ಹಡಗಿನಲ್ಲಿ ರೇವ್ ಪಾರ್ಟಿ ಶಾರುಕ್ ಪುತ್ರನ ಬಂಧನ

ಮುಂಬೈ ಅ 4: ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೂ  ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.  ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ (23) ಅವರನ್ನು ಬಂಧಿಸಲಾಗಿದೆ.

ಮುಂಬಯಿ-ಗೋವಾ ನಡುವೆ ಸಮುದ್ರದ ಮಧ್ಯೆ ಐಷಾರಾಮಿ ಕ್ರೂಸ್‌ ಶಿಪ್‌ನಲ್ಲಿನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಎಫ್‍ಟಿವಿ ಸಂಸ್ಥೆ ಕ್ರೈ ಆರ್ಕ್ ಹೆಸರಿನ ಮೂರು ದಿನಗಳ ಮ್ಯೂಜಿಕಲ್ ಪಾರ್ಟಿಯನ್ನು ಸಮುದ್ರಯಾನದೊಂದಿಗೆ ಆಯೋಜನೆ ಮಾಡಿತ್ತು. ಪಾರ್ಟಿ ಆಯೋಜಿಸಿದ್ದ ಕಾಡೇಲಿಯಾ ಹಡಗು ಶನಿವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮುಂಬೈನಿಂದ ಸಮುದ್ರಯಾನ ಆರಂಭಿಸಿತ್ತು. ಮೂರು ದಿನಗಳ ಪ್ರವಾಸದ ಬಳಿಕ ಅಕ್ಟೋಬರ್ 4ರಂದು ರಾತ್ರಿ 10 ಗಂಟೆಗೆ ಹಡಗು ಮರಳಲಿತ್ತು.

ಈ ಪ್ರಕರಣದಲ್ಲಿ ಸಿಲುಕಿರುವವರನ್ನು ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್‌ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ.

ಬಂಧಿತರಿಂದ ಅಧಿಕಾರಿಗಳು 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್‌ ಮತ್ತು 22 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾದಕವಸ್ತುಗಳ ಮಾರುಕಟ್ಟೆ ಮೌಲ್ಯ ಸುಮಾರು 1:33 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version