Weight Loss : ಈ 5 ಪಾನೀಯಗಳನ್ನು ನಿಯಮಿತವಾಗಿ ಸೇವಿಸಿ ನಿಮ್ಮ ಬೊಜ್ಜು ಕರಗಿಸಿ

Fat

Weight Loss : ಇತ್ತೀಚಿನ ದಿನಗಳಲ್ಲಿ ಅಧಿಕ ಬೊಜ್ಜಿನಿಂದ(Obesity) ಅನೇಕರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆಧುನಿಕ ಜೀವನ ಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ ಇಂದು ಸಾಮಾನ್ಯವಾಗಿದೆ. ಆದರೆ ಇದು ಹೃದಯ(Heart) ಸೇರಿದಂತೆ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಹೀಗಾಗಿ ಅಧಿಕ ತೂಕ ಅಥವಾ ಬೊಜ್ಜನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಉತ್ತಮ. ಇಲ್ಲವಾದರೆ ಸ್ಥೂಲಕಾತೆಯಿಂದ 200ಕ್ಕೂ ಹೆಚ್ಚು ರೋಗಗಳು ಬರುತ್ತವೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಇನ್ನು ಕೆಲವು ಪಾನೀಯಗಳು(Juice) ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಆದರೆ ಅವುಗಳನ್ನು ಪ್ರತಿನಿತ್ಯ, ದೀರ್ಘಕಾಲದವರೆಗೆ ನಿಯಮಿತವಾಗಿ ಬಳಸಬೇಕಾಗುತ್ತದೆ. ಅವು ಯಾವವು ಎನ್ನುವ ಮಾಹಿತಿ ಇಲ್ಲಿದೆ.



ಲಿಂಬು ನೀರು : ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಲಿಂಬು ರಸವನ್ನು(Lemon) ಸೇರಿಸಿದ ನೀರನ್ನು ಪ್ರತಿದಿನ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ(Digestion) ವೃದ್ದಿಸುತ್ತದೆ. ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಈ ನೀರಿನಲ್ಲಿ ವಿಟಮಿನ್ ಸಿ, ಫೋಲೇಟ್ ಯಂತಹ ಅಂಶಗಳಿವೆ.

ಕೊತ್ತಂಬರಿ ಬೀಜದ ನೀರು : ಕೊತ್ತಂಬರಿ ನೀರು ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜವನ್ನು ಹಾಕಿ, ಕುದಿಸಿ ಸೇವಿಸಬೇಕು.

https://vijayatimes.com/supremecourt-questions-regarding-hijab/

ಎಳನೀರು : ಎಳನೀರು(Tender Coconut) ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಚಯಾ ಪಚಯವನ್ನು ಹೆಚ್ಚಿಸುವುದು ಬಹಳ ಮುಖ್ಯ. ಇದರಿಂದ ಕೊಬ್ಬು ವೇಗವಾಗಿ ಕರಗುತ್ತದೆ.

ಜೊತೆಗೆ ಎಳನೀರು ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಪೂರೈಸಿ, ದೇಹದ ತೂಕವನ್ನು ನಿಯಂತ್ರಿಸುತ್ತದೆ. ಹೀಗಾಗಿ ದಿನಕ್ಕೆ ಒಮ್ಮೆಯಾದರೂ ಎಳನೀರನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

ಮೆಂತೆ ಕಾಳಿನ ನೀರು : ಸ್ವಲ್ಪ ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಈ ನೀರನ್ನು ಕುಡಿಯಿರಿ. ಇದು ನಿಮ್ಮ ದೇಹದ ಕೊಬ್ಬನ್ನು ತ್ವರಿತವಾಗಿ ಕರಗಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಕೊಬ್ಬು ಶೇಖರಣೆಯಾಗದಂತೆ ಕೂಡ ಇದು ತಡೆಯುತ್ತದೆ.

Exit mobile version