ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ

Mandya : ಮಂಡ್ಯ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕರ್ನಾಟಕ ಕಾಂಗ್ರೆಸ್ (state Congress) ಮುಖ್ಯಸ್ಥ ಡಿ.ಕೆ ಶಿವಕುಮಾರ್ (DK Sivakumar) ಅವರು ರಥೋತ್ಸವದ ಭಾಗವಾಗಿ ಜನರ ಮೇಲೆ ಹಣ (DK Sivakumar threw notes) ಎಸೆದಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


ಈ ಕುರಿತು ಸುದ್ದಿ ಸಂಸ್ಥೆ ಇಂಡಿಯಾ ಟುಡೇ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದು,

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ನಡೆದ ರ್ಯಾಲಿಯಲ್ಲಿ ಜನರ ಮೇಲೆ ಹಣ ಎಸೆದಿದ್ದಾರೆ.

ವಿಡಿಯೋದಲ್ಲಿ ಡಿ.ಕೆ ಶಿವಕುಮಾರ್ ಅವರು ಬೇವಿನಹಳ್ಳಿ ಬಳಿ ರಥೋತ್ಸವದ ವೇಳೆ ಜನರ ಮೇಲೆ ಹಣದ ನೋಟುಗಳನ್ನು ಎಸೆಯುತ್ತಿರುವ ದೃಶ್ಯ ಕಂಡುಬಂದಿದೆ.


ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಭರ್ಜರಿ ತಯಾರಿ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್,

ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಡಿ.ಕೆ ಶಿವಕುಮಾರ್ ಅವರು ಇತರ ಕಾಂಗ್ರೆಸ್ ಸದಸ್ಯರೊಂದಿಗೆ ರ್ಯಾಲಿಯನ್ನು ಮುನ್ನಡೆಸುತ್ತಿದ್ದಾಗ ರಥೋತ್ಸವವದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/three-party-competition-in-mandya/

ವೀಡಿಯೊದಲ್ಲಿ, ಡಿ.ಕೆ ಶಿವಕುಮಾರ್, ಪ್ರಜಾಧ್ವನಿ ಎಂಬ ಹೆಸರಿನ ಬಸ್‌ ಮೇಲೆ ನಿಂತಿದ್ದು, ಮೆರವಣಿಗೆಯ ಭಾಗವಾಗಿ ತೆರಳುತ್ತಿದ್ದ ವೇಳೆ ಕೈಬೀಸಿ ಕರೆಯುತ್ತಿದ್ದ ಜನರ ಮೇಲೆ ಹಣದ ನೋಟುಗಳನ್ನು (DK Sivakumar threw notes) ಎಸೆದಿದ್ದಾರೆ.

ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿದ್ದು, ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿವೆ.


ಒಕ್ಕಲಿಗರಾಗಿರುವ ಡಿ.ಕೆ ಶಿವಕುಮಾರ್ ಅವರು ಹಳೆ ಮೈಸೂರು ಅಥವಾ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಮುಖ ಮತಬ್ಯಾಂಕ್ ಆಗಿರುವ ಒಕ್ಕಲಿಗ ಸಮುದಾಯವನ್ನು ತಮ್ಮ ‘ಕೈ’ ಬಲಪಡಿಸುವಂತೆ ಈ ಹಿಂದೆ ಕರೆ ನೀಡಿದ್ದರು.

ಮಂಡ್ಯ ಜಿಲ್ಲೆಯೂ ಜೆಡಿಎಸ್ (JDS) ಭದ್ರಕೋಟೆಯಾಗಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಸ್ಥಾನಗಳನ್ನು ಪ್ರಾದೇಶಿಕ ಪಕ್ಷವು ಗೆದ್ದಿದೆ.

ಡಿ.ಕೆ ಶಿವಕುಮಾರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮೇ ತಿಂಗಳ ಚುನಾವಣೆಯ ನಂತರ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯಲ್ಲಿದ್ದಾರೆ.

ಇದರಿಂದ ಇಬ್ಬರ ನಡುವೆ ರಾಜಕೀಯ ವೈಮನಸ್ಸು ಉಂಟಾಗಲಿದೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ : https://vijayatimes.com/new-rule-from-bangalore-society/

ಭಾರತ ಚುನಾವಣಾ ಆಯೋಗವು ಇಂದು ಬೆಳಗ್ಗೆ 11.30ಕ್ಕೆ ನವದೆಹಲಿಯ (New Delhi) ವಿಜ್ಞಾನ ಭವನದ ಪ್ಲೀನರಿ ಹಾಲ್‌ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಈ ಉದ್ದೇಶಕ್ಕಾಗಿ ಚುನಾವಣಾ ಸಮಿತಿಯು ನವದೆಹಲಿಯಲ್ಲಿ ಬೆಳಿಗ್ಗೆ 11.30 ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿದೆ. ಈ ಸುತ್ತೋಲೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಮಾಧ್ಯಮಗಳ ಪ್ರಕಟಣೆಯಲ್ಲಿ ಹೊರಬಿದ್ದಿದೆ.

Exit mobile version