ದಲಿತ ಮಹಿಳೆ ನೀರು ಕುಡಿದ ನಂತರ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ : ತನಿಖೆಗೆ ಆದೇಶ

Chamarajnagar : ದಲಿತ ಮಹಿಳೆ(Dalit Woman Water Issue) ನೀರು ಕುಡಿದ ನಂತರ ನೀರಿನ ಟ್ಯಾಂಕ್‌ನ್ನು ಗೋಮೂತ್ರದಿಂದ ಶುದ್ಧೀಕರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಚಾಮರಾಜನಗರದ ಹೆಗ್ಗಟೋರ ಗ್ರಾಮದ ದಲಿತ ಮಹಿಳೆ ಮೇಲ್ಜಾತಿಯವರು(Dalit Woman Water Issue) ವಾಸಿಸುವ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ನೀರು ಶೇಖರಣಾ ತೊಟ್ಟಿಯಿಂದ ನೀರು ಕುಡಿದಿದ್ದಾಳೆ. ನಂತರ ನೀರನ್ನು ಹೊರಹಾಕಿ, ನೀರಿನ ಟ್ಯಾಂಕ್‌ನ್ನು ಗೋಮೂತ್ರದಿಂದ ಶುದ್ಧೀಕರಿಸಿದರು ಎನ್ನಲಾಗಿದೆ. 

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral) ಆದ ಕೂಡಲೇ ಸ್ಥಳೀಯ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೆಗ್ಗಟೋರ ಗ್ರಾಮದಲ್ಲಿ ದಲಿತ ಸಮುದಾಯದವರ ವಿವಾಹವಿತ್ತು. ಹೆಚ್.ಡಿ.ಕೋಟೆಯಿಂದ ಮದುವೆಯಲ್ಲಿ ಪಾಲ್ಗೊಳ್ಳಲು ದಲಿತ ಮಹಿಳೆ ಬಂದಿದ್ದರು.

ಇದನ್ನೂ ಓದಿ : https://vijayatimes.com/siddaramaiah-reacts-to-blast/

ಸಾರ್ವಜನಿಕ ತೊಟ್ಟಿಯಲ್ಲಿದ್ದ ನೀರು ಕುಡಿದು ಅವಸರವಸರವಾಗಿ ಬಸ್ ಹತ್ತಿದಳು. ಕೂಡಲೇ ಗ್ರಾಮಸ್ಥರು ಮಹಿಳೆಯನ್ನು ನಿಂದಿಸಿದ್ದು, ನಂತರ ಟ್ಯಾಂಕ್ ಶುದ್ಧೀಕರಿಸಿದರು. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ ಘಟನೆಯನ್ನು ಖಚಿತಪಡಿಸಿದ್ದಾರೆ. ನಂತರ ಅಧಿಕಾರಿಗಳು ತಹಸೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ.

ಇನ್ನು ತಹಸೀಲ್ದಾರ್ ಐ.ಇ.ಬಸವರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ(Social Welfare Department) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ನೀರು ಸಂಗ್ರಹಣಾ ತೊಟ್ಟಿ ಸಾರ್ವಜನಿಕ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ಅದರಲ್ಲಿ ನೀರು ಕುಡಿಯಬಹುದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.

https://youtu.be/lxHcGEJR7Ls

ತಹಸೀಲ್ದಾರ್ ಅವರು 20 ದಲಿತ ಯುವಕರನ್ನು ಗ್ರಾಮದ ಎಲ್ಲಾ ಸಾರ್ವಜನಿಕ ಕುಡಿಯುವ ನೀರಿನ ನಲ್ಲಿಗಳಿಗೆ ಕರೆದೊಯ್ದು ನೀರು ಕುಡಿಸಿದರು. ಇನ್ನೊಂದೆಡೆ ದಲಿತ ಸಮುದಾಯದ ಹಿರಿಯರು ಈಗಾಗಲೇ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್(FIR) ದಾಖಲಿಸಿದ್ದಾರೆ.  

ಇದನ್ನೂ ಓದಿ : https://vijayatimes.com/mp-kumarswamy-controversy/

ಘಟನೆ ಕುರಿತು ಪ್ರತಿಕ್ರಿಯಿಸಿದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಇಂತಹ ತಾರತಮ್ಯವನ್ನು ಸಹಿಸುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Exit mobile version