ಮೈದಾ ಅನ್ನೋ ಸ್ಲೋ ಪಾಯಿಸನ್‌ ; ಮೈದಾ ತಿಂದ್ರೆ ಸಾಲು ಸಾಲು ರೋಗಗಳು ಬರ್ತವೆ ಎಚ್ಚರ!

ಯಸ್‌, ಇಂದಿನ ಪೀಳಿಗೆಗೆ ಪಿಜ್ಜಾ, ಬರ್ಗರ್ ಅಂದ್ರೆ ಇಷ್ಟ. ಬೇಕರಿ ಐಟಂ(Deadly Maida) ಅಂದ್ರೆ ಪಂಚಪ್ರಾಣ. ಬ್ರೆಡ್‌ ಜಾಮ್ ಇಲ್ಲದೆ ದಿನವೇ ಕಳೆಯಲ್ಲ.

ಪರೋಟ, ಮ್ಯಾಗಿಯೇ ದಿನದ ಊಟವಾಗಿದೆ. ಆದ್ರೆ ಸ್ನೇಹಿತ್ರೆ ನೆನಪಿಟ್ಟುಕೊಳ್ಳಿ ನಿಮ್ಮ ಈ ಆಹಾರದಿಂದ ನಿಮಗೆ ಕಾದಿದೆ ಕ್ಯಾನ್ಸರ್‌, ಡಯಾಬಿಟೀಸ್‌.

ಯಾಕಂದ್ರೆ ಈ ಪಿಜ್ಜಾ, ಬರ್ಗರ್, ಬೇಕರಿ ಐಟಮ್ ಗಳಲ್ಲಿ ಬಳಸುವ ಮೈದಾ ಎಷ್ಟು ಡೇಂಜರಸ್ ಗೊತ್ತಾ? ಇದು ಹೇಗೆ ತಯಾರಾಗುತ್ತೆ ? ಯಾವೆಲ್ಲ ವಿಷಕಾರಿ ಕೆಮಿಕಲ್ ಬಳಕೆಯಾಗುತ್ತದೆ ಎಂಬ ಮಾಹಿತಿ ನಿಮಗೆ ತಿಳಿದಿದೆಯಾ? ಆ ರಹಸ್ಯ ನಿಮಗೆ ತಿಳಿದಿದೆಯಾ? ಇಲ್ಲಿದೆ ಓದಿ ಅಚ್ಚರಿ ಸಂಗತಿ.

ಸ್ನೇಹಿತರೆ ಮನುಷ್ಯ ಪುರಾತನ ಕಾಲದಿಂದಲೂ ಅಕ್ಕಿ ,ಗೋಧಿ, ರಾಗಿ ಹಿಟ್ಟನ್ನು (Deadly Maida)ಆಹಾರವಾಗಿ ಬಳಸ್ತಿದ್ದಾನೆ. ಆದ್ರೆ ಮೈದಾ ಹಿಟ್ಟನ್ನು ನಮ್ಮ ಪೂರ್ವಜರು ಎಂದಿಗೂ ಬಳಸುತ್ತಿರಲಿಲ್ಲ.

ಅದು ಅವರ ಆಹಾರ ಭಾಗವೇ ಆಗಿರಲಿಲ್ಲ. ಅದೊಂದು ವೇಸ್ಟ್‌ ಹಿಟ್ಟಾಗಿತ್ತು. ಆದ್ರೆ ಈಗ ಈ ಮೈದಾಕ್ಕೆ ಉಳಿದೆಲ್ಲಾ ಹಿಟ್ಟುಗಳಿಗಿಂತ ಹೆಚ್ಚು ಪ್ರಾಶಸ್ತ್ಯ ಸಿಕ್ತಿದೆ.

