ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮಗಳಾಗಬಾರದು!

Railway coaches

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ್’ ಯೋಜನೆ(Agnipath Yojana) ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಈ ಯೋಜನೆ ಜಾರಿಯಾದರೆ ಯುವಕರ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆದರೆ ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮಗಳಾಗಬಾರದು ಎಂಬ ಸಾಮಾನ್ಯ ಸಂಗತಿಯನ್ನು ವಿಪಕ್ಷಗಳು ಪ್ರಜ್ಞಾಪೂರ್ವಕವಾಗಿ ಮರೆಮಾಚುತ್ತಿವೆ.

‘ಅಗ್ನಿಪಥ್’ ಯೋಜನೆ ಸೇನೆಯನ್ನು ತ್ವರಿತವಾಗಿ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮಹತ್ವದ ಕ್ರಮವಾಗಿದೆ. ಕಾಂಗ್ರೆಸ್ ನಾಯಕ(Congress Leader) ಮನೀಶ್ ತಿವಾರಿ(Manish Tiwari) ಅವರು ಹೇಳಿದಂತೆ, “ಸದ್ಯದ ಪರಿಸ್ಥಿತಿಯಲ್ಲಿ ದೇಶದ ಸಶಸ್ತ್ರ ಪಡೆಗಳಿಗೆ, ತಂತ್ರಜ್ಞಾನ ಮತ್ತು ಆಧುನಿಕ ತಾಂತ್ರಿಕ ಶಿಕ್ಷಣದ ಅರಿವಿರುವ ಯುವ ಸಶಸ್ತ್ರ ಪಡೆಯ ಅಗತ್ಯವಿದೆ. ಸೇನೆಯ ಆಧುನೀಕರಣಕ್ಕೆ ತಂತ್ರಜ್ಞಾನ ಅರಿವಿರುವ ಯುವಪಡೆ ಬೇಕಿದೆ. ಹೀಗಾಗಿ ಈ ಯೋಜನೆ ಮೂಲಕ ತಂತ್ರಜ್ಞಾನ ಅರಿವಿರುವ ಯುವಪಡೆ ಸೇನೆಗೆ ಬಲ ನೀಡಲಿದೆ” ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.


ದೇಶದ ಸಶಸ್ತ್ರ ಪಡೆಗಳು ಅತಿಹೆಚ್ಚು ಉದ್ಯೋಗ ನೀಡುವ ಕೇಂದ್ರಗಳಾಗಬಾರದು. ಇಲ್ಲಿ ಉದ್ಯೋಗಕ್ಕಿಂತ ಸೇನೆಗೆ ಬಲ ನೀಡುವ ಯುವಕರ ಪಡೆ ಮುಖ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ಸೇನೆ ‘ಟೂ ಫ್ರಂಟ್ ವಾರ್’ಗೆ ಸಿದ್ದವಾಗಬೇಕಿದೆ. ಚೀನಾ(China) ಮತ್ತು ಪಾಕಿಸ್ತಾನ(Pakistan) ಎಂದಿಗೂ ಭಾರತದ ಭದ್ರತೆಗೆ ಬಹುದೊಡ್ಡ ಬೆದರಿಕೆಯಾಗಿವೆ. ಹೀಗಾಗಿ ಭಾರತೀಯ ಸಶಸ್ತ್ರ ಪಡೆಗಳು ತಾಂತ್ರಿಕವಾಗಿ ಹೆಚ್ಚು ಪರಿಣಿತಿ ಹೊಂದಬೇಕಾದ ಅಗತ್ಯವಿದೆ. ಆದರೆ ಸೇನೆಯಲ್ಲಿ ಹೆಚ್ಚಿನ ಪೂರ್ಣಾವಧಿ ನೇಮಕಾತಿ ಸರ್ಕಾರಕ್ಕೆ ಬಹುದೊಡ್ಡ ಹೊರೆಯಾಗಲಿವೆ.

ಹೀಗಾಗಿ ಅಲ್ಪಾವಧಿ ನಿಪುಣ ಯುವಪಡೆಯೊಂದು ಸದಾ ಸೇನೆಗೆ ಬೆಂಬಲವಾಗಿ ರೂಪಿಸುವ ನಿಟ್ಟಿನಲ್ಲಿ ‘ಅಗ್ನಿಪಥ್’ ಯೋಜನೆ ಮಹತ್ವದ ಹೆಜ್ಜೆಯಾಗಿದೆ.

Exit mobile version