ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಾಲ್ವರ ಸಾವು

ಹೊಸದಿಲ್ಲಿ ಸೆ 24 : ಶುಕ್ರವಾರದಂದು ದೆಹಲಿಯ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ದರೋಡೆಕೋರ ಜಿತೇಂದ್ರ ಮನ್, ಅಲಿಯಾಸ್ ಜಿತೇಂದ್ರ ಗೋಗಿ ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ

ದೆಹಲಿಯ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಗ್ಯಾಂಗ್​ಸ್ಟರ್​ ಜಿತೇಂದರ್​ ಗೋಗಿ ಎದುರಾಳಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರ ತಂಡ ಕೂಡ ಗುಂಡಿನ ದಾಳಿ ನಡೆಸಿದೆ. ತಿಹಾರ್​ ಜೈಲಿನಲ್ಲಿದ್ದ ಹಲವಾರು ಕ್ರಿಮಿನಲ್​ ಪ್ರಕರಣದಲ್ಲಿ ಮೋಸ್ಟ್​ ವಾಂಟೆಡ್​ ಆಗಿದ್ದ ಜಿತೇಂದರ್​ ಗೋಗಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತು. ಈ ವೇಳೆ ಸಿನಿಮೀಯ ರೀತಿಯಲ್ಲಿ ಆತನ ಎದುರಾಳಿ ತಂಡದ ನ್ಯಾಯಾಲಯದಲ್ಲಿ ವಕೀಲರ ವೇಷ ಧರಿಸಿ ಬಂದು, ಆತನ ಮೇಲೆ ಗುಂಡು ಹಾರಿಸಿದ್ದಾರೆ

ದೆಹಲಿ ಪೊಲೀಸರ ಪ್ರಕಾರ, ದುಷ್ಕರ್ಮಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತಂದಿದ್ದ ದರೋಡೆಕೋರ ಗೋಗಿ ಮೇಲೆ ಗುಂಡು ಹಾರಿಸಿದರು. ಗೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ನಂತರ ಅವರು ಮೃತಪಟ್ಟರು. ಮೂವರು ದಾಳಿಕೋರರನ್ನು ಕೂಡ ಪೊಲೀಸರು ಹೊಡೆದುರುಳಿಸಿದ್ದಾರೆ.

ದೆಹಲಿಯ ನ್ಯಾಯಾಲಯದೊಳಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ದರೋಡೆಕೋರರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ  ವಕೀಲರ ವೇಷ ಧರಿಸಿದ ಬಂದೂಕುಧಾರಿಗಳು ನ್ಯಾಯಾಲಯದ ವಿಚಾರಣೆಗೆ ನುಗ್ಗಿ ದರೋಡೆಕೋರ ಜಿತೇಂದರ್ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದರು .

ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಕಳೆದ ವರ್ಷದಿಂದ ತಿಹಾರ್ ನಲ್ಲಿ ಜೈಲಿನಲ್ಲಿದ್ದ ಕುಖ್ಯಾತ ದರೋಡೆಕೋರ ಜಿತೇಂದರ್ ಗೋಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಇಂದು ಆತನ ವಿಚಾರಣೆಗೆ ಕರೆತಂದಾಗ ಎದುರಾಳಿ ಗ್ಯಾಂಗ್, “ಟಿಲ್ಲು ಗ್ಯಾಂಗ್” ಹೆಸರಿನಲ್ಲಿ ಆತನನ್ನು ಕೊಲ್ಲಲು ಸಂಚು ರೂಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version