ಪೇಪರ್ ಕಪ್ನಲ್ಲಿ ಟೀ ಕುಡಿತ್ತಿದ್ರೆ ಈಗಲೇ ನಿಲ್ಲಿಸಿ.! ಇದರಿಂದ ಬರುತ್ತೆ ಕ್ಯಾನ್ಸರ್.!

ಪೇಪರ್ ಕಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್.! ಪೇಪರ್ ಕಪ್ನಲ್ಲಿ ಟೀ ಕುಡಿದ್ರೆ ಬರುತ್ತೆ ಕ್ಯಾನ್ಸರ್. ಪೇಪರ್ ಕಪ್ ಒಳಗೆ ಇದೆ ವಿಷ ರಾಸಾಯನಿಕ ! ಡೆಡ್ಲಿ ಪೇಪರ್ ಬಗ್ಗೆ ಇನ್ನಷ್ಟು ಡೇಂಜರಸ್ ಮಾಹಿತಿ ಇಲ್ಲಿದೆ ಮುಂದೆ ಓದಿ. ನೀವು ಈ ಬಿಸಿ ಬಿಸಿ ಕಾಫಿ ಕುಡಿಯಲು ಪೇಪರ್ ಕಪ್ ಬಳಸ್ತಿದ್ದಾರಾ.? ಹಾಗಾದ್ರೆ ಎಚ್ಚರ ! ನೀವು ಬಳಸ್ತಿರೋ ಪೇಪರ್ ಕಪ್ನಿಂದ ನಿಮಗೆ ಕ್ಯಾನ್ಸರ್ ಬರಬಹುದು.

ನಿಮ್ಮ ಕಿಡ್ನಿ ಲಿವರ್ ಫೈಲ್ ಆಗಬಹುದು. ಅಷ್ಟೇ ಅಲ್ಲ ನಿಮಗೆ ಹುಟ್ಟೋ ಮಕ್ಕಳಿಗೂ ಚಿತ್ರ ವಿಚಿತ್ರ ಕಾಯಿಲೆ ಬರಬಹುದು ಗೊತ್ತಾ.? ಹೌದಾ.? ಹೇಗೆ? ಇದನ್ನು ಯಾರು ಪತ್ತೆಹಚ್ಚಿದ್ದು ಅನ್ನೋದು ನಿಮ್ಮ ಪ್ರಶ್ನೆಯಾ? ಹಾಗಾದ್ರೆ ಈ ಸ್ಟೋರಿಯನ್ನ ಪೂರ್ತಿಯಾಗಿ ಓದಿ. ಈ ಆಘಾತಕಾರಿ ಅಂಶ ಪತ್ತೆ ಹಚ್ಚಿದ್ದು ಬೇರೆ ಯಾರೂ ಅಲ್ಲ, ಬದಲಾಗಿ ಐಐಟಿ(IIT)ಅಂದ್ರೆ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು. ಇವರ ಸಂಶೋಧನೆಯಲ್ಲಿ ಪೇಪರ್ ಕಪ್ ಕುರಿತ ಆಘಾತಕಾರಿ ಅಂಶಗಳು ಬಯಲಾಗಿವೆ. ಆ ಆಫಾತಕಾರಿ ರಹಸ್ಯಗಳು ಯಾವುವು ಅನ್ನೋದನ್ನ ಒಂದೊಂದಾಗಿಯೇ ವಿವರಿಸ್ತೀವಿ.


