ಕೇವಲ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯ ಸಿನಿಮಾಗಳನ್ನು ನಿರ್ಮಿಸಲು ಸಜ್ಜಾದ ಧೋನಿ ಎಂಟರ್‌ಟೈನ್‌ಮೆಂಟ್!

MSD

India : ಕ್ರೀಡಾಲೋಕದಲ್ಲಿ ಯಶಸ್ವಿ ಕ್ರಿಕೆಟಿಗ(Cricketer) ಎಂದು ಹೆಸರು ಗಳಿಸಿದ್ದ ಧೋನಿ, ಈ ಬಾರಿ ಬಂಡವಾಳ ಹೂಡಲು ಮುಂದಾಗಿರುವುದು ಚಿತ್ರರಂಗದಲ್ಲಿ(Film Industry). ಹೌದು, ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಈಗ ಸಿನಿಮಾರಂಗದ ಕಡೆ(Dhoni Entertainment has Started) ಮುಖ ಮಾಡಿದ್ದಾರೆ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಕ್ರಿಕೆಟ್‌ ಲೋಕದಲ್ಲಿ ತನ್ನದೆ ಆದ ದಾಖಲೆಗಳನ್ನು ಬರೆದಿರುವ ಧೋನಿ, ಕ್ರಿಕೆಟ್‌ ಜತೆಗೆ ಸಿನಿಮಾ(Cinema) ಹಾಗೂ ಕೃಷಿಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಅವರು ಹೆಚ್ಚು ಸಮಯವನ್ನು ಕಳೆಯುತ್ತಾರೆ.

ಅದರಲ್ಲೂ ಐಪಿಎಲ್‌(IPL) ಸಮಯದಲ್ಲಿ ಸೌತ್‌ ಸಿನಿಮಾಗಳಿಗೆ ಧೋನಿ ಅಭಿಮಾನಿಯಾಗಿದ್ದರು, ಅಲ್ಲದೇ ತಮಿಳಿನ ಹೀರೋಗಳಿಗೂ ಇವರು ಅಭಿಮಾನಿಯಾಗಿದ್ದರು.

ಇದನ್ನೂ ಓದಿ : https://vijayatimes.com/top-economist-pierre-olivier-gourinchas/

ಇದೀಗ, ಇದೇ ಧೋನಿ ಸದ್ದಿಲ್ಲದೆ ಸಿನಿಮಾ ನಿರ್ಮಾಣ(Dhoni Entertainment has Started) ಸಂಸ್ಥೆಯನ್ನು ತೆರೆದಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಶುರು ಮಾಡುವ ಮೂಲಕ ಇನ್ಮುಂದೆ ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಆ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಬಗೆಬಗೆಯ ಚಿತ್ರಗಳನ್ನು ಪ್ರೊಡ್ಯೂಸ್‌ ಮಾಡಲಿದ್ದಾರೆ.


ಧೋನಿ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಹೌಸ್, ಎಂ.ಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಬ್ಬರ ಒಡೆತನದಲ್ಲಿದೆ.

ಈ ಪ್ರೊಡಕ್ಷನ್ ಹೌಸ್ ಬೇರೆ ನಿರ್ಮಾಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೋರ್ ಆಫ್ ದಿ ಲಯನ್, ಬ್ಲೇಜ್ ಟು ಗ್ಲೋರಿ ಮತ್ತು ದಿ ಹಿಡನ್ ಹಿಂದೂ ವೆಬ್ ಸಿರೀಸ್ಗಳನ್ನು ನಿರ್ಮಿಸಿದೆ.

ಚಿಕ್ಕ ಬಜೆಟ್ ಸಿನಿಮಾಗಳನ್ನು ಮಾಡುತ್ತಿರುವ ಧೋನಿ, ಎಂಟರ್ಟೈನ್ ಮೆಂಟ್ ಇದೀಗ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಯಾಗಿ ಕಾಲಿವುಡ್ ಮೂಲಕ ಎಂಟ್ರಿ ಕೊಡಲು ಧೋನಿ ಎಂಟರ್‌ಟೈನ್‌ಮೆಂಟ್ ಮುಂದಾಗಿರುವುದು ವಿಶೇಷ.

https://youtu.be/NIbQmBVUfDo

ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ, ‘ಧೋನಿ ಎಂಟರ್‌ಟೈನ್‌ಮೆಂಟ್’ ಹೆಸರಿನ ಬ್ಯಾನರ್‌ ಆರಂಭಿಸಿದ್ದಾರೆ.

ಒಂದೇ ಭಾಷೆಗೆ ಸೀಮಿತವಾಗದೆ, ಹಲವು ಬಗೆಯ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ, ಅಧಿಕೃತವಾಗಿ ಅದರ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ಅಚ್ಚರಿಯ ವಿಚಾರ ಏನೆಂದರೆ, ಹಿಂದಿ ಸಿನಿಮಾಗಳಿಗೂ ಮನಸೋಲದ ಎಂಎಸ್‌, ಸೌತ್‌ನ ಮೂರು ಭಾಷೆಗಳ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ.

ಇದನ್ನೂ ಓದಿ : https://vijayatimes.com/bengaluru-police-detained-18-people/

ಧೋನಿ ಕನ್ನಡ ಹೊರತುಪಡಿಸಿ ಕೇವಲ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರ ಸಿನಿಮಾ ನಿರ್ಮಾಣ ಮಾಡಲಿದ್ದಾರಂತೆ.

ಈ ವಿಚಾರ ಕನ್ನಡಿಗರಿಗೂ ಕೊಂಚ ಬೇಸರ ತರಿಸಿದ್ದು, ನೆಟ್ಟಿಗರು ಧೋನಿಯ ಈ ನಿರ್ಧಾರವನ್ನು ಬದಲಿಸುವಂತೆ ಕೋರಿದ್ದಾರೆ.


ಈ ಹಿಂದೆ ಕಡಕ್ನಾತ್ ಕೋಳಿ ಸಾಕಾಣಿಯ ಮೂಲಕ ಗಮನ ಸೆಳೆದಿದ್ದ ಧೋನಿ ಈ ಬಾರಿ ಬಣ್ಣದ ಲೋಕದತ್ತ ಹೆಜ್ಜೆ ಹಾಕಿದ್ದಾರೆ. ಇದಲ್ಲದೆ ಧೋನಿ, ಕ್ರೀಡಾ ಅಕಾಡೆಮಿಗಳಲ್ಲೂ ಕೂಡ ಬಂಡವಾಳ ಹೂಡಿದ್ದಾರೆ. ಒಟ್ಟಿನಲ್ಲಿ ಐಪಿಎಲ್ನಲ್ಲಿ ಮಾತ್ರ ಸಕ್ರಿಯರಾಗಿರುವ ಧೋನಿ ಇದೀಗ ಇತರೆ ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.
Exit mobile version