ಮುಂಜಾನೆ ನಿತ್ಯ ನೀವು ಜ್ಯೂಸ್‌ ಕುಡೀತೀರಾ? ಹಾಗಾದ್ರೆ ಆ ಅಭ್ಯಾಸ ಬಿಟ್ಬಿಡಿ ! ಯಾಕೆ ಅಂತ ತಜ್ಞರು ಉತ್ತರ ಕೊಡ್ತಾರೆ

Health tips : ಹಣ್ಣುಗಳ ಸೇವನೆ ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆದು ಅಂತ ನಮಗೆಲ್ಲಾ ಗೊತ್ತು. ಆದ್ರೆ ದಿನನಿತ್ಯ ಹಣ್ಣಿನ ರಸವನ್ನು(Fruit Juice) ಕುಡಿಯುವುದೂ ಕೂಡ ದೇಹಕ್ಕೆ ಒಳ್ಳೆಯದಾ? ಅಥವಾ ಅದರಿಂದ (Disadvantages of Fruit Juice) ಏನಾದರೂ ಅಡ್ಡಪರಿಣಾಮಗಳೇನಾದ್ರು ಆಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ಹುಡುಕೋಣ ಬನ್ನಿ.

ಹಣ್ಣಿನ ಕೃತಕ ರಸಗಳು, ಸೋಡಾ(Soda) ಮತ್ತು ಪ್ಯಾಕೇಜ್ ಮಾಡಿದ ಪಾನೀಯಗಳು(Packaged Juice) ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ ದೊರೆಯುವ

ಹಣ್ಣಿನ ಜ್ಯೂಸ್‌ಗಿಂತಲೂ ಹೆಚ್ಚು ಜನರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿದೆ. ಆದ್ರೆ ಇದು ದೇಹದ ಮೇಲೆ ಪೂರಕ ಪರಿಣಾಮ ಬೀರುವುದಕ್ಕಿಂತ ಇದರಿಂದ ಅಡ್ಡ ಪರಿಣಾಮಗಳೇ ಹೆಚ್ಚು.

ಆಹಾರ ಪೌಷ್ಟಿಕಾಂಶ ತಜ್ಷರು ಹೇಳುವ ಪ್ರಕಾರ ತಾಜಾ ಹಣ್ಣಿನ ರಸವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಉಂಟಾಗುವ ತೊಂದರೆಗಳ (Disadvantages of Fruit Juice) ಬಗ್ಗೆ ಅತ್ಯಂತ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅವರ ಪ್ರಕಾರ ಹಣ್ಣಿನ ರಸವನ್ನು ಕುಡಿಯುವುದರಿಂದ ಈ ಅಡ್ಡ ಪರಿಣಾಮಗಳು ಉಂಟಾಗಲಿವೆ. ಪ್ರತಿದಿನ ಒಂದು ಲೋಟ ಹಣ್ಣಿನ ರಸವನ್ನು ಕುಡಿಯುವುದು,

ಆ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುವುದು ಆರೋಗ್ಯಕರ ಮಾರ್ಗವೆಂದು ಅನೇಕರು ಅಂದುಕೊಂಡಿದ್ದಾರೆ.

ಆದ್ರೆ, ಇದು ಸುಳ್ಳು! ಹಣ್ಣಿನ ಜ್ಯೂಸಿನ ಮುಖ್ಯ ಸಮಸ್ಯೆ ಏನಂದರೆ, ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳು(Calory), ಸಕ್ಕರೆ(Sugar) ಮತ್ತು ಕಡಿಮೆ ಫೈಬರ್, ಹೆಚ್ಚಿನ ಆಮ್ಲ ಅಂಶ ಮತ್ತು ಪ್ರಮುಖ ಪೋಷಕಾಂಶಗಳ ಕೊರತೆ ಇರುತ್ತದೆ.

ತಾಜಾ ಹಣ್ಣುಗಳಲ್ಲಿ ನಾರಿನಂಶ ವಿಪುಲವಾಗಿ ಇರುತ್ತೆ. ಆದ್ರೆ ಹಣ್ಣನ್ನು ಜ್ಯೂಸ್ ಮಾಡಿದಾಗ, ನಾರಿನ ಅಂಶವನ್ನು ಕಳೆದುಕೊಳ್ಳುತ್ತೀರಿ. ಫೈಬರ್‌ ಅಂಶ ದೇಹಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶವಾಗಿರುತ್ತದೆ.

ಅದು ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ನಿಯಂತ್ರಿಸುತ್ತದೆ.

ನೀವು ಜ್ಯೂಸ್‌ ಕುಡಿಯುವುದರಿಂದ ಫೈಬರ್(Fiber) ಅನ್ನು ತೆಗೆದುಹಾಕಿ, ಕೇವಲ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಕುಡಿಯುತ್ತಿದ್ದೀರಿ.

ಅಲ್ಲದೆ ತಾಜಾ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ನಮ್ಮ ದೇಹಕ್ಕೆ ಯಾವುದೇ ತೊಂದರೆವುಂಟು ಮಾಡುವುದಿಲ್ಲ.

ಆದ್ರೆ ಹಣ್ಣಿನ ರಸ ಮಾಡುವಾಗ ನಾವು ಬಳಸುವ ಕೃತಕ ಸಕ್ಕರೆ ತಾಜಾ ಹಣ್ಣಿನ ನೈಸರ್ಗಿಕ ಗುಣಗಳನ್ನು ಕಡಿಮೆ ಮಾಡುತ್ತದೆ.

ಅಷ್ಟು ಮಾತ್ರವಲ್ಲ ಹಣ್ಣನ್ನು ನಾವು ಬಾಯಲ್ಲಿ ಜಗಿದು ತಿಂದಾಗ ನಮ್ಮ ಬಾಯಿಯಲ್ಲಿ ನಾನಾ ರಸಗಳು ಸ್ರವಿಸುತ್ತವೆ. ಈ ರಸಗಳು ನಮ್ಮ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತೆ.

ಆದ್ರೆ ಇದೇ ಹಣ್ಣನ್ನು ಜ್ಯೂಸ್‌ ಮಾಡಿ ಕುಡಿದಾಗ ಅಂಥ ಯಾವ ರಸಗಳು ನಿಮ್ಮ ಬಾಯಿಯಿಂದ ಸ್ರವಿಸಲ್ಲ. ಅದರಿಂದ ನಮಗೆ ಆಗಬಹುದಾದ ಯಾವ ಆರೋಗ್ಯಪೂರ್ಣ ಲಾಭಗಳು ಸಿಗಲ್ಲ. ಒಟ್ಟಾರೆ ಹಣ್ಣಿನ ಜ್ಯೂಸಿಗಿಂತ ಹಣ್ಣನ್ನು ತಿನ್ನೋದೇ ಒಳಿತು ಅನ್ನೋದು ತಜ್ಞರ ಅಭಿಪ್ರಾಯ.

Exit mobile version