ರೈಲಿನಲ್ಲಿ(Train) ಪ್ರಯಾಣಿಸುವ ಪ್ರಯಾಣಿಕರ(Passengers) ಅನುಕೂಲಕ್ಕಾಗಿ ಭಾರತೀಯ ರೈಲ್ವೇಯ ಉತ್ತರ ರೈಲ್ವೆ(Northern Railways) ವಲಯವು ಮತ್ತೊಂದು ವಿನೂತನ ಹೆಜ್ಜೆಯನ್ನು ಇಟ್ಟಿದೆ.

ಉತ್ತರ ರೈಲ್ವೆ ವಲಯದ ಲಕ್ನೋ(Luknow) ವಿಭಾಗವು ವಿಶೇಷ ವ್ಯವಸ್ಥೆಯನ್ನು ಮಾಡಿದ್ದು, ವಿಶೇಷವಾಗಿ ತಾಯಿ ಮತ್ತು ಮಕ್ಕಳಿಗೆ ಲೋವರ್ ಬರ್ತ್ ಅನ್ನು ಪರಿಚಯಿಸಿದೆ. ಇಂಜಿನಿಯರಿಂಗ್ ಅದ್ಭುತವಾದ ಲಕ್ನೋ ವಿಭಾಗವು ಹೆಚ್ಚುವರಿ ದೊಡ್ಡ ಆಸನದ ಜೊತೆಗೆ ಚಿಕ್ಕ ಆಸನವನ್ನು ಸೇರಿಸಿದೆ. ಈ ನೂತನ ಯೋಜನೆಯನ್ನು ‘ಬೇಬಿ ಬರ್ತ್’(Baby Berth) ಎಂದು ಕರೆಯಲಾಗುತ್ತದೆ. ಈ ಬೇಬಿ ಬರ್ತ್ ವಿಶೇಷವಾಗಿ ಚಿಕ್ಕ ಮಕ್ಕಳಿಗಾಗಿ.
ಈ ಬರ್ತ್ ತಮ್ಮ ಮಕ್ಕಳೊಂದಿಗೆ ಹೊರಗೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿ ಎಂದು ಪರಿಚಯಿಸುತ್ತದೆ ಮತ್ತು ಹೆಚ್ಚುವರಿ ತಾಯಂದಿರು ತಮ್ಮ ಮಕ್ಕಳೊಡನೆ ಪ್ರಯಾಣಿಸುವ ವೇಳೆ ಈ ಪ್ರಯೋಜನವನ್ನು ಪಡೆಯಬಹುದಾಗಿದೆ. ಚಿಕ್ಕ ಮಗು ಮಲಗುವಾಗ ಕೆಳಗೆ ಬೀಳದಂತೆ ಆಸನದ ಪಕ್ಕದಲ್ಲಿ ಭದ್ರತಾ ಕಂಬಿ ಅಳವಡಿಸಲಾಗಿದೆ. ತಮ್ಮ ಮಗುವಿನೊಂದಿಗೆ ಪ್ರಯಾಣಿಸಲು ತಾಯಂದಿರಿಗೆ ಅನುಕೂಲವಾಗುವಂತೆ ಲಕ್ನೋ ಮೇಲ್‌ನಲ್ಲಿ ಕೋಚ್ ಸಂಖ್ಯೆ 194129/ B4, ಬರ್ತ್ ಸಂಖ್ಯೆ 12 ಮತ್ತು 60 ರಲ್ಲಿ ಬೇಬಿ ಬರ್ತ್ ಅನ್ನು ವಿನೂತನವಾಗಿ ಪರಿಚಯಿಸಿದ್ದು,
Happy Mother's Day.
— DRM Lucknow NR (@drm_lko) May 8, 2022
A baby berth has been introduced in Coach no 194129/ B4, berth no 12 & 60 in Lucknow Mail, to facilitate mothers traveling with their baby. Fitted baby seat is foldable about hinge and is secured with a stopper. @AshwiniVaishnaw @RailMinIndia @GM_NRly pic.twitter.com/w5xZFJYoy1
ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಳವಡಿಸಲಾದ ಮಗುವಿನ ಆಸನವನ್ನು ಉಪಯೋಗಿಸಲು ಬಯಸದಿದ್ದರೆ ಅದನ್ನು ಮಡಚಿ ಇಟ್ಟು ಕುಳಿತುಕೊಳ್ಳಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.