ರಾಜ್ಯ ಬಿಜೆಪಿಯಿಂದ ಮೋದಿ ಜಪ: ಕರ್ನಾಟಕವನ್ನೇನು ಮೋದಿ ನಡೆಸುತ್ತಾರಾ? ಡಿಕೆಶಿ

Bengaluru : ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ಪ್ರಮುಖ ಪಕ್ಷಗಳ ನಾಯಕರ ವಾಗ್ದಾಳಿ ಸಮರವೂ ಬಿರುಸುಗೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್‌(DKShivakumar satirized BJPleaders behavior) ಅವರು ಬಿಜೆಪಿ ನಾಯಕರ ವರ್ತನೆಗಳ ಬಗ್ಗೆ ತೀವ್ರವಾಗಿ ಟೀಕಿಸಿ,

ಬಿಜೆಪಿ ನಾಯಕರು ನರೇಂದ್ರ ಮೋದಿ(Narendra modi) ಅವರ ಹೆಸರಿನ ಬಲದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಮಾತ್ರ ಜಪಿಸುತ್ತಿರುವ ರಾಜ್ಯ ಬಿಜೆಪಿ ಪಕ್ಷದಲ್ಲಿ ದೊಡ್ಡ ರಾಜ್ಯ ನಾಯಕರೇ ಇಲ್ಲದಿರುವಾಗ, ಪ್ರಧಾನಿ ಮೋದಿಯೇನಾದ್ರೂ ರಾಜ್ಯಕ್ಕೆ ಬಂದು ಸರ್ಕಾರ ನಡೆಸುತ್ತಾರಾ? ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿ ಜಾಲಕ್ಕೆ(ANI News Network) ತಮ್ಮ ಹೇಳಿಕೆ ನೀಡಿರುವ ಡಿ.ಕೆ ಶಿವಕುಮಾರ್,

ಗೃಹ ಸಚಿವ ಅಮಿತ್ ಶಾ(Amit shah) ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಚುನಾವಣೆಯ ಮುಖವಾಗುತ್ತಾರೆ. ಅಂದರೆ ರಾಜ್ಯ ಬಿಜಡಪಿಗೆ ನಾಯಕತ್ವವೇ ಇರುವುದಿಲ್ಲ!

ಹಾಗಿದ್ದ ಮೇಲೆ ಪ್ರಧಾನಿ ನರೇಂದ್ರ ಮೋದಿ ರಾಜ್ಯವನ್ನು ನಡೆಸುತ್ತಾರೆಯೇ? ನಮ್ಮ ರಾಜ್ಯಕ್ಕೆ ರಾಜ್ಯ ಆಳುವ ನಾಯಕರು ಬೇಕು. ಕಾಂಗ್ರೆಸ್ ಸಾಮೂಹಿಕ ನಾಯಕತ್ವವನ್ನು ನೀಡುತ್ತದೆ ಎಂದು ಹೇಳಿದರು.

ತಮ್ಮ ಮಾತನ್ನು ಮುಂದುವರೆಸಿದ ಅವರು. ಬಿಜೆಪಿಗೆ ಅಭಿವೃದ್ಧಿಯ ಅಜೆಂಡಾ ಇಲ್ಲ, ಅವರು ದ್ವೇಷವನ್ನು ಹರಡುತ್ತಾರೆ.

ಅದಕ್ಕಾಗಿಯೇ ರಾಹುಲ್ ಗಾಂಧಿ(DKShivakumar satirized BJPleaders behavior) ಅವರು ಭಾರತ್ ಜೋಡೋ ಯಾತ್ರೆ(Bharat jodo yatra)ಯನ್ನು ಕೈಗೊಂಡು ಭಾರತವನ್ನು ಒಗ್ಗೂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಆರ್ಥಿಕ ಅಭಿವೃದ್ಧಿಯ ಅಜೆಂಡಾವನ್ನು ಹೊಂದಿದೆ. ನಾವು ಸಾಮಾನ್ಯ ಜನರನ್ನು ಸುಧಾರಿಸಲು ಬಯಸುತ್ತೇವೆ,

ಅವರ ಅರ್ಥಿಕ ಸ್ಥಿತಿಯನ್ನೂ ಸುಧಾರಿಸುತ್ತೇವೆ ಎಂದು ಹೇಳಿದ್ದಾರೆ. ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಹಿನ್ನೆಲೆ ಆಯಾ ಪಕ್ಷಗಳು ತಮ್ಮದೇ ಗುರಿಯನ್ನು ಹೊಂದಿದ್ದು,

ಇದನ್ನೂ ಓದಿ: https://vijayatimes.com/allegation-against-shivamurthy-swamiji/

ಜನರ ಗಮನ ಸೆಳೆಯುವಲ್ಲಿ ಉತ್ತಮ ಕಸರತ್ತನ್ನು ನಡೆಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ(JC Nadda) ಅವರು ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 30 ರಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡು, ಬೆಂಗಳೂರು ಮತ್ತು ಹಳೇ ಮೈಸೂರು ಭಾಗಕ್ಕೆ ಭೇಟಿ ನೀಡಿ,

ಜನಸಂಕಲ್ಪ ಯಾತ್ರೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

ಮುಂಬರುವ 2023ರ ಚುನಾವಣೆಯು ಮುಖ್ಯವಾಗಿ ಹಳೆ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಸಾಂಪ್ರದಾಯಿಕ ಎದುರಾಳಿಗಳಾಗಿರುವುದರಿಂದ ಕರ್ನಾಟಕದ

ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗೆ ಅಮಿತ್‌ ಶಾ ಅವರ ಭೇಟಿ ಮಹತ್ವದ್ದಾಗಿತ್ತು. ಈ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡು ಬಾರಿ ಕೂಡ ಸೋಲನ್ನು ಕಂಡಿದೆ! ಹೀಗಾಗಿ ಬಿಜೆಪಿ ಇಲ್ಲಿ ಪ್ರಬಲ ಹೋರಾಟ ನಡೆಸಲಿದೆ ಎಂಬುದು ಖಚಿತ!

Exit mobile version