ಡಿಸ್ಪೋಸೆಬಲ್ ಕಪ್ನ ಒಳಗೆ ಹಾಕೋ ನೀರು ಅಥವಾ ದ್ರವ ವಸ್ತು ಸೋರದಂತೆ ಪ್ಲಾಸ್ಟಿಕ್ ಲೇಯರ್ ಹಾಕ್ತಾರೆ. ಅದು ನಮ್ಮ ಕಣ್ಣಿಗೆ ಗೋಚರಿಸಲ್ಲ. ಆದ್ರೆ ನಾವು ಈ ಕಪ್ ಒಳಗೆ ಬಿಸಿ ಬಿಸಿ ದ್ರಾವಣ ಹಾಕುತ್ತಿದ್ದಂತೆ ವಾಟರ್ ಪ್ರೂಫ್ (water proof) ಗೇ ಅಂತ ಹಾಕಲಾಗಿರುವ ಪ್ಲಾಸ್ಟಿಕ್ ಲೇಯರ್ (plastic layer) ಕರಗುತ್ತಾ ಹೋಗುತ್ತೆ.
ಸ್ವಲ್ಪ ಹೊತ್ತು ಪೇಪರ್ ಕಪ್ನಲ್ಲಿ ಬಿಸಿ ಟೀ ಕಾಫಿ ಹೀರುತ್ತಾ ಇದ್ರೆ ಕಪ್ನೊಳಗೆ ಇರುವ ಡೇಂಜರಸ್ ಮೈಕ್ರೋ ಪ್ಲಾಸ್ಟಿಕ್ನ(microplastics) ಕಣಗಳು ಟೀ ಜೊತೆ ಸೆರಿಕೊಳುತ್ತೆ. ಈ ಮೈಕ್ರೋ ಪ್ಲಾಸ್ಟಿಕ್ ಅಂಶಗಳು ಬಹಳ ಸೂಕ್ಷ್ಮವಾಗಿರುತ್ತೆ. ಅದು ಉಪ್ಪಿನ ಕಣಗಳಿಗಿಂತಲೂ ಸಣ್ಣದಾಗಿರುತ್ತೆ. ಈ ಕಣಗಳು ನಿರಂತರವಾಗಿ ನಮ್ಮ ದೇಹದೊಳಗೆ ಸೇರುತ್ತಾ ಹೋದ್ರೆ ನಮ್ಮ ಆರೋಗ್ಯದಲ್ಲಿ ಭಾರೀ ಏರು ಪೇರಾಗುತ್ತೆ. ನಮಗೆ ಗೊತ್ತಿಲ್ಲದೆ ನಮ್ಮ ದೇಹವನ್ನು ಮಾರಣಾಂತಿಕ ಕಾಯಿಲೆಗಳು ಆವರಿಸಲು ಪ್ರಾರಂಭಿಸುತ್ತವೆ.


ಪೇಪರ್ ಕಪ್ ಉತ್ಪಾದಿಸಲು ಬರೀಮೈಕ್ರೋ ಪ್ಲಾಸ್ಟಿಕ್ ಮಾತ್ರ ಅಲ್ಲ ಅತ್ಯಂತ ಅಪಾಯಾಕಾರಿ ಕೆಮಿಕಲ್ಸ್ ಮತ್ತು ಮೆಟಲ್ಸ್ ಸಹ ಬಳಸುತ್ತಾರೆ. ಈ ಡೆಡ್ಲಿ ರಾಸಾಯನಿಕಗಳು ನಾವು ಕುಡಿಯೋ ಟೀ ಜೊತೆ ನಮ್ಮ ದೇಹ ಸೇರುತ್ತೆ. ಸಾಮಾನ್ಯವಾಗಿ ದಿನಕ್ಕೆ ಐದರಿಂದ ಆರು ಬಾರಿ ಟೀ, ಕಾಫಿ ಕುಡಿಯುವವರಿಗೆ ಮಾತ್ರ ಇದು ವಿಷ ಪ್ರಾಷಾಣ ಆದ ಹಾಗೆ. ಯಾಕಂದ್ರೆ ಈ ಡೇಂಜರಸ್ ಮೆಟಲ್ಗಳು ನಮ್ಮ ರಕ್ತ ಕಣದೊಳಗೆ ನಿರಂತರವಾಗಿ ಸೇರುತ್ತಾ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಅದು ಅತಿಂಥಾ ಅಪಾಯ ಅಲ್ಲ, ನಮ್ಮ ಜೀವಕ್ಕೆ ಕುತ್ತು ತರೋ ಕ್ಯಾನ್ಸರ್ ಕಾಯಿಲೆ ಬರಬಹುದು. ನಮಗೆ ಗೊತ್ತಿಲ್ಲದೆ ಈ ಪೇಪರ್ ಕಪ್ ನಮಗೆ ಬಗೆ ಬಗೆಯ ಕ್ಯಾನ್ಸರ್ ರೋಗ ತರಿಸಿ ಬದುಕು ಬರ್ಬಾದ್ ಮಾಡಬಹುದು.


ದಿನಕ್ಕೆ 4-5 ಬಾರಿ ಈ ಡಿಸ್ಪೋಸೆಬಲ್ ಕಪ್ಸ್ ನಲ್ಲಿ ಬಿಸಿ ದ್ರಾವಣ ಕುಡಿದ್ರೆ ದೇಹಕ್ಕೆ 1000 ಮೈಕ್ರೋ ಪ್ಲಾಸ್ಟಿಕ್ ಕಣಗಳು ಸೇರುತ್ತವೆ. ಇದೇ ರೀತಿ ನಿತ್ಯ ನಾವು ಪೇಪರ್ ಕಪ್ಪಲ್ಲೇ ಕಾಫಿ, ಟೀ ಕುಡಿದ್ರೆ ಕ್ಯಾನ್ಸರ್ ಬರುವುದು ಖಂಡಿತ. ಪೇಪರ್ ಕಪ್ಗಳ ಒಳಗಿನ ಮೈಕ್ರೊಪ್ಲಾಸ್ಟಿಕ್ ಅಂಶಗಳು ನಿಧಾನವಾಗಿ ದೇಹಕ್ಕೆ ಸೇರುವುದರಿಂದ ಅತಿಸಾರ ಪ್ರಾರಂಭವಾಗುತ್ತದೆ. ಅದು ಕರುಳು ಬೇನೆ ತರಬಹುದು. ಕರುಳಿನ ಕ್ಯಾನ್ಸರ್ ಬರಬಹುದು. ಅಷ್ಟು ಮಾತ್ರವಲ್ಲದೆ, ಇದೇ ರೀತಿ ನಿತ್ಯ ಪ್ಲಾಸ್ಟಿಕ್ ಕಪ್ಪನ್ನೇ ಬಳಸ್ತಾ ಹೋದ್ರೆ ಕಿಡ್ನಿ ವೈಫಲ್ಯ, ಲಿವರ್ ವೈಫಲ್ಯ ಆಗಬಹುದು ಎಚ್ಚರ.

ಡೊಸ್ಪೋಸೆಬಲ್ ಕಪ್ಸ್ ನಲ್ಲಿ ಹಾನಿಕಾರಕ ಕೆಮಿಕಲ್ಸ್ ಇರುವುದರಿಂದ ಇದನ್ನು ಗರ್ಭಿಣಿಯರು ಬಳಸೋದು ಬಹಳ ಹಾನಿಕಾರಕ. ಗರ್ಭಿಣಿಯರು ಈ ಕಪ್ ಬಳಿಸಿದ್ರೆ ಬಿ.ಪಿ ಜಾಸ್ತಿ ಆಗುವ ಸಾಧ್ಯತೆ ಇದೆ. ಅಷ್ಟೆ ಅಲ್ಲದೆ ಹುಟ್ಟೋ ಮಗುವಿನ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಮಗುವಿನ ಆರೋಗ್ಯ ಕೇಡುತ್ತದೆ ಮತ್ತು ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತೆ.
ಇನ್ನು ಈ ಪೇಪರ್ ಕಪ್ನ ವಿಪರೀತ ಬಳಕೆಯಿಂದ ಒತ್ತಡ ಅಥವಾ ಮಾನಸಿಕ ಒತ್ತಡದಂತಹ ಮಾನಸಿಕ ಕಾಯಿಲೆಗಳು ಜಾಸ್ತಿಯಾಗುತ್ತೆ.

ಈ ಡಿಸ್ಪೋಸೆಬಲ್ ಕಪ್ಸ್ ನ ಉತ್ಪಾದನೆಗೆ ಕಣ್ಣಿಗೆ ಕಾಣದಂತೆ ಸೀಸ ಮುಂತಾದ ಲೋಹಗಳನ್ನು (lead and metal) ಬಳಸ್ತಾರೆ. ಇದರಿಂದ ಮೆದುಳಿನ ಮೇಲೆ ಬಹಳ ಪರಿಣಾಮ ಬೀರುತ್ತೆ. ಅದ್ರಲ್ಲೂ ಮಕ್ಕಳಿಗೆ ಆಟಿಸಂನಂಥಾ ಕಾಯಿಲೆಗಳು ಬರಬಹುದು. ಈಗಲಾದ್ರೂ ಗೊತ್ತಾಯ್ತಾ? ಈ ಪೇಪರ್ ಕಪ್ ಬಳಕೆ ಎಷ್ಟೊಂದು ಅಪಾಯಕಾರಿ ಅಂತ. ಇದರ ನಿತ್ಯ ಬಳಕೆ ನಿಮಗೆ ಮರಣ ಶಾಸನ ಆಗಬಹುದು. ನಿಮಗೆ ಗೊತ್ತಿಲ್ಲದೆ ನಿಮಗೆ ಮಾರಣಾಂತಿಕ ಕಾಯಿಲೆ ಕೊಡೋ ಸಾಧನ ಆಗಬಹುದು. ನಿಮ್ಮ ಆರೋಗ್ಯ ನಿಮ್ಮ ಹಕ್ಕು, ನಿಮ್ಮ ಕಾಳಜಿ ಎಚ್ಚರ.!

Exit mobile version