ಇದನ್ನೂ ಓದಿ : https://vijayatimes.com/street-arts-in-india/

ಅದರ ಬಳಕೆಯೂ ವಿಪರೀತವಾಗಿ ಹೆಚ್ಚಾಗಿದೆ. ಯಾಕಂದ್ರೆ ಜನ ಇದನ್ನು ಕರೆಯೋದೇ ಆಲ್‌ ಪರ್ಪಸ್‌ ಫ್ಲೋರ್‌ ಅಂದ್ರೆ ಎಲ್ಲಾ ರೀತಿಯಲ್ಲಿ ಬಳಕೆಯಾಗಬಲ್ಲ ಹಿಟ್ಟು ಅಂತ. ಆದ್ರೆ ಈ ಮೈದಾ ಹಿಟ್ಟಿನ ಇತಿಹಾಸ ಕೇಳಿದ್ರೆ ಬೆಚ್ಚಿ ಬೀಳ್ತೀರಾ.

ಪೋಸ್ಟರ್‌ ಅಂಟಿಸಲು ಮೈದಾ ಬಳಕೆ : ಆರಂಭದಲ್ಲಿ ಮೈದಾ ಹಿಟ್ಟನ್ನು(Maida Flour) ಆಹಾರವಾಗಿ ಅಲ್ಲ ಗೋಡೆಗಳಿಗೆ ಪೋಸ್ಟರ್‌ ಅಂಟಿಸುವುದಕ್ಕೆ ಬಳಸಲಾಗುತ್ತಿತ್ತು.

ಎರಡನೇ ಮಹಾಯುದ್ಧ ನಡೆಯುವ ತನಕ ಮೈದಾದ ಬಗ್ಗೆ ಜನರಿಗೆ ಅರಿವೇ ಇರಲಿಲ್ಲ.

ಆದ್ರೆ ಯಾವಾಗ ಯುದ್ಧಕಾಲದಲ್ಲಿ ಆಹಾರದ ಕೊರತೆ ಕಾಡಿತೋ ಆವಾಗ ಗೋಧಿಯ ಹೊಟ್ಟಿನಿಂದ ತಯಾರಿಸಲಾಗುವ ಮೈದಾವನ್ನು ಬಳಕೆ ಮಾಡಲಾಯಿತು. ಮೈದಾದ ಬ್ರೆಡ್‌, ಬನ್ ಜನರ ಹೊಟ್ಟೆ ತುಂಬಿಸಿತು.

ಆದ್ರೆ ಆ ಬಳಿಕ ಈ ಮೈದಾ ಮಾಡಿದ್ದು ಮಾತ್ರ ದುರಂತ. ಹೌದು , ಗೋಧಿ ಹಿಟ್ಟನ್ನು ರಿಫೈಂಡ್ ಮಾಡಿದ ನಂತರ ಉಳಿದ ತೆಳು ಪದರವೇ ಈ ಮೈದಾ.

ಗೋಧಿ ಹಿಟ್ಟನ್ನು ಪಾಲಿಶ್ ಮಾಡಿದ ನಂತರ ಸಿಗುವುದೇ ಈ ಮೈದಾ. ಫೆರಾಕ್ಸೈಡ್ ಎಂಬ ಕೆಮಿಕಲನ್ನು ಬಳಸಿ ಈ ಮೈದಾ ಹಿಟ್ಟನ್ನು ತಯಾರಿಸಲಾಗುತ್ತೆ.

ಇದರಲ್ಲಿ ಯಾವುದೇ ಫೈಬರ್‌ ಅಂದ್ರೆ ನಾರಿನ ಅಂಶ ಇರುವುದಿಲ್ಲ. ಇದು ಯಥೇಚ್ಛವಾಗಿ ಕಾರ್ಬೊ ಹೈಡ್ರೇಟ್ ಅಂಶವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : https://vijayatimes.com/warning-report/

ಕಸಕ್ಕೆ ಕೆಮಿಕಲ್‌ ಹಾಕಿ ಮೈದಾ ತಯಾರು : ಸರಳವಾಗಿ ಹೇಳಬೇಕೆಂದರೆ ಗೋಧಿ ಹಿಟ್ಟಿನ ಕಸದಲ್ಲಿ ತಯಾರಾಗುವುದೇ ಈ ಮೈದಾ. ಈ ಮೈದಾ ಹಿಟ್ಟನ್ನು ಹದವಾಗಿ ಮಾಡುವುದಕ್ಕೆ ಹಲವಾರು ಕೆಮಿಕಲ್ ಗಳನ್ನು ಉಪಯೋಗಿಸಲಾಗುತ್ತದೆ.

