Bengaluru : ಇಂದು ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಎಲ್ಲೆಲ್ಲೂ ಹಿಂದಿಮಯ. ಸ್ವತಃ ರಾಜ್ಯ ಸರ್ಕಾರವೇ(State Government) ಕನ್ನಡವನ್ನು ಕಡೆಗಣಿಸಿ ಹಿಂದಿಗೆ(Hindi Imposition) ಮಣೆ ಹಾಕುತ್ತಿದೆ ಎಂದು ಕಾಂಗ್ರೆಸ್ ರಾಜ್ಯಾದ್ಯಕ್ಷ(Congress state President) ಡಿ.ಕೆ.ಶಿವಕುಮಾರ್(DK Shivkumar) ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, ಕೇಂದ್ರದ ಸಹಕಾರದಲ್ಲಿ ಎಲ್ಲಾ ಸರ್ಕಾರಿ ನೌಕರಿಗಳ ಪರೀಕ್ಷೆಗಳನ್ನ ಕನ್ನಡದಲ್ಲಿ ಬರೆಯುವ ಅವಕಾಶ ಮಾಡಿಕೊಡುತ್ತೇವೆ ಎಂಬುದು ಬಿಜೆಪಿಯ ಭರವಸೆಯಾಗಿತ್ತು. ಆದರೆ ಇಂದು ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಎಲ್ಲೆಲ್ಲೂ ಹಿಂದಿಮಯ ಸ್ವತಃ ಸರ್ಕಾರವೇ ಕನ್ನಡವನ್ನು ಕಡೆಗಣಿಸಿ ಹಿಂದಿಗೆ ಮಣೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : https://vijayatimes.com/india-gate-nethaji-statue/
ಇನ್ನು ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆ(Priyank Kharghe) ಅವರ ಮಾಧ್ಯಮಗೋಷ್ಠಿ ನಡೆಸಿ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡುತ್ತೇವೆ ಎಂಬ ಭರವಸೆಯನ್ನು ಬಿಜೆಪಿ ನೀಡಿತ್ತು.

ಸ್ಮಾರ್ಟ್ ಫೋನ್ ಹೋಗಲಿ ಅನ್ನಭಾಗ್ಯದ ಅಕ್ಕಿಯನ್ನೂ ಸಮರ್ಪಕವಾಗಿ ನೀಡಲಾಗದ ಸ್ಥಿತಿಗೆ ತಲುಪಿದೆ ಸರ್ಕಾರ. ‘ದಮ್ಮು’ ಇರುವ ಮುಖ್ಯಮಂತ್ರಿಗಳೇ, ನಿಮ್ಮ ಸಮಾವೇಶದಲ್ಲಿ ಈ ವೈಫಲ್ಯಗಳಿಗೆ ಉತ್ತರ ಹೇಳಲಿಲ್ಲವೇಕೆ? ಬಿಪಿಎಲ್ ಕುಟುಂಬಕ್ಕೆ ಸ್ಮಾರ್ಟ್ ಫೋನ್ ಒಂದು ಅಭಿಲಾಷೆ.
ಇದನ್ನೂ ಓದಿ : https://vijayatimes.com/up-police-seized-whale-vomit-thiefs/
ಬಡವರ ಆಸೆಗಳ ಮೇಲೆ ರಾಜಕಾರಣ ಮಾಡಿ ಅವರಿಗೆ ಮೋಸ ಮಾಡುವ ದುರ್ಬುದ್ಧಿಯನ್ನ ಬಿಜೆಪಿ ಬಿಡೋದು ಯಾವಾಗ? ಬಿಜೆಪಿ ಸ್ನೇಹಿತರಿಗೆ ನನ್ನ ಪ್ರಶ್ನೆ : ಅಧಿಕಾರ ಪಡೆಯುಲು ಜನರಿಗೆ ಸಾವಿರಾರು ಆಶ್ವಾಸನೆ ನೀಡಿ ಮೋಸ ಮಾಡುವ ನಿಮ್ಮ ಪಕ್ಷದಲ್ಲಿ ಆತ್ಮ ಸಾಕ್ಷಿ ಕಾಡುವುದಿಲ್ಲವೇ? ಮೃತಪಟ್ಟವರು : 110, ಜಾನುವಾರ ಸಾವು : 717, ಕೃಷಿ ಪ್ಲಾಂಟೇಷನ್ ತೋಟಗಾರಿಕೆ : 6,39,276

ರಸ್ತೆ : 24,135 ಸೇತುವೆ : 1,780 ಶಾಲಾ ಕಟ್ಟಡ : 7,240 ಪಿ.ಹೆಚ್.ಸಿಗಳು : 278 ಅಂಗನವಾಡಿ ಸಮುದಾಯ ಭವನ : 4,394 ವಿದ್ಯುತ್ ಕಂಬಗಳು : 27,188 ಟ್ರಾನ್ಸ್ ಫಾರ್ಮರ್ ಗಳು : 3,016 ಇದರ ಸ್ಪಂದನೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ.