ಹೊಸ ವರ್ಷಾಚರಣೆ: ರಾತ್ರಿ ಕುಡಿದು ವಾಹನ ಚಲಾಯಿಸಿದ 77 ಮಂದಿಗೆ ಬಿತ್ತು ಭಾರೀ ಫೈನ್‌

Bengaluru : ಹೊಸ ವರ್ಷಾಚರಣೆ(New year celebration) ಹಿನ್ನೆಲೆಯಲ್ಲಿ ರಾತ್ರಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಒಟ್ಟು 77 ಮಂದಿಯ (drunk driving at night) ವಿರುದ್ಧ ಪ್ರಕರಣ ದಾಖಲಿಸಿದ ಬೆಂಗಳೂರು ಪೊಲೀಸರು ಕುಡುಕ ಚಾಲಕರಿಗೆ ಭಾರೀ ಫೈನ್‌ ಕೂಡ ವಿಧಿಸಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಮಾಡುವುದನ್ನು ತಡೆಗಟ್ಟಲು ಬೆಂಗಳೂರು

ಪೊಲೀಸರು(Bengaluru police) ನಗರದಲ್ಲಿ ಅನೇಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದರು ಮತ್ತು ಕುಡಿದು ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದವರನ್ನು ಹಿಡಿದು ದಂಡ ಹಾಕಿದರು.

ಎಂಎನ್ ಅನುಚೇತ್(MN Anuchetan), ಜಂಟಿ ಪೊಲೀಸ್ ಕಮಿಷನರ್(Joint commisioner of police) (ಸಂಚಾರ) ಸಾಮಾಜಿಕ ಜಾಲತಾಣವಾದ ಟ್ವಿಟರ್‌(Twitter) ನಲ್ಲಿ ಈ ಬಗ್ಗೆ ವರದಿ ನೀಡಿದ್ದು,

“ನಿನ್ನೆ ರಾತ್ರಿ ಡ್ರಿಂಕ್ ಅಂಡ್ ಡ್ರೈವ್‌ಗಾಗಿ ಪರಿಶೀಲಿಸಲಾದ ವ್ಯಕ್ತಿಗಳ ಪೈಕಿ 77 ಮಂದಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ” ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಜವಾಬ್ದಾರಿಯುತವಾಗಿ ವಾಹನ ಚಾಲನೆ(drunk driving at night) ಮಾಡಿದ್ದಕ್ಕಾಗಿ ಬೆಂಗಳೂರಿಗರಿಗೆ ಧನ್ಯವಾದಗಳು! ನಿಮ್ಮೆಲ್ಲರಿಗೂ ಸಂತೋಷ, ಸುರಕ್ಷಿತ ಮತ್ತು ಸಮೃದ್ಧ ಹೊಸ ವರ್ಷವನ್ನು ಹಾರೈಸುತ್ತೇನೆ.

ಕುಡಿದು ವಾಹನ ಚಾಲನೆ ಮಾಡದಂತೆ ಬೆಂಗಳೂರು ಸಂಚಾರ ಪೊಲೀಸರು ಬೆಂಗಳೂರು ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜನವರಿ 1 ರವರೆಗೆ ಬೆಂಗಳೂರಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಆಗಾಗ್ಗೆ ತಪಾಸಣೆ ನಡೆಸುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಇದನ್ನೂ ಓದಿ: https://vijayatimes.com/kumaraswamy-spreading-false-news/

ಹೊಸ ವರ್ಷದ ದಿನದ ರಾತ್ರಿ ಬುಕ್ ಆಗಿರುವ ಪ್ರಕರಣಗಳು, ಕಳೆದ ವಾರ ದಾಖಲಾಗಿದ್ದ ಪ್ರಕರಣಗಳಿಗಿಂತ ಕಡಿಮೆಯಾಗಿದೆ.

ಕ್ರಿಸ್‌ಮಸ್(Christmas) ದಿನದಂದು ಬೆಂಗಳೂರಿನಲ್ಲಿ 146 ವಾಹನ ಸವಾರರು ಕುಡಿದು ವಾಹನ ಚಾಲನೆ ಮಾಡಿ ದಂಡ ಹಾಕಿಸಿಕೊಂಡ ಪ್ರಕರಣಗಳು ದಾಖಲಾಗಿತ್ತು ಎಂದು ಹೇಳಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಮಾರಣಾಂತಿಕ ಅಪಘಾತಗಳ ಕಾರಣಗಳನ್ನು ವಿಶ್ಲೇಷಿಸುವಾಗ, ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳ ಸಾಧ್ಯತೆಗಳು ಗಣನೀಯವಾಗಿ ಹೆಚ್ಚಿರುವುದರಿಂದ ಇದನ್ನು ಪರಿಣಾಮಕಾರಿಯಾಗಿ ತಡೆಯುವ ಅಗತ್ಯವಿದೆ.

ಅಪಘಾತಗಳನ್ನು ತಡೆಗಟ್ಟುವುದು ಮತ್ತು ರಸ್ತೆ ಬಳಕೆದಾರರ ಸುರಕ್ಷತೆಯನ್ನು ಕಾಪಾಡುವುದು ಸಂಚಾರ ಪೊಲೀಸರ ಮೂಲ ಕರ್ತವ್ಯ ಮತ್ತು ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ, ನಗರದಲ್ಲಿ ಅಪಘಾತಗಳನ್ನು ತಡೆಯಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

Exit mobile version