ಕಾರ್ಬನ್ ಗ್ಯಾಸ್, ಅಯೋಡಿನ್ , ಕ್ಲೋರಿನ್ ಗ್ಯಾಸ್ ಎಂಬ ವಿಷಕಾರಿ ಕೆಮಿಕಲ್ ಗಳನ್ನು ಈ ಮೈದಾ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಮೈದಾ ಬ್ಯಾನ್‌ ಆಗಿದೆ ಗೊತ್ತಾ? : ಮೈದಾದ ಹಾನಿಕಾರಕ ಗುಣಗಳನ್ನು ಮನಗಂಡು ಚೀನಾ, ಯೂರೋಪ್‌ ರಾಷ್ಟ್ರಗಳು ಸೇರಿದಂತೆ ಹಲವಾರು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ.

ಏಕೆಂದರೆ ಇದರ ತಯಾರಿಕೆಯಲ್ಲಿ ಬಳಸಲಾಗುವ ಪೆರಾಕ್ಸೈಡ್ ,ಅಲೋಕ್ಸೇನ್ ಬಹಳ ವಿಷಕಾರಿ. ಇದು ನಮ್ಮ ಕಿಡ್ನಿ ಮೇಲೆ ನೇರ ಪ್ರಭಾವವನ್ನು ಬೀರುತ್ತದೆ.

ಆದರೆ ಈ ವಿಷವನ್ನು ನಮ್ಮ ದೇಶದಲ್ಲಿ ಹಿಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಎಗ್ಗಿಲ್ಲದೆ ಬಳಸಲಾಗುತ್ತಿದೆ. ಇದು ಘೋರ ದುರಂತ.

ಸ್ನೇಹಿತ್ರೆ ಕಿವಿ ಕೊಟ್ಟು ಕೇಳಿ. ಮೈದಾ ತುಂಬಾ ಮೃದುವಾಗಲು ಅದಕ್ಕೆ ಅಲೆಕ್ಸಾನ್ ಅನ್ನೋ ಕೆಮಿಕಲ್‌ ಬಳಸ್ತಾರೆ. ಈ ಕೆಮಿಕಲ್ ಲ್ಯಾಬ್‌ಗಳಲ್ಲಿ ಇಲಿಗಳಿಗೆ ಡಯಾಬಿಟೀಸ್(Diabities) ಬರಲು ಬಳಸ್ತಾರೆ.

ಇದೇ ಅಲಕ್ಸಾನ್‌ ಕೆಮಿಕಲ್‌ ಅನ್ನು ನಾವು ನಿತ್ಯ ಸೇವಿಸೋ ಮೈದಾಕ್ಕೆ ಹಾಕ್ತಾರೆ ಅಂದ್ರೆ ನಾವು ಸರಳವಾಗಿ ಅರ್ಥ ಮಾಡಿಕೊಳ್ಳಬೇಕು. ಮೈದಾ ತಿನ್ನೋದು ಮತ್ತು ಡಯಾಬಿಟೀಸ್‌ಗೆ ಆಹ್ವಾನ ಕೊಡೋದು ಎರಡೂ ಒಂದೇ ಅಂತ.

ದೇಹಕ್ಕಿಲ್ಲ ಮೈದಾ ಕರಗಿಸೋ ಶಕ್ತಿ : ಶಾಕಿಂಗ್‌ ವಿಚಾರ ಅಂದ್ರೆ ನಮ್ಮ ದೇಹಕ್ಕೆ ಈ ಮೈದಾವನ್ನು ಕರಗಿಸೋ ಶಕ್ತಿಯೇ ಇಲ್ಲ. ಬೇಕರಿಯಲ್ಲಿ ತಯಾರಾಗುವ ಹೆಚ್ಚಿನ ಎಲ್ಲಾ ಐಟಮ್ ಗಳಿಗೆ ಈ ಮೈದಾ ಬೇಕೇ ಬೇಕು.

