ಮೊಟ್ಟೆ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಆದರೆ ಮೊಟ್ಟೆಯೊಂದಿಗೆ (Eating These Foods with Eggs) ಕೆಲವು ಆಹಾರಗಳನ್ನು ಸೇವಿಸುವುದರಿಂದ ನಮ್ಮ

ಆರೋಗ್ಯಕ್ಕೆ ಅಪಾಯವಾಗಬಹುದು. ಹಾಲಿನೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಿದರೆ ಹೇಗೆ ಆರೋಗ್ಯ ಕೆಡುತ್ತದೋ, ಹಾಗೆಯೇ ಮೊಟ್ಟೆಯ ಜೊತೆ ಕೆಲವು ಆಹಾರವನ್ನು ಸೇವಿಸಿದರೆ
ಆರೋಗ್ಯ ಕೆಡುತ್ತದೆ. ಹೀಗಾಗಿ ಮೊಟ್ಟೆಯೊಂದಿಗೆ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದರ ಜ್ಞಾನ ಇರಬೇಕು. ಮೊಟ್ಟೆಯೊಂದಿಗೆ ಯಾವ ಆಹಾರಗಳನ್ನು ತಿನ್ನಬಾರದು ಎಂಬುದರ
ವಿವರ ಇಲ್ಲಿದೆ ನೋಡಿ.
ಬಾಳೆಹಣ್ಣು : ಮೊಟ್ಟೆಯೊಂದಿಗೆ ಬಾಳೆಹಣ್ಣನ್ನು ಸೇವಿಸಬಾರದು. ಮೊಟ್ಟೆಯಲ್ಲಿ ಪ್ರೋಟೀನ್ ಇರುತ್ತದೆ, ಬಾಳೆಹಣ್ಣು ಹೆಚ್ಚು ಪೊಟ್ಯಾಸಿಯಮ್ ಹೊಂದಿರುತ್ತದೆ. ಇವೆರಡನ್ನು ಒಟ್ಟಿಗೆ ಸೇವಿಸಿದರೆ
ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಈ ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ (Eating These Foods with Eggs) ಆರೋಗ್ಯದ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮ ಬೀರುತ್ತದೆ.

ಸಕ್ಕರೆ : ಮೊಟ್ಟೆ ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇವಿಸಿದಾಗ ಉತ್ಪತ್ತಿಯಾಗುವ ಅಮೈನೋ ಆಮ್ಲಗಳು ದೇಹದಲ್ಲಿ ವಿಷವನ್ನು ರೂಪಿಸುತ್ತವೆ. ಇದು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.
ಕೆಲವು ಅಸ್ವಸ್ಥತೆಗೂ ಕಾರಣವಾಗಬಹುದು. ಹೀಗಾಗಿ ಸಕ್ಕರೆಯುಕ್ತ ಆಹಾರಗಳನ್ನು ಸೇವಿಸಿದ ನಂತರ ