20 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಭಾರೀ ಇಳಿಕೆ: 9 ಜಿಲ್ಲೆಗಳಲ್ಲಿ ಸಾಧಾರಣ ಕುಸಿತ ದಾಖಲು

Mangalore: ರಾಜ್ಯದಲ್ಲಿ 1000 ಪುರುಷರಿಗೆ ಎಷ್ಟು ಮಹಿಳೆಯರು ಎನ್ನುವ ಲಿಂಗಾನುಪಾತ (decrease in sex ratio) ಪ್ರತೀವರ್ಷ ಮಾಡಲಾಗುತ್ತಿದ್ದು, ಈ ಬಾರಿ 20 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ

ಭಾರೀ ವ್ಯತ್ಯಾಸ ಕಂಡುಬಂದಿದೆ. ಕಲಬುರ್ಗಿ, ಬೀದರ್, ಚಿಕ್ಕಬಳ್ಳಾಪುರ,ಬಾಗಲಕೋಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಇದಕ್ಕೆ ಜನಸಂಖ್ಯೆಯ ವಲಸೆ ಕಾರಣ ಎನ್ನುವುದು ಅಧಿಕಾರಿಗಳ ವಾದವಾಗಿದೆ.

ಜನಗಣತಿ ಆಧಾರದಲ್ಲಿ ಈ ಹಿಂದೆ ನಡೆಯುತ್ತಿದ್ದ ಲೆಕ್ಕಾಚಾರಗಳು ಈಗ ವರ್ಷಕ್ಕೊಂದು ಬಾರಿ ನಡೆಯುತ್ತಿರುವುದರಿಂದ ಸರ್ಕಾರ ಇದಕ್ಕಾಗಿ ಇ-ಜನ್ಮ ಎಂಬ ಪೋರ್ಟಲ್‌ನಲ್ಲಿ (Portal)

ಹುಟ್ಟು-ಸಾವಿನ ಲೆಕ್ಕಾಚಾರಗಳನ್ನು ದಾಖಲು ಮಾಡುತ್ತಿದ್ದು,ಇದರ ಆಧಾರದಲ್ಲಿ ಸಾವಿರ ಪುರುಷರಿಗೆ ಎಷ್ಟು ಮಹಿಳೆಯರು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಮತ್ತು ಈ ಬಾರಿಯ

ಲೆಕ್ಕಾಚಾರದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಬಹಳಷ್ಟು (decrease in sex ratio) ವ್ಯತ್ಯಾಸ ಕಾಣಿಸಿಕೊಂಡಿದೆ.

ರಾಜ್ಯದ ಬಾಗಲಕೋಟೆ,ಚಿಕ್ಕಬಳ್ಳಾಪು (Chikkaballapur) ,ಕಲಬುರಗಿ ಹಾಗೂ ಬೀದರ್‌ (Bidar) ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಲಿಂಗಾನುಪಾತದ ಪ್ರಮಾಣದಲ್ಲಿ ಬಹಳಷ್ಟು

ಕುಸಿತ ಕಂಡಿದೆ ಈ ರೀತಿಯ ಪರಿಸ್ಥಿತಿಗೆ ಡಯಾಗ್ನೋಸ್ಟಿಕ್‌, ಸ್ಕ್ಯಾ‌ನಿಂಗ್‌ ಸೆಂಟರ್‌ಗಳಲ್ಲಿ ಲಿಂಗ ಪತ್ತೆ ಪರೀಕ್ಷೆ ಜೊತೆಗೆ ಜನಸಂಖ್ಯೆಯ ವಲಸೆ ಹೋಗುವುದು ಇಂತಹ ಲಿಂಗಾನುಪಾತದಲ್ಲಿ ಕುಸಿತ

ಕಾಣಲು ಕಾರಣ. ಈ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

2022ರ ಪ್ರಕಾರ ರಾಜ್ಯದಲ್ಲಿ ಇಷ್ಟೊಂದು ಸ್ಕ್ಯಾ‌ನಿಂಗ್‌ ಸೆಂಟರ್‌ಗಳ ಪೈಕಿ ಇಲಾಖೆಯ ತಪಾಸಣೆ ತಂಡ ಶೇಕಡಾ14ರಷ್ಟು ಸೆಂಟರ್‌ಗಳಿಗೆ ಮಾತ್ರ ಭೇಟಿ ನೀಡಿದ್ದು, ಉಳಿದ ಸ್ಕ್ಯಾ‌ನಿಂಗ್‌ ಸೆಂಟರ್‌ಗಳಿಗೆ

ಭೇಟಿ ನೀಡಲು ಸಾಧ್ಯವಾಗಲಿಲ್ಲ ಅಲ್ಲದೆ ಆರೋಗ್ಯ ಇಲಾಖೆ ಮೂಲಗಳು ರಾಜ್ಯದಲ್ಲಿ ಈಗಾಗಲೇ 3,092 ಸ್ಕ್ಯಾ‌ನಿಂಗ್‌ ಸೆಂಟರ್‌ಗಳಿದ್ದರು ಮತ್ತೆ ಒಂದು ಸಾವಿರದಷ್ಟು ಹೊಸ ಸ್ಕ್ಯಾ‌ನಿಂಗ್‌ ಸೆಂಟರ್‌

(Scanning Center) ಆರಂಭಿಸಲು ಅರ್ಜಿಗಳು ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿವೆ.

ಲಿಂಗಾನುಪಾತ ಕುಸಿತದ ಸಂಖ್ಯೆ
ಬೀದರ್‌: 941(2001), 942(2011), 921(2021), 898(2022)
ಚಿಕ್ಕಬಳ್ಳಾಪುರ: 952(2001), 953(2011), 967(2021), 868(2022)
ಕಲಬುರಗಿ: 931(2001), 943(2011), 954(2021), 888(2022)
ಬಾಗಲಕೋಟೆ: 940(2001), 935(2011), 926(2021), 886(2022)

ಭಾಗ್ಯಲಕ್ಷ್ಮಿ ಯೋಜನೆ ಕಾರಣ
ರಾಜ್ಯ ಸರ್ಕಾರ ಘೋಷಣೆ ಮಾಡಿದ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ದಂಪತಿಗಳ ಮೊದಲ ಹೆಣ್ಣು ಮಗುವಿಗೆ ಸಿಗುತ್ತಿದ್ದ ಆರ್ಥಿಕ ಸಹಾಯ ಜೊತೆಗೆ ಕಟ್ಟುನಿಟ್ಟಿನ ಜನನ ಪೂರ್ವ ಲಿಂಗ ನಿರ್ಣಯ

ನಿರ್ಬಂಧ ಮತ್ತು ದುರ್ಬಳಕೆ ತಡೆ ವಿಧೇಯಕ ಜಾರಿಗೊಳಿಸಿದ್ದರಿಂದ ಈ ರೀತಿಯ ಬೆಳವಣಿಗೆ ದಾಖಲಾಗಲು ಸಾಧ್ಯವಾಯಿತು ಎನ್ನುವುದು ಆರೋಗ್ಯ ಇಲಾಖೆ ಹೇಳುವ ಮಾಹಿತಿ.

ಪ್ರತಿ ಮೂರು ತಿಂಗಳಿಗೊಮ್ಮೆ ಸ್ಕ್ಯಾ‌ನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡುವ ಸೂಚನೆ ಮತ್ತು ಲಿಂಗಾನುಪಾತ ವಿಚಾರದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಕುಸಿತ ಕಂಡಿರುವ ಕುರಿತು ಮುಖ್ಯಮಂತ್ರಿಗಳು

ಸಭೆ ಕರೆದು ಈ ಕುರಿತು ಇರುವ ಕಾಯಿದೆ ಪ್ರಕಾರ ಕಟ್ಟುನಿಟ್ಟಿನ ಕ್ರಮಕ್ಕೂ ಮುಂದಾಗುತ್ತೇವೆ ಎಂದು ಆರೋಗ್ಯ ಇಲಾಖೆ ಕಮಿಷನರ್‌ ಡಿ.ರಣ್‌ದೀಪ್‌ (D. Randeep) ಅವರು ಪತ್ರಿಕಾ

ಪತ್ರಿಕಾಗೋಷ್ಠಿಅವರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version