Sleep : ನಿಮಗೆ ನಿದ್ರೆ ಬರುತ್ತಿಲ್ಲವೆಂದರೆ ಈ ಸರಳ, ಸುಲಭ ಉಪಾಯ ಪಾಲಿಸಿ

sleep

Health Tips : ನಮ್ಮ ಆರೋಗ್ಯ(Health) ಹಾಗೂ ತೂಕವು(Weight) ಸೂಕ್ತ ರೀತಿಯಲ್ಲಿರಬೇಕೆಂದರೆ ನಮ್ಮ ನಿದ್ರೆಯ(Sleep) ಕ್ರಮವೂ ಸರಿಯಾಗಿರಬೇಕು.

ನಿದ್ರೆ ಸೂಕ್ತ ಕ್ರಮದಲ್ಲಿಲ್ಲಾ ಎಂದಾದರೆ ನಿದ್ರಾಹೀನತೆಯಿಂದ ತೂಕ ಕಡಿಮೆಯಾಗುವುದು, ಪಿತ್ತಗಳಂತಹ ಕೆಲವು ಆರೋಗ್ಯ ಸಮಸ್ಯೆಯೂ ತಲೆದೂರಬಹುದು. ಅದೇ ವೇಳೆ, ನಿದ್ರೆ ಅಧಿಕವಾದರೂ ಸಮಸ್ಯೆಯೇ. ಅಧಿಕ ನಿದ್ರೆಯಿಂದ ಸ್ಥೂಲಕಾಯವಾಗಬಹುದು.

ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದರಿಂದ ದೇಹವು ಹೆಚ್ಚು ಚಟುವಟಿಕಾಶೀಲವಾಗಿರುತ್ತದೆ ಜೊತೆಗೆ ದೈನಂದಿನ ಕೆಲಸ ನಿರ್ವಹಿಸಲು ಅನುಕೂಲವಾಗುವುದು. ಹಾಗಾಗಿ, ಸೂಕ್ತ ನಿದ್ರೆಗೆ ಜಾರಬೇಕು, ಚಟುವಟಿಕೆಯಿಂದ ಕೆಲಸ ನಿರ್ವಹಿಸಬೇಕು, ಇದರೊಟ್ಟಿಗೆ ದೇಹದ ಅನಗತ್ಯ ಕೊಬ್ಬು ಕರಗಬೇಕೆಂದುಕೊಂಡಿದ್ದರೆ ಮಲಗುವ ಮುನ್ನ ಮಾಡಬೇಕಾದ ಉತ್ತಮ ಹವ್ಯಾಸಗಳ ಬಗ್ಗೆ ತಿಳಿಯುವುದು ಮುಖ್ಯ.

ಇದನ್ನೂ ಓದಿ : https://vijayatimes.com/fans-fight-at-asia-cup-cricket-match/


ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರವಿರಿ : ಮಲಗುವ ಒಂದೆರಡು ಗಂಟೆ ಮುಂಚೆಯೇ ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರ ಸರಿಯಿರಿ. ಎಲೆಕ್ಟ್ರಾನಿಕ್ ಉಪಕರಣಗಳಿಂದ ಹೊರಬರುವ ವಿಕಿರಣಗಳು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ನಿದ್ದೆಗೆ ಭಂಗ ಬರುತ್ತದೆ.


ಊಟ ಮಾಡಿದ ಕೂಡಲೇ ಮಲಗಬೇಡಿ : ಊಟಕ್ಕೂ ನಿದ್ರೆಗೂ ಕೊನೆ ಪಕ್ಷ ಒಂದು ಗಂಟೆಯಾದರೂ ಅಂತರವಿರಲಿ. ತಿಂದ ಕೂಡಲೇ ಮಲಗಿರಲಿ ಅಜೀರ್ಣ ಸಮಸ್ಯೆ ಉಂಟಾಗಿ ನಿದ್ರಾಭಂಗವಾಗಬಹುದು.


ಮನಸ್ಸಿನ ಗೊಂದಲ ಬದಿಗಿಟ್ಟು ಮಲಗಿ : ರಾತ್ರಿ ಹಾಸಿಗೆಗೆ ಹೋಗುವ ಮುನ್ನ ಯಾವುದೇ ಮಾನಸಿಕ ತೊಳಲಾಟಗಳಿದ್ದರೂ ಅದನ್ನ ಬದಿಗಿಡಿ. ಮನಸ್ಸನ್ನ ತಿಳಿಯಾಗಿಸಿಕೊಂಡು ಹಾಸಿಗೆ ಹೋಗಿ, ಚಿಂತೆಗಳನ್ನ ಆದಷ್ಟು ಮರೆತು ಶಾಂತವಾಗಿ ಮಲಗಿ.
ಮಲಗುವ ಮುನ್ನ ಬಿಸಿಯಾಗಿ ಏನಾದರೂ ಕುಡಿಯಿರಿ.

ಇದನ್ನೂ ಓದಿ : https://vijayatimes.com/fans-fight-at-asia-cup-cricket-match/

ಇದು ಒಳ್ಳೆಯ ನಿದ್ರೆಗೆ ಪ್ರಯೋಜನಕಾರಿ. ನೀವು ಅರಿಶಿಣದ ಹಾಲು ಅಥವಾ ಕ್ಯಾಮೊಮೈಲ್ ಚಹಾವನ್ನು ಕುಡಿಯಬಹುದು. ಈ ಚಹಾವು ನಿಮ್ಮ ಮೆದುಳಿಗೆ ಹಾಗೂ ಕರುಳಿಗೆ ಪ್ರಯೋಜನಕಾರಿ. ಅದೇ ರೀತಿ, ಪುಸ್ತಕ ಓದುವುದು ಒಳ್ಳೆಯ ಅಭ್ಯಾಸ ಮತ್ತು ಇದು ಉತ್ತಮ ಆಯ್ಕೆಯಾಗಿದೆ.

ಪುಸ್ತಕ ಓದುವ ಮೂಲಕ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಮಲಗುವ ಮುನ್ನ ನಿಮ್ಮ ನೆಚ್ಚಿನ ಪುಸ್ತಕವನ್ನು ಓದಬಹುದು, ಇದರಿಂದ ಮನಸ್ಸಿಗೆ ಆಹ್ಲಾದಕರ ಅನಿಸುತ್ತದೆ. ಕಣ್ಣಿಗೆ ಒಳ್ಳೆಯ ವ್ಯಾಯಾಮ ಸಿಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.

Exit mobile version