ಅದು ಬ್ರೆಡ್, ಎಗ್ ಪಪ್ಸ್ , ಎಗ್ ರೋಲ್, ಕೇಕ್‌, ಬರ್ಗರ್‌ ಹೀಗೆ ಎಲ್ಲವೂ ಈ ವಿಷಕಾರಿ ಮೈದಾನದಿಂದಲೇ ತಯಾರಿಸಲಾಗುತ್ತದೆ.

https://youtu.be/uIK8oV-Tg5k ಯಾವುದೇ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ

ಇದು ನಮ್ಮ ದೇಹದೊಳಗೆ ಜೀರ್ಣವಾಗುವುದು ಬಹಳ ಕಷ್ಟ. ಸಂಶೋಧನೆ ಹೇಳುವ ಪ್ರಕಾರ ಮನುಷ್ಯನ ಜೀರ್ಣಕ್ರಿಯೆಗೆ ಈ ಮೈದಾ ಹಿಟ್ಟನ್ನು ಕರಗಿಸುವ ಶಕ್ತಿಯೇ ಇಲ್ಲ.

ಇದು ಹೊಟ್ಟೆಯಲ್ಲಿ ಕರಗದೆ ನಮ್ಮ ದೇಹದೊಳಗೆ ಹಾಗೇ ಉಳಿದುಬಿಡುತ್ತದೆ. ಅಷ್ಟೇ ಅಲ್ಲ ಈ ಮೈದಾ ಹಿಟ್ಟು ನಮ್ಮ ಜಠರದೊಳಗೆ ಸೇರಿ ಹಲವಾರು ಇನ್ಫೆಕ್ಷನ್ ಗಳಿಗೆ ಕಾರಣವಾಗಬಹುದು.

ನಮ್ಮ ಜಠರದೊಳಗೆ ಜಂತುಗಳು ಬೆಳೆದು ಜಠರದ ಆರೋಗ್ಯವನ್ನು ಹಾಳುಮಾಡುತ್ತವೆ. ಇನ್ನೂ ಹೊಟ್ಟೆ ಒಳಗೆ ಹಲವಾರು ಬ್ಯಾಕ್ಟೀರಿಯಾ ಗಳನ್ನು ಸೃಷ್ಟಿಸಿ ಹಲವಾರು ಕಾಯಿಲೆಗಳಿಗೆ ನಾಂದಿ ಹಾಡುತ್ತದೆ.

ಮೈದಾ ತಿಂದ್ರೆ ನಾನಾ ರೋಗ ಗ್ಯಾರಂಟಿ : ಈ ವಿಷಕಾರಿ ಮೈದಾನದಿಂದ ನಮಗೆ ಹೊಟ್ಟೆನೋವು, ಹಾರ್ಟ್ಅಟ್ಯಾಕ್, ಸ್ತ್ರೀಯರಿಗೆ ಬ್ರೆಸ್ಟ್ ಕ್ಯಾನ್ಸರ್ ಕೂಡ ಕಾಡಬಹುದು.

ಇನ್ನೂ ಬೊಜ್ಜು, ಡಯಾಬಿಟಿಸ್ , ರಕ್ತದೊತ್ತಡ ಕಾಯಿಲೆಗಳು ಸರ್ವೇಸಾಮಾನ್ಯ. ಇನ್ನೂ ಅನೇಕರಿಗೆ ಕಾಡುವ ಸರ್ವೇಸಾಮಾನ್ಯ ತೊಂದರೆಯೆಂದರೆ ಅದು ಮಲಬದ್ಧತೆ.

ಇದಕ್ಕೆ ಕಾರಣ ಅವರು ಸೇವಿಸುವ ಮೈದಾನದಲ್ಲಿನ ಗ್ಲುಟಾಮಿನ್ ಅಂಶ. ಈ ಗ್ಲುಟಮಿನ್ ನಮ್ಮ ದೇಹದೊಳಗಿನ ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ.

ವರದಿಯ ಪ್ರಕಾರ 95% ರಷ್ಟು ಪೋಷಕಾಂಶಗಳು ಮೈದಾದಿಂದ ನಾಶವಾಗುತ್ತವೆ. ಕೊನೆಗೆ ಇದರಲ್ಲಿ ಉಳಿಯುವುದು ಕೇವಲ ವಿಷತುಂಬಿದ ಕೆಮಿಕಲ್.

