ಪತಿ ಲೈಂಗಿಕ ಕ್ರಿಯೆಗೆ ಪತ್ನಿಯನ್ನು ಒತ್ತಾಯಿಸಿದರೆ ಅದು ಅತ್ಯಾಚಾರವೇ? : ದೆಹಲಿ ಹೈಕೋರ್ಟ್ ನ್ಯಾಯಾಧೀಶರು!

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವ ವಿಷಯದ ಬಗ್ಗೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ. ಹರಿ ಶಂಕರ್(C HariShankar) ಅವರ ದ್ವಿಸದಸ್ಯ ಪೀಠವು ಬುಧವಾರ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಪರವಾಗಿ ದೆಹಲಿ ಹೈಕೋರ್ಟ್‌ನ(Dehi Highcourt) ನ್ಯಾಯಮೂರ್ತಿ ರಾಜೀವ್ ಶಕ್ಧರ್(Rajeev Shakdar) ತೀರ್ಪು(Verdict) ನೀಡಿದರೆ, ನ್ಯಾಯಮೂರ್ತಿ ಹರಿಶಂಕರ್ ಅವರು ತಮ್ಮ ಪತ್ನಿಯರೊಂದಿಗೆ ಸಮ್ಮತಿಯಿಲ್ಲದ ಲೈಂಗಿಕ ಸಂಭೋಗಕ್ಕಾಗಿ ಕಾನೂನು ಕ್ರಮ ಜರುಗಿಸದಂತೆ ಪತಿಗಳಿಗೆ ರಕ್ಷಣೆ ನೀಡುವ ಕಾನೂನಿನ ವಿನಾಯಿತಿಯನ್ನು ಅಸಾಂವಿಧಾನಿಕವೆಂದು ಪರಿಗಣಿಸಲು ನಿರಾಕರಿಸಿದರು.

ಆದರೆ, ತೀರ್ಪು ನೀಡುವಾಗ ಅವರು ಮಾಡಿದ ಅವಲೋಕನವೊಂದು ಗದ್ದಲ ಎಬ್ಬಿಸಿದೆ. ನ್ಯಾಯಮೂರ್ತಿ ಹರಿ ಶಂಕರ್ ಅವರು, “ಒಬ್ಬ ಪತಿಯು ತನ್ನ ಹೆಂಡತಿಯನ್ನು ತನ್ನೊಂದಿಗೆ ಸಂಭೋಗಕ್ಕೆ ಒಲವು ತೋರದಿದ್ದರೂ, ಆಕೆಯನ್ನು ತನ್ನೊಂದಿಗೆ ಸಂಭೋಗಿಸಲು ಒತ್ತಾಯಿಸಬಹುದು. ಆದ್ರೆ, ಆಕೆ ಒಪ್ಪದಿದ್ದರೇ ಅದು ಅತ್ಯಾಚಾರವೇ ಎಂದು ಪ್ರಶ್ನಿಸಿದ್ದಾರೆ. ಈ ವೀಕ್ಷಣೆಯು ಗದ್ದಲಕ್ಕೆ ಕಾರಣವಾಗಿದ್ದು, ರಾಜಕಾರಣಿಗಳು ಸೇರಿದಂತೆ ಹಲವರು ಈ ಹೇಳಿಕೆಗಳನ್ನು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಹೌದು, ಹೆಚ್ಚಿನ ಮಹಿಳೆಯರಿಗೆ ಇದು ತೊಂದರೆಯೇ! ಗೌರವಾನ್ವಿತ ನ್ಯಾಯಾಧೀಶರೇ, ಅಪರಿಚಿತರು ಅಥವಾ ಪತಿ ಕೂಡ ಮಹಿಳೆ ಅಥವಾ ಅವರ ಹೆಂಡತಿಯ ಮೇಲೆ ಬಲವಂತಪಡಿಸುವುದು ಅತ್ಯಾಚಾರವೇ ಎಂದು ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಸುತ್ತಲಿರುವ ಮಹಿಳೆಯರನ್ನು ಈ ಬಗ್ಗೆ ಕೇಳಿ ಅವರೇ ಉತ್ತರಿಸುತ್ತಾರೆ ಎಂದು ಹೇಳಿದರು.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಮಾಡಲು ನಿರಾಕರಿಸಿದ ನ್ಯಾಯಮೂರ್ತಿ ಹರಿಶಂಕರ್ ಅವರು ನೀಡಿದ ವಿಭಜಿತ ತೀರ್ಪನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಪತಿ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಆಕೆಯ ಒಪ್ಪಿಗೆ ಇಲ್ಲದೆ ಬಲವಂತ ಪಡಿಸಿದರೆ ಅದು ಅತ್ಯಾಚಾರಕ್ಕೆ ಸಮ ಎಂದು ವಾದಿಸಿದ್ದಾರೆ.

Exit mobile version