ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸುವ ಹುಕ್ಕಾ‌ ಬಾರ್‌ಗಳಿಗೆ ಕ್ರಮ ಗ್ಯಾರಂಟಿ: ಡಾ ಜಿ ಪರಮೇಶ್ವರ ಎಚ್ಚರಿಕೆ

Belagavi: ಸಿಲಿಕಾನ್ ಸಿಟಿ (Dont Break hookah Bar Rules)ಯಲ್ಲಿ ನಿಯಮ ಉಲ್ಲಂಘನೆ ಮಾಡಿ ತಲೆ ಎತ್ತುತ್ತಿರುವ ಹುಕ್ಕಾ ಬಾರ್ ಕುರಿತಾಗಿ ಮಂಗಳವಾರ ವಿಧಾನಸಭೆಯಲ್ಲಿ ಚರ್ಚೆ ನಡೆಡಿದ್ದು,

ಹುಕ್ಕಾ ಬಾರ್‌ಗಳ ಹಾವಳಿ ಬಗ್ಗೆ ಜಯನಗರ ಶಾಸಕ ಸಿ ಕೆ ರಾಮಮೂರ್ತಿ (C K Ramamurthy) ಪ್ರಸ್ತಾಪಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಕೋರಮಂಗಲದಲ್ಲಿ ಹುಕ್ಕಾ ಬಾರ್ (Hookah Bar) ಒಂದರಲ್ಲಿ 15 ಗ್ಯಾಸ್ ಸಿಲಿಂಡರ್ ಸಿಡಿದು ಅನೇಕರಿಗೆ ಗಾಯಗಳಾದ ಘಟನೆಯನ್ನು ಅವರು ಉಲ್ಲೇಖಿಸಿ ಮಾತನಾಡಿದ್ದು, ಬೆಂಗಳೂರಿನಲ್ಲಿ

(Bengaluru) ಅನುಮತಿ ಇಲ್ಲದೇ ನೂರಾರು ಅಕ್ರಮ ಹುಕ್ಕಾಬಾರ್ ಗಳು ತಲೆ ಎತ್ತಿವೆ.‌ ಯಾರು ಲೈಸೆನ್ಸ್ ಕೊಡ್ತಾರೆ? ಎಂದು ಸರ್ಕಾರದ ಉತ್ತರಿಸುವಂತೆ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಸುರೇಶ್

ಕುಮಾರ್ (Suresh Kumar) ಧ್ವನಿಗೂಡಿಸಿ, ಸರ್ಕಾರ ಹುಕ್ಕಾಬಾರ್ ಗಳ ಗಂಭೀರತೆ ಅರ್ಥ ಮಾಡಿಕೊಂಡಿದೆ.

ಹುಕ್ಕಾಬಾರ್ ಗಳು ಯುವ ಜನಾಂಗಕ್ಕೆ ದೊಡ್ಡ ಪಿಡುಗು. ಪಂಜಾಬ್ (Panjab), ಉತ್ತರಾಖಂಡ್, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಚಂಡೀಗಡ, ತಮಿಳುನಾಡುಗಳಲ್ಲಿ ಹುಕ್ಕಾ ಬಾರ್ ಗಳ ನಿಷೇಧ

ಇದೆ.‌ನಮ್ಮ ರಾಜ್ಯದಲ್ಲೂ ಹುಕ್ಕಾ ಬಾರ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ತೀರ್ಮಾನ ಮಾಡಬೇಕು (Dont Break hookah Bar Rules) ಎಂದು ಒತ್ತಾಯಿಸಿದರು.

ಗೃಹ ಸಚಿವ ಪರಮೇಶ್ವರ್ ಅವರ ಉತ್ತರ
ಗೃಹ ಸಚಿವರಾದ ಡಾ ಜಿ ಪರಮೇಶ್ವರ್‌ (Dr. G Parameshwar) ಅವರು ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ್ದು, ಹುಕ್ಕಾ ಬಾರ್ ಗಳು ಫುಡ್ ಸೇಫ್ಟಿ ಅಥಾರಿಟಿ ಆಫ್ ಇಂಡಿಯಾ (FSSAI)ದ

ಅಡಿಯಲ್ಲಿ ಪರವಾನಗಿ ಪಡೆದುಕೊಳ್ಳುತ್ತಾರೆ. ಬಿಬಿಎಂಪಿ (BBMP) ವತಿಯಿಂದ ಇವರಿಗೆ ಟ್ರೇಡ್ ಲೈಸೆನ್ಸ್ ಕೊಡಲ್ಲ.‌ ಅವರಿಗೆ ಲೈಸೆನ್ಸ್ (License) ಅಗತ್ಯ ಇಲ್ಲ ಅಂತನೂ ಕೋರ್ಟ್ ಆದೇಶ ಇದೆ.

ಪ್ರತ್ಯೇಕ ಕೊಠಡಿ ಮಾಡಿ ಹುಕ್ಕಾ ಬಾರ್ ಮಾಡಬಹುದು ಎಂದು ನ್ಯಾಯಾಲಯ ಸೂಚಿಸಿದೆ ಎಂದು ಮಾಹಿತಿ ನೀಡಿದರು.

ಹುಕ್ಕಾ ಬಾರ್ ಗಳು ನಿಯಮ ಉಲ್ಲಂಘಿಸಿದರೆ ಪೊಲೀಸ್ ದಾಳಿ ಆಗಲಿದೆ.‌‌‌ ಕೋರಮಂಗಲದಲ್ಲಿ ಹುಕ್ಕಾ ಬಾರ್ ನವ್ರು 15 ಸಿಲಿಂಡರ್ (Cylinder) ಮೇಲೆ ಇಟ್ಟಿದ್ರು. ಹಾಗಾಗಿ ಬೆಂಕಿ ಹತ್ಕೊಂಡು ದುರಂತ

ಆಯ್ತು.‌ ಒಬ್ಬ ನಾಲ್ಕನೇ ಮಹಡಿಯಿಂದ ಜಿಗಿದು ಬದುಕಿದ್ದಾನೆ. ಆದರೆ ಆತ ಬದುಕಿರೋದೇ ಆಶ್ಚರ್ಯ ಎಂದರು.

ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ
ಹುಕ್ಕಾ ಬಾರ್ ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ಜೊತೆ ನಾವು ಚರ್ಚಿಸಿ ಕಾನೂನು ತರುವ ಬಗ್ಗೆ ಪರಿಶೀಲಿಸ್ತೇವೆ ಎಂದು‌ ಭರವಸೆಯನ್ನು ನೀಡಿದರು. ಅಷ್ಟೇ ಅಲ್ಲದೆ

ಪೊಲೀಸರು ಈ‌ ಘಟನೆ ಬಳಿಕ ಎಚ್ಚೆತ್ತುಕೊಂಡಿದ್ದಾರೆ ಎಂದು ತಿಳಿಸಿದರು. ಈ ವಿಚಾರವಾಗಿ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಆರೋಗ್ಯ ಸಚಿವ ಆರೋಗ್ಯ

ಸಚಿವ ದಿನೇಶ್ ಗುಂಡೂರಾವ್ (Dinesh Gundurao), ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಲು ಕಾಯ್ದೆ ತರಲಾಗುವುದು ಎಂದು ತಿಳಿಸಿದ್ದರು.

ಹುಕ್ಕಾ ಬಾರ್ ಗಳ ನಿಷೇಧ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಆದರೆ ಪ್ರತ್ಯೇಕ ಕಾಯ್ದೆಯ ಬಲವಿಲ್ಲದೆ ನಿಷೇಧಿಸಿದರೆ ಸರ್ಕಾರಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತದೆ. ಹಾಗಾಗಿ ಪ್ರತ್ಯೇಕ

ಕಾಯ್ದೆ ರೂಪಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಮತ್ತು ತಂಬಾಕು ಉತ್ಪನ್ನಗಳ ನಿಷೇಧಿತ ವಲಯವನ್ನು ವಿಸ್ತರಿಸುವುದಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಇದನ್ನು ಓದಿ: ಲೋಕಸಭೆಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು: ಸಂಸದರತ್ತ ನುಗ್ಗಿ ಅಶ್ರುವಾಯು ಸಿಡಿಸಿದ ಅಪರಿಚಿತರು

Exit mobile version