ಇದನ್ನೂ ಓದಿ : https://vijayatimes.com/chethan-slams-aravind-kejrival/

ಇನ್ನೂ ಮೈದಾದೊಳಗೆ ಇರುವ ಗ್ಲಯಡಿನ್ ದೇಹದೊಳಗೆ ಸೇರುವುದರಿಂದ ಮೆದುಳು ಕಡಿಮೆ ಕೆಲಸ ಮಾಡಲು ಆರಂಭಿಸುತ್ತದೆ. ಇನ್ನೂ ಟ್ರೈಗ್ಲಿಸರೈಡ್ ನಮ್ಮ ಹೊಟ್ಟೆಯನ್ನು ಕೆಡಿಸುತ್ತವೆ.

ಇನ್ನೂ ಮೈದಾಗೆ ಬಣ್ಣ ತರಲು ಉಪಯೋಗಿಸುವ ಬೆನ್ಜೈಲ್ ಬೆನ್ಜೋಯಿಕ್ ಪೆರೋಕ್ಸೈಡ್ ನಮ್ಮ ದೇಹಕ್ಕೆ ಬಹಳ ಡೇಂಜರ್.

ಇದರಿಂದ ಡಯಾಬಿಟಿಸ್, ಹೃದಯ ಸಂಬಂಧಿತ ಕಾಯಿಲೆ, ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ.

ಭಾರತದಲ್ಲಿ ಮೈದಾ ಬ್ಯಾನ್‌ ಮಾಡಿ : ಹೀಗೆ ಒಂದಾ ಎರಡಾ ಪಟ್ಟಿ ಮಾಡುತ್ತಾ ಹೋದ್ರೆ ಈ ಮೈದಾದಿಂದ ಲಾಭಕ್ಕಿಂತ ಅಪಾಯವೇ ಹೆಚ್ಚು.

ಆದ್ರೆ ನಮ್ಮ ಸರ್ಕಾರಗಳು ಮೈದಾ ಬ್ಯಾನ್‌ ಮಾಡುವ ಗೋಜಿಗೇ ಹೋಗುತ್ತಿಲ್ಲ. ಕನಿಷ್ಟ ಪಕ್ಷ ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿಲ್ಲ.

ಸರ್ಕಾರಗಳು ಜನರ ಆರೋಗ್ಯದ ಬಗ್ಗೆ ಯೋಚಿಸದೆ ವಿಷವುಣಿಸುತ್ತಲೇ ಇದೆ. ಮೈದಾ ನಂಬಿರುವ ಆಹಾರ ಉದ್ಯಮಗಳ ಅನುಕೂಲಕ್ಕೆ ಜನರ ಆರೋಗ್ಯವನ್ನು ಬಲಿ ಕೊಡಲಾಗುತ್ತೆ.

ಹಣದ ಮುಂದೆ ಜನರ ಆರೋಗ್ಯ ಗೌಣವಾಗುತ್ತಿರುವುದು ಸೋಜಿಗವೇ ಸರಿ.

ಇದನ್ನೂ ಓದಿ : https://vijayatimes.com/if-i-become-cm/

ಸರ್ಕಾರಕ್ಕೆ ಜನ ಪ್ರಾಣಕ್ಕಿಂತ ಉದ್ಯಮಿಗಳ ಲಾಭವೇ ಮುಖ್ಯ ಆಗಿರೋದ್ರಿಂದ ಸ್ನೇಹಿತ್ರೆ ನೀವು ಎಚ್ಚೆತ್ತುಕೊಳ್ಳಿ. ಮೈದಾದಿಂದ ಮಾಡಿದ ಬೇಕರಿ ಐಟಂಗಳಿಗೆ, ಪಿಜ್ಞಾ, ಬರ್ಗರ್‌ಗೆ ಗುಡ್‌ ಬೈ ಅನ್ನಿ. ಅದ್ರಲ್ಲೂ ಮಕ್ಕಳಿಗೆ ಮೈದಾದ ಬಿಸ್ಕತ್ತಿನಿಂದ ಹಿಡಿದು ನೂಡಲ್ಸ್ ತಿನ್ನಿಸೋ ಮುನ್ನ ನೂರು ಬಾರಿ ಯೋಚಿಸಿ.
Exit mobile version