ನೋಟು ಅಮಾನ್ಯೀಕರಣ ಸರಿಯಾಗಿದೆ: ಸುಪ್ರೀಂಕೋರ್ಟ್

New Delhi : ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನೋಟು ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್(Demonetisation correct Supreme court), ನೋಟು ಅಮಾನ್ಯೀಕರಣವನ್ನು (Demonetisation) ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಕುರಿತು ವಿಚಾರಣೆ ನಡೆಸಿ, ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್‌, ನೋಟು ಅಮಾನ್ಯೀಕರಣವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತಪ್ಪಾಗಿ ಬಿಂಬಿಸಲು ಸಾಧ್ಯವಿಲ್ಲ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(Demonetisation correct Supreme court) ಕೇಂದ್ರೀಯ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರೀಯ ಮಂಡಳಿ ಮತ್ತು ಕೇಂದ್ರ ಸರ್ಕಾರದ ನಡುವೆ ಆರು ತಿಂಗಳ ಕಾಲ ಈ ಕುರಿತು ಸಮಾಲೋಚನೆ ನಡೆದಿದೆ ಎಂಬ ಅಂಶವನ್ನು ನ್ಯಾಯಾಲಯವು ಗಮನಿಸಿದೆ ಎಂದು ಕೇಂದ್ರದ ನೋಟು ನಿಷೇಧ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

https://vijayatimes.com/temporary-break-to-ops-struggle/

ನ್ಯಾಯಮೂರ್ತಿ ಎಸ್.ಎ.ನಜೀರ್‌(Justice S.A Nazeer) ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠ,

4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದ್ದು, ನ್ಯಾಯಮೂರ್ತಿ ವಿ.ನಾಗರತ್ನ(Justice v Nagarathna) ಅವರನ್ನು ಹೊರತುಪಡಿಸಿ ಉಳಿದೆಲ್ಲಾ ನ್ಯಾಯಾಧೀಶರು ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ನಿರ್ಧಾರ ನ್ಯಾಯ ಸಮ್ಮತವಾಗಿದೆ ಎಂದು ತೀರ್ಪು ನೀಡಿದ್ದಾರೆ.

https://youtu.be/gRAVtWuZck8

ಆದರೆ ನ್ಯಾಯಮೂರ್ತಿ ವಿ.ನಾಗರತ್ನ ಅವರು, ನೋಟು ರದ್ದತಿಯನ್ನು ಶಾಸನದ ಮೂಲಕ ಕಾರ್ಯಗತಗೊಳಿಸಬಹುದಿತ್ತು,

ಅದನ್ನು ಸರ್ಕಾರದಿಂದ ಮಾಡಿರುವುದು ನ್ಯಾಯಸಮ್ಮತವಲ್ಲ. ಆರ್‌ಬಿಐ(RBI) ಶಿಫಾರಸಿನ ಮೇರೆಗೆ ನೋಟು ಅಮಾನ್ಯೀಕರಣಕ್ಕೆ ಹೋಲಿಸಿದರೆ, ಕೇಂದ್ರದ ಆದೇಶದ ಮೇರೆಗೆ ನೋಟು ಅಮಾನ್ಯೀಕರಣವು ಹೆಚ್ಚು ಗಂಭೀರವಾದ ವಿಷಯವಾಗಿದೆ.

ಕೇಂದ್ರ ಸರ್ಕಾರದ ಅಧಿಕಾರಗಳು ಅಗಾಧವಾಗಿದ್ದು, ಕಾರ್ಯಕಾರಿ ಆದೇಶದ ಬದಲಿಗೆ ಶಾಸನದ ಮೂಲಕ ಮಾತ್ರ ಅಧಿಕಾರ ಚಲಾಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಡಿಸೆಂಬರ್ 7 ರಂದು ಸುಪ್ರೀಂ ಕೋರ್ಟ್ 2016ರಲ್ಲಿ ಕೈಗೊಂಡ ನೋಟು ರದ್ದತಿ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗೆ ನಿರ್ದೇಶನ ನೀಡಿತ್ತು. ಇದೀಗ ಅಂತಿಮ ತೀರ್ಪು ನೀಡಿದೆ.

Exit mobile version