ಏರ್ ಇಂಡಿಯಾಗೆ ೧೦ ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ: ಕಾರಣ ಹೀಗಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಏರ್ ಇಂಡಿಯಾಗೆ (Air India) ಹತ್ತುಲಕ್ಷ ರೂ.ದಂಡವನ್ನು ವಿಧಿಸಿದ್ದು, ಡಿಜಿಸಿಎ ನಿಯಮಾವಳಿಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ಹಾಕಲಾಗಿದೆ.

ನವೆಂಬರ್​​ 3ರಂದು ಡಿಜಿಸಿಎ (DGCA) ಸಂಬಂಧಿತ ನಿಯಮಾವಳಿಗಳ ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಡಿಜಿಸಿಎ ಹೇಳಿದೆ.

ವಿಮಾನಯಾನ ಸಂಸ್ಥೆಗಳ ತಪಾಸಣೆ ನಡೆಸಿದ ನಂತರ, ಸಂಬಂಧಿತ ನಾಗರಿಕ ವಿಮಾನಯಾನ ಅಗತ್ಯತೆಯ (ಸಿಎಆರ್) ನಿಬಂಧನೆಗಳನ್ನು ಏರ್ ಇಂಡಿಯಾವು ದೆಹಲಿ, ಕೊಚ್ಚಿ ಮತ್ತು ಬೆಂಗಳೂರು (Bengaluru) ವಿಮಾನ ನಿಲ್ದಾಣಗಳಲ್ಲಿ ಅನುಸರಿಸುತ್ತಿಲ್ಲ ಎಂದು ನಿಯಂತ್ರಕರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಏರ್​​ ಇಂಡಿಯಾಕ್ಕೆ ನವೆಂಬರ್​​ 3 ರಂದು ಶೋಕಾಸ್ ನೋಟಿಸ್ (Show Cause Notice) ನೀಡಲಾಗಿದೆ.

ಈ ಶೋಕಾಸ್ ನೋಟಿಸ್​​ಗೆ ಏರ್​​ ಇಂಡಿಯಾ ಉತ್ತರ ನೀಡಿದ ಆಧಾರದ ಮೇಲೆ ಸಿಎಆರ್‌ನ (CAR) ನಿಬಂಧನೆಗಳನ್ನು ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ. ಏರ್​​ ಇಂಡಿಯಾ ವಿಮಾನಯಾನದಲ್ಲಿ ಅನೇಕ ದೋಷಗಳು ಕಂಡು ಬಂದಿದೆ.

ತಡವಾಗಿ ಬಂದ ವಿಮಾನಗಳಿಂದ ತೊಂದರೆಗೀಡಾದ ಪ್ರಯಾಣಿಕರಿಗೆ ಹೋಟೆಲ್ (Hotel) ಸೌಕರ್ಯಗಳನ್ನು ಒದಗಿಸದಿರುವುದು, ನಿಲ್ದಾಣದ ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ನೀಡದಿರುವುದು, ಇನ್ನು ಅನೇಕ ಲೋಪಗಳು ಏರ್​​​ ಇಂಡಿಯಾದಲ್ಲಿ ಕಂಡು ಬಂದಿದೆ ಎಂದು ಹೇಳಿದೆ.

ಭವ್ಯಶ್ರೀ ಆರ್ ಜೆ

Exit mobile version