ನಿಮ್ಮ ಬಳಿ ಇರುವ ನೋಟು ಹರಿದಿದ್ದರೆ ಚಿಂತೆ ಬೇಡ ; ಈ ನಿಯಮ ಅನುಸರಿಸಿ ಹೊಸ ನೋಟ್ ಪಡೆಯಿರಿ!

Indian

ನಿಮ್ಮ ಹತ್ತಿರವಿರುವ ಹರಿದ ನೋಟು(Tored Currency Notes) ಅಥವಾ ಟೇಪ್ ಅಂಟಿಸಿದ ನೋಟನ್ನು, ಬಸ್ ನಲ್ಲಿ, ಅಥವಾ ಅಂಗಡಿಗಳಲ್ಲಿ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರಾ? ಹಾಗೆಂದು ನೀವು ‘ಅಯ್ಯೋ ನೋಟು ವೇಸ್ಟ್ ಆಯಿತು’ ಎಂದು ಗಾಬರಿಪಡುವ ಅಗತ್ಯವಿಲ್ಲ.

ಹರಿದ ನೋಟ್ ಬದಲಿಗೆ ನೀವು ಸುಸ್ಥಿತಿಯಲ್ಲಿರುವ ಬೇರೆ ನೋಟ್ ಪಡೆಯಬಹುದು. ಹೇಗೆ ಅಂತೀರಾ ಹೀಗೆ, ಈ ಟೇಪ್ ಸ್ಟಿಕ್ಕಿಂಗ್ ನೋಟ್ ಅನ್ನು ಬದಲಾಯಿಸಿಕೊಳ್ಳಲು ಆರ್‌ಬಿಐ ಹೊಸ ನಿಯಮಗಳನ್ನು ರೂಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್(Indian Reserve Bank) 2017 ರ ವಿನಿಮಯದ ಕರೆನ್ಸಿ ನೋಟು ನಿಯಮಗಳ ಪ್ರಕಾರ, ನಿಮಗೆ ಎಟಿಎಂನಿಂದ ಸುಸ್ಥಿತಿಯಲ್ಲಿಲ್ಲದ ನೋಟುಗಳು ದೊರೆತರೆ, ನೀವು ಆ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು.

ಹಾಗೆಯೇ ಯಾವುದೇ ಸರ್ಕಾರಿ ಬ್ಯಾಂಕ್‌ಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. ನಿಮ್ಮ ನೋಟು ತುಂಡು ತುಂಡಾದರೂ ಬ್ಯಾಂಕ್ ಅದನ್ನು ತೆಗೆದುಕೊಳ್ಳುತ್ತದೆ. ಹರಿದ ನೋಟಿನ ಯಾವುದೇ ಭಾಗ ಕಾಣೆಯಾದರೂ ಅದನ್ನು ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ ಒಂದು ಅರ್ಜಿಯನ್ನು ಭರ್ತಿ ಮಾಡುವ ಮೂಲಕ, ನೀವು ಸರ್ಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವಾ RBI ಯ ಇಶ್ಯೂ ಆಫೀಸ್‌ಗೆ ಭೇಟಿ ನೀಡಿ ನೋಟನ್ನು ಬದಲಾಯಿಸಬಹುದು.


ನಿಮ್ಮ ಬಳಿ ಇರುವ ಹರಿದ ನೋಟಿನ ಸಂಪೂರ್ಣ ಮೌಲ್ಯವನ್ನು ಮರಳಿ ಪಡೆಯುತ್ತೀರೋ ಇಲ್ಲವೋ ಎಂಬುದು ನಿಮ್ಮ ನೋಟಿನ ಸ್ಥಿತಿ ಮತ್ತು ನೋಟಿನ ಮೌಲ್ಯವನ್ನು ಅವಲಂಬಿಸಿರುತ್ತದೆ. ಕೆಲವು ಮ್ಯುಟಿಲೇಟೆಡ್ ನೋಟುಗಳ ಸಂದರ್ಭದಲ್ಲಿ, ಪೂರ್ತಿ ಹಣ ಸಿಗುತ್ತದೆ, ಆದರೆ ನೋಟು ಹೆಚ್ಚು ಹರಿದಿದ್ದರೆ ನೀವು ಸ್ವಲ್ಪ ಪ್ರಮಾಣದ ಹಣವನ್ನು ಮರಳಿ ಪಡೆಯುತ್ತೀರಿ. 50 ರೂ.ಗಿಂತ ಹೆಚ್ಚಿನ ಮೌಲ್ಯದ ನೋಟಿನ ದೊಡ್ಡ ತುಂಡು ಸಾಮಾನ್ಯ ನೋಟಿನ 40 ರಿಂದ ಶೇ.80 ರಷ್ಟು ಇದ್ದರೆ, ನೀವು ಆ ನೋಟಿನ ಅರ್ಧದಷ್ಟು ಹಣವನ್ನು ಪಡೆಯುತ್ತೀರಿ.

50 ರೂ.ಗಿಂತ ಹೆಚ್ಚಿನ ಮೌಲ್ಯದ ಒಂದೇ ನೋಟಿನ ಎರಡು ತುಂಡುಗಳಿದ್ದರೆ ಮತ್ತು ಈ ಎರಡು ತುಂಡುಗಳು ಸಾಮಾನ್ಯ ನೋಟಿನ ಶೇಕಡಾ 40 ರಷ್ಟಿದ್ದರೆ, ನೀವು ನೋಟಿನ ಪೂರ್ಣ ಹಣವನ್ನು ಪಡೆಯುತ್ತೀರಿ. ರೂ 1, ರೂ 2, ರೂ 5, ರೂ 10 ಮತ್ತು ರೂ 20 ನೋಟುಗಳ ವಿನಿಮಯದಲ್ಲಿ ಅರ್ಧ ಬೆಲೆ ಲಭ್ಯವಿಲ್ಲ. ಹಾಗಾಗಿ ಈಗ ನೀವು ನಿಮ್ಮ ಹಣವನ್ನು ಯಾವುದೇ ನಷ್ಟವಿಲ್ಲದೆ ಬದಲಾಯಿಸಿ ಹೊಸ ನೋಟನ್ನು ಪಡೆಯಬಹುದಾಗಿದೆ.

Exit mobile version