ರೈಲಿನ ಹಾರ್ನ್​ಗಳ ಕುತೂಹಲ ಮಾಹಿತಿ: ಒಂದೊಂದು ಶಬ್ದಕ್ಕೂ ಇದೆ ಹಲವು ಅರ್ಥ

Train Horns: ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಬಹಳ ಸಹಾಯಕಾರಿಯಾಗಿರುವ ವ್ಯವಸ್ಥೆಯಲ್ಲಿ ಬಹುತೇಕ ಜನರು ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ, ರೈಲಿನ ಹಾರ್ನ್ (Train Horn) ಕೂಡ ಸಾಕಷ್ಟು ಬಾರಿ ಕೇಳಿರುತ್ತೀರಿ.. ಆದರೆ ಈ ಹಾರ್ನ್​ ಒಂದೇ ರೀತಿ ಇರುವುದಿಲ್ಲ ಮತ್ತು ಒಂದೊಂದು ಹಾರ್ನ್ ಕೂಡ ಒಂದೊಂದು ಅರ್ಥ ಇದೆ. ಹಾಗಾದರೆ ಅದು ಏನು ಅಂದು ತಿಳಿಯೋಣ..

1 ಶಾರ್ಟ್​ ಹಾರ್ನ್ (Short Horns)​: ರೈಲು ನಿಲ್ದಾಣಕ್ಕೆ ಬಂದಿದೆ ಮತ್ತು ಅದನ್ನು ಸ್ವಚ್ಛಗೊಳಿಸುವ ಸಮಯ ಎಂದರ್ಥ,
2 ಶಾರ್ಟ್​ ಹಾರ್ನ್​: ರೈಲು ಈಗ ಚಲಿಸಲು ಸಿದ್ಧವಾಗಿದೆ.

3 ಶಾರ್ಟ್​ ಹಾರ್ನ್ಸ್​: ಇದರರ್ಥ ರೈಲಿನ ಲೋಕೋಪೈಲಟ್ ಇಂಜಿನ್​ನ (Locopilot Engine) ನಿಯಂತ್ರಣವನ್ನು ಕಳೆದುಕೊಂಡಿದೆ ಮತ್ತು ಈಗ ಗಾರ್ಡ್​ ವ್ಯಾಕ್ಯೂಮ್​ ಬ್ರೇಕ್​ನೊಂದಿಗೆ ರೈಲನ್ನು ನಿಲ್ಲಿಸಬೇಕು ಎಂಬ ಅರ್ಥವನ್ನು ಕೊಡುತ್ತದೆ.

4 ಶಾರ್ಟ್​ ಹಾರ್ನ್ಸ್​: ಈ ಹಾರ್ನ್​ ಅರ್ಥ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈಗ ರೈಲು (Train) ಮುಂದೆ ಸಾಗುವುದಿಲ್ಲ.
6 ಶಾರ್ಟ್​ ಹಾರ್ನ್ಸ್​: ಲೋಕೊಪೈಲಟ್​ ಯಾವುದೇ ಅಪಾಯವನ್ನು ಗ್ರಹಿಸಿದ ಸಂದರ್ಭದಲ್ಲಿ ಈ ಹಾರ್ನ್​ ಮಾಡುತ್ತಾರೆ.

2 ಸಣ್ಣ ಮತ್ತು 1 ದೊಡ್ಡ ಹಾರ್ನ್​: ಈ ರೀತಿಯ ಹಾರ್ನ್​ ಯಾರಾದರೂ ರೈಲಿನ ಸರಪಳಿ ಎಳೆದಾಗ ಅಥವಾ ಸಿಬ್ಬಂದಿ ಒತ್ತಡ ಬ್ರೇಕ್ (Break)​ ಹಾಕಿದಾಗ ಮಾಡಲಾಗುತ್ತದೆ.
ಜಾಸ್ತಿ ಸಮಯ ಹಾರ್ನ್​ ಮಾಡುತ್ತಲೇ ಇರುವುದು: ರೈಲು ನಿರಂತರವಾಗಿ ಹಾರ್ನ್​ ಮಾಡುತ್ತಿದ್ದರೆ ಪ್ಲಾಟ್​ಫಾರ್ಮ್​ನಲ್ಲಿ (Platform) ನಿಲ್ಲುವುದಿಲ್ಲ ಎಂದರ್ಥ.

ಮಧ್ಯಂತರದಲ್ಲಿ ಎರಡು ಬಾರಿ ಹಾರ್ನ್​ ಊದುವುದು: ರೈಲು ರೈಲ್ವೆ ಕ್ರಾಸಿಂಗ್ (Railway Crossing) ಸಮೀಪಿಸಿದಾಗ ರೈಲು ಎರಡು ಬಾರಿ ಹಾರ್ನ್​ ಮಾಡುತ್ತದೆ.
ಎರಡು ಉದ್ದ ಮತ್ತು ಒಂದು ಸಣ್ಣ ಹಾರ್ನ್​: ರೈಲು ತನ್ನ ಟ್ರ್ಯಾಕ್ (Track) ಅನ್ನು ಬದಲಾಯಿಸಿದಾಗ ಈ ರೀತಿಯ ಹಾರ್ನ್​ ಮಾಡಲಾಗುತ್ತದೆ.

ಭವ್ಯಶ್ರೀ ಆರ್ ಜೆ

Exit mobile version