ನೀವಿದ್ದರೂ ದ.ಕನ್ನಡ ಜಿಲ್ಲೆ ಆತಂಕದಲ್ಲಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಅಲ್ಲವೇ? : ರಾಜ್ಯ ಕಾಂಗ್ರೆಸ್

Bengaluru : ನೀವು ಲವ್‌ ಜಿಹಾದ್‌(Dakshina Kannada district worried) ಬಗ್ಗೆ ಹೆಚ್ಚು ಗಮನ ಹರಿಸಿ, ರಸ್ತೆಯ ಗುಂಡಿಗಳ ಬಗ್ಗೆ ಅಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin kumar Kateel) ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಇದನ್ನೇ ಅಸ್ತ್ರವಾಗಿಸಿಕೊಂಡಿರುವ ರಾಜ್ಯ ಕಾಂಗ್ರೆಸ್(State congress) ಈಗ ಮತ್ತೊಮ್ಮೆ ನಳೀನ್‌ ಕುಮಾರ್‌ ಅವರನ್ನು ನೀವಿದ್ದರೂ ದ.ಕನ್ನಡ ಜಿಲ್ಲೆ(Dakshina kannada District) ಆತಂಕದಲ್ಲಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಅಲ್ಲವೇ? : ಎಂದು ಟೀಕಿಸಿದೆ.


ನಳೀನ್‌ ಕುಮಾರ್‌ ಕಟೀಲ್‌ ಅವರು ಲವ್‌ ಜಿಹಾದ್‌ ಬಗ್ಗೆ ಹೆಚ್ಚು ಗಮನ ಹರಿಸಿ, ರಸ್ತೆಯ ಗುಂಡಿಗಳ ಬಗ್ಗೆ ಅಲ್ಲ ಎಂದು ನೀಡಿದ ಹೇಳಿಕೆಯನ್ನು ಅಪಹಾಸ್ಯ ಮಾಡಿದ ಕಾಂಗ್ರೆಸ್‌,

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಾಗೂ ತನಿಖಾ ಸಂಸ್ಥೆಗಳಿಗೆ ತಿಳಿಯದ ಲವ್ ಜಿಹಾದ್ ಬಗ್ಗೆ ನಳೀನ್‌ ಕುಮಾರ್‌ ಕಟೀಲ್ ಅವರಿಗೆ ತಿಳಿದಿದ್ದು ಹೇಗೆ? ಎಂದು ಟ್ವೀಟ್‌(Tweet) ಮೂಲಕ ಪ್ರಶ್ನಿಸಿದೆ.

ಲವ್ ಜಿಹಾದ್ ಎಂಬುದಕ್ಕೆ ಪುರಾವೆಗಳಿಲ್ಲ , ಲವ್ ಜಿಹಾದ್ ಬಗ್ಗೆ ಕಾನೂನಾತ್ಮಕ ವಿವರಣೆ ಇಲ್ಲ – ಕೇಂದ್ರ ಸರ್ಕಾರ, ಲವ್ ಜಿಹಾದ್ ಬಗ್ಗೆ ಸರ್ಕಾರ ಚಿಂತಿಸಿಲ್ಲ – ಸಿಎಂ ಬಸವರಾಜ ಬೊಮ್ಮಾಯಿ(Basavaraj bommai)! ಹೇಳಿಕೆಗಳು ಹೊರಬಂದಿದೆ.

ಆದ್ರೆ, ಈ ಎಲ್ಲಾ ಹೇಳಿಕೆಯನ್ನು ನಳೀನ್‌ ಕುಮಾರ್‌ ಕಟೀಲ್‌ ಅವರು ತಲೆಕೆಳಗಾಗುವಂತೆ ಮಾಡಿದ್ದಾರೆ.

ಬಿಜೆಪಿಯ(Dakshina Kannada district worried) ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್‌ ಕಟೀಲ್‌ ಅವರು ನೀಡಿರುವ ಲವ್‌ ಜಿಹಾದ್‌ ಹೇಳಿಕೆಯ ಹಿಂದಿರುವ ಸತ್ಯವೇನು? ಎಂಬ ಪ್ರಶ್ನೆಗಳ ಸರಿಮಳೆಯನ್ನು ಕಾಂಗ್ರೆಸ್‌ ಹರಿಸಿದೆ.

ಇದನ್ನೂ ಓದಿ: https://vijayatimes.com/smoke-ice-cream/

ಮತ್ತೊಂದು ಹೇಳಿಕೆಯಲ್ಲಿ ಕಾಮಿಡಿ ಕಿಲಾಡಿ(Comedy kiladi) ನಳೀನ್‌ ಕುಮಾರ್‌ ಕಟೀಲ್‌ ಅವರೇ, 8 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ, ಮೂರುವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತ,

ದಕ್ಷಿಣ ಕನ್ನಡದ ಸಂಸದರೂ ತಾವೇ. ಹೀಗಿದ್ದೂ ದ.ಕ ಜಿಲ್ಲೆ ಆತಂಕದಲ್ಲಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಅಲ್ಲವೇ? ಜನವಿರೋಧದ ಆತಂಕವಿರುವುದರಿಂದ ತಾವು ‘ಆತಂಕವಾದಿಗಳಾಗುತ್ತಿದ್ದೀರಿ ಅಲ್ಲವೇ? ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ನಳೀನ್‌ ಕುಮಾರ್‌ ಕಟೀಲ್‌ ಅವರು ನೀಡಿದ ಹೇಳಿಕೆ ದಿನದಿಂದ ದಿನಕ್ಕೆ ಒಂದೊಂದು ರೀತಿಯ ತಿರುವನ್ನು ಪಡೆದುಕೊಳ್ಳುತ್ತಿದ್ದು,

ರಾಜಕೀಯ ವಲಯದಲ್ಲಿ ಅನ್ಯ ಪಕ್ಷದ ನಾಯಕರು ಕೂಡ ನಳೀನ್‌ ಕುಮಾರ್‌ ಕಟೀಲ್‌ ಅವರ ಲವ್‌ ಜಿಹಾದ್‌ ಹೇಳಿಕೆಯನ್ನು ಖಂಡಿಸಿದ್ದು, ಇದು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಭಾವ ಬೀರಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version