ಬಿಲ್ಕಿಸ್ ಬಾನುಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ 55 ಜನರು ದಾಹೋದ ಕಲೆಕ್ಟರಿಗೆ (COLLECTOR )ಪತ್ರ ಬರೆದು, ಅದು ಆಗದಿದ್ದರೆ ನಾವು ನಮ್ಮ ಹಳ್ಳಿಗೆ ಹಿಂತಿರುಗುವುದಿಲ್ಲ ಎಂದು ಸಮೀರ್ ಹೇಳಿದರು

ಇನ್ನು 11 ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡಬೇಕು ಮತ್ತು ಬಿಲ್ಕಿಸ್ ಬಾನೋಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾವು ದಾಹೋದ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ. ಅದು ಆಗದಿದ್ದರೆ, ನಾವು ನಮ್ಮ ಹಳ್ಳಿಗೆ ಹಿಂತಿರುಗುವುದಿಲ್ಲ” ಎಂದು ಸಮೀರ್ ಘಾಚಿ ಹೇಳಿದ್ದಾರೆ.
Exit mobile version