ಸಿಡಿ ಪ್ರಕರಣದಲ್ಲಿ ಡಿಕೆಶಿ-ಜಾರಕಿಹೊಳಿ ಜಿದ್ದಾಜಿದ್ದಿ ; ರಾಜ್ಯ ರಾಜಕೀಯದಲ್ಲಿ ಮುಂದಿನ ನಡೆಯೇನು

Bengaluru : ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌(DK Shiva Kumar) ಮತ್ತು ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ(Ramesh Jarakiholi) ನಡುವೆ ಸಿಡಿ ಸಮರ ಭುಗಿಲೆದ್ದಿದ್ದು, ಸಿಡಿ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್‌ ಅವರ ಪಾತ್ರ ಪ್ರಮುಖವಾಗಿದೆ ಎಂದು ರಮೇಶ್‌ ಜಾರಕಿಹೊಳಿ (DKshi-Jarakiholi CD case fight) ಹೇಳಿದ್ದೇ ತಡ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ.

ಇತ್ತೀಚಿಗಷ್ಟೇ ನಡೆದ ಸುದ್ದಿಗೋಷ್ಠಿಯಲ್ಲಿ ಕೆಲವು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ,

ಸತ್ಯಾಸತ್ಯತೆ ಹೊರತರಬೇಕಾದರೆ ವಿವಾದದ ಕೇಂದ್ರಬಿಂದುವಾಗಿರುವ ಮಹಿಳೆ ಹಾಗೂ ತನ್ನ ವಿರುದ್ಧ ಆರೋಪ ಮಾಡಿರುವ ಮಂಡ್ಯದ(Mandya) ಇಬ್ಬರು ಸಹಚರರನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.

2021 ರಲ್ಲಿ ಉದ್ಯೋಗಕ್ಕಾಗಿ ಲೈಂಗಿಕ ಹಗರಣದ ಆರೋಪದ ಮೇಲೆ ಕರ್ನಾಟಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ,

ಇದೀಗ ಏಕಾಏಕಿ ಕಾಂಗ್ರೆಸ್(Congress) ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಸಿಡಿ ಪ್ರಕರಣವನ್ನು(CD Case) ತಿರುಗಿಸಿದ್ದು, ತನ್ನ ವಿರುದ್ಧ ಸಂಚು ರೂಪಿಸಿದ್ದಾರೆ ಮತ್ತು ಅವರನ್ನು ತನಿಖೆಗೆ ಒಳಪಡಿಸಬೇಕು.

ಇದರ ಹಿಂದಿರುವ ʼಕೈʼಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) (CBI) ಪತ್ತೆಹಚ್ಚಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬಿಬಿಎಂಪಿ ಚುನಾವಣೆ ಅಂದ್ರೆ ಬಿಜೆಪಿಗೆ ಅಲರ್ಜಿನಾ; ಮತ್ಯಾಕೆ ಮೂರು ವರ್ಷವಾದ್ರೂ ಚುನಾವಣೆ ನಡೆಸುತ್ತಿಲ್ಲ

ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಮಂಡ್ಯದ ಇಬ್ಬರು ಸೇರಿದಂತೆ ಆಕೆಯ ಸಹಚರರೊಂದಿಗೆ ಯುವತಿಯನ್ನು ಬಂಧಿಸಬೇಕು!

ಅವರ ಹೆಸರನ್ನು ಸಿಬಿಐ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಜಾರಕಿಹೊಳಿ ಬೆಳಗಾವಿಯಲ್ಲಿ(Belagavi) ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಮಾಜಿ ಜಲಸಂಪನ್ಮೂಲ ಸಚಿವ ಶಿವಕುಮಾರ್ ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಅದರ ಹಿಂದೆ ಕಾಂಗ್ರೆಸ್ (DKshi-Jarakiholi CD case fight) ನಾಯಕನ ಕೈವಾಡವಿದೆ ಎಂದು ಸಾಬೀತುಪಡಿಸಲು ನನ್ನ ಬಳಿ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ರಾಜಕಾರಣಿಯಾಗಲು ಅನರ್ಹರು! ಯಾರೊಬ್ಬರ ವೈಯಕ್ತಿಕ ಜೀವನವನ್ನು ಯಾರೂ ಹಾಳು ಮಾಡಬಾರದು.

ನಾನು ಯಾವತ್ತೂ ವೈಯಕ್ತಿಕ ದಾಳಿ ಮಾಡಿಲ್ಲ. ಕಾಂಗ್ರೆಸ್ ನಾಯಕರು ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಸೇರಿದಂತೆ ಅನೇಕ ರಾಜಕಾರಣಿಗಳ ಹಲವಾರು ಸ್ಲೀಜ್ ವಿಡಿಯೋಗಳು ಬ್ಲಾಕ್‌ಮೇಲಿಂಗ್‌ಗೆ ಬಳಸಲ್ಪಡುತ್ತವೆ.


ಇದು ತುಂಬಾ ಗಂಭೀರವಾದ ವಿಷಯವಾಗಿದೆ!

ಇದನ್ನೂ ಓದಿ:6.1 ದರದೊಂದಿಗೆ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ : ಐಎಂಎಫ್‌ ವರದಿ

ಏಕೆಂದರೆ ಕಾಂಗ್ರೆಸ್ ನಾಯಕರು ಮತ್ತು ಉನ್ನತ ಅಧಿಕಾರಿಗಳು ಸೇರಿದಂತೆ ಅನೇಕ ಜನರು ಹನಿ ಟ್ರ್ಯಾಪ್ ಆಗಿದ್ದಾರೆ(Honey trap) ಮತ್ತು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ.

ಈ ಕಾರಣದಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾನು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಜಾರಕಿಹೊಳಿ ಹೇಳಿದರು. ನನ್ನ ಬಳಿ 120 ಸಾಕ್ಷ್ಯಗಳಿವೆ.

ಆದ್ರೆ ನಾನು ಅದನ್ನು ಇಲ್ಲಿ ಬಿಡುಗಡೆ ಮಾಡುತ್ತಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ನಾನು ಯಾವುದೇ ತಪ್ಪು ಮಾಡದೆ ನರಳಬೇಕಾಯಿತು ಎಂದು ಹೇಳಿದರು.

ಇನ್ನು ಶಿವಕುಮಾರ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಅವರು ಉತ್ತಮ ಸ್ನೇಹಿತರಾಗಿದ್ದರು. ಆದರೆ ಗ್ರಾಮೀಣ ಶಾಸಕರಿಂದ ಅವರ ಸಂಬಂಧವು ಹಾಳಾಯಿತು.

ಕಾಂಗ್ರೆಸ್ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಅವರು ವಿಷಕನ್ಯೆ! ಎಂದು ಪರೋಕ್ಷವಾಗಿ ಉಲ್ಲೇಖಿಸಿದ ಜಾರಕಿಹೊಳಿ,

ಅವರು ಪಿತೂರಿಯ ಭಾಗವಾಗಿದ್ದರು ಎಂದು ಆರೋಪಿಸಿದರು. ಅಶ್ಲೀಲ ವಿಡಿಯೋವನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂರು ತಿಂಗಳ ಹಿಂದೆಯೇ ನನಗೆ ತಿಳಿದಿತ್ತು ಎಂದು ಹೇಳಿಕೊಂಡ ಜಾರಕಿಹೊಳಿ,

ಅವರ ಆಸೆಗೆ ತಕ್ಕಂತೆ ಕೆಲಸ ಮಾಡುವಂತೆ ಬ್ಲ್ಯಾಕ್‌ಮೇಲ್‌ಗೆ ಮಣಿಯದ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.

ಶಿವಕುಮಾರ್ ಅವರು ಪಿತೂರಿಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡು ಕದನ ವಿರಾಮಕ್ಕೆ ಯತ್ನಿಸಿದರೂ, ಅವರ ಕೈವಾಡದ ಬಗ್ಗೆ ನನಗೆ ತಿಳಿದಿತ್ತು ಮತ್ತು ಈಗ ನನ್ನ ಬಳಿ ಇರುವ ಪುರಾವೆಗಳು ಅದನ್ನು ಸಾಬೀತುಪಡಿಸುತ್ತವೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಸದ್ಯ ರಮೇಶ್‌ ಜಾರಕಿಹೊಳಿ ಈ ಆರೋಪಕ್ಕೆ ರಾಜ್ಯ ಕಾಂಗ್ರೆಸ್‌ ಅಷ್ಟಾಗಿ ಪ್ರತಿಕ್ರಿಯೇ ನೀಡದೆ ಇದ್ದರೂ, ಕೆಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

Exit mobile version