ಸಿಎಂ ಹುದ್ದೆಗೆ ಕೇಜ್ರಿವಾಲ್ ರಾಜೀನಾಮೆ ಇಲ್ಲ: ಜೈಲಿನಿಂದಲೇ ಆಡಳಿತ ನಡೆಸಲು ನಿರ್ಧಾರ..!

New Delhi: ದೆಹಲಿಯಲ್ಲಿ ಭಾರೀ ಸದ್ದು ಮಾಡಿದ್ದ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ (Delhi CM Arrested) ಸಿಎಂ ಹಾಗೂ ಆಪ್ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ

ಬಂಧಿಸಿದೆ. ಸಾಕಷ್ಟು ಬಾರಿ ಸಮನ್ಸ್ ನೀಡಿದರೂ, ವಿಚಾರಣೆಗೆ ಹಾಜರಾಗದ ಹಿನ್ನಲೇ, ದೆಹಲಿ ಹೈಕೋರ್ಟ್ ಅರವಿಂದ ಕೇಜ್ರಿವಾಲ್ ಅವರಿಗೆ ಇಡಿ ಬಂಧನದಿಂದ ರಕ್ಷಣೆ ನೀಡಿಲು ನಿರಾಕರಿಸಿತ್ತು. ಹೀಗಾಗಿ ಇ.ಡಿ

ಅಧಿಕಾರಿಗಳ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರ ನಿವಾಸಕ್ಕೆ ತೆರಳಿ ಶೋಧ (Delhi CM Arrested) ಕಾರ್ಯ ನಡೆಸಿ, ಅವರನ್ನು ಬಂಧಿಸಿದ್ದಾರೆ.

ಇನ್ನು ಇಡಿ ಅಧಿಕಾರಿಗಳ ವಶದಲ್ಲಿರುವ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೇ ಜೈಲಿನಿಂದಲೇ (Jail) ಆಡಳಿತ ನಿರ್ಧರಿಸಿದ್ದಾರೆ ಎಂದು ಆಪ್ ಪಕ್ಷ ಹೇಳಿದೆ. ಈ ಕುರಿತು

ಆಪ್ ಪಕ್ಷದ ನಾಯಕಿ ಅತಿಶಿ ಪ್ರತಿಕ್ರಿಯಿಸಿ, ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಅಗತ್ಯಬಿದ್ದರೆ ಜೈಲಿನಿಂದಲೇ ಸರ್ಕಾರ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ.

ಜೈಲಿನಿಂದ ಆಡಳಿತ್ಯ ಸಾಧ್ಯವೆ?
ಜೈಲಿನಿಂದ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುವುದನ್ನು ತಡೆಯಲು ನಮ್ಮ ಸಂವಿಧಾನದಲ್ಲಿ ಯಾವುದೇ ಕಾನೂನಿಲ್ಲ. ಸದ್ಯ ಅರವಿಂದ ಕೇಜ್ರಿವಾಲ್ ಕೇವಲ ಆರೋಪಿಯಾಗಿದ್ದು, ಒಂದೊಮ್ಮೆ ಅವರು,

ಅಪರಾಧಿ ಎಂದು ಸಾಭೀತಾದರೆ, ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ. ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದರೆ ಮಾತ್ರ ಅಧಿಕಾರ ಕಳೆದುಕೊಳ್ಳುತ್ತಾರೆ.

ಈ ಹಿಂದೆ ರಾಜೀನಾಮೆ ನೀಡಿದ್ದ ಮುಖ್ಯಮಂತ್ರಿಗಳು:
ಅಧಿಕಾರದಲ್ಲಿ ಇರುವಾಗಲೇ ಮುಖ್ಯಮಂತ್ರಿಗಳನ್ನು ಇಡಿ, ಸಿಬಿಐ (ED, CBI) ಬಂಧಿಸುವುದು ಭಾರತದಲ್ಲಿ ಹೊಸದೆನಲ್ಲ. ಈ ಹಿಂದೆ ಹಲವು ಮುಖ್ಯಮಂತ್ರಿಗಳನ್ನು ಬಂಧನ ಮಾಡಲಾಗಿತ್ತು. ಆದರೆ

ಅವರೆಲ್ಲರೂ ಬಂಧನಕ್ಕೂ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೆ ಒಳಗಾದ ಮೊದಲ ನಾಯಕ ಎಂಬ ಅಪಕೀರ್ತಿಗೆ ಅರವಿಂದ

ಕೇಜ್ರಿವಾಲ್ ಪಾತ್ರರಾಗಿದ್ದಾರೆ.

ಚಂದ್ರಬಾಬು ನಾಯ್ಡು(ಆಂಧ್ರಪ್ರದೇಶ), ಯಡಿಯೂರಪ್ಪ (Yadiyurappa) (ಕರ್ನಾಟಕ), ಮಧು ಕೋಡಾ(ಜಾರ್ಖಂಡ್), ಚರಣ್ ಸಿಂಗ್(ಉತ್ತರ ಪ್ರದೇಶ)ಶಿಬು ಜಯಲಲಿತಾ(ತಮಿಳಿನಾಡು), ಲಾಲು ಪ್ರಸಾದ್

ಯಾದವ್(ಬಿಹಾರ), ಹೇಮಂತ್ ಸೊರೇನ್(ಜಾರ್ಖಂಡ್), ಓಂ ಪ್ರಕಾಶ್ ಚೌತಾಲಾ(ಹರ್ಯಾಣ), ಸೊರೇನ್(ಜಾರ್ಖಂಡ್), ಕರುಣಾನಿಧಿ (Karuna Nidhi)(ತಮಿಳುನಾಡು), ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ

ನೀಡಿದ ಬಳಿಕ ಬಂಧನಕ್ಕೆ ಒಳಗಾಗಿದ್ದರು.

ಇದನ್ನು ಓದಿ : ಟಿಕೇಟ್ ಪಡೆಯದೇ ರೈಲ್ವೇ ಪ್ರಯಾಣ ಮಾಡ್ತೀರಾ? ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ.

Exit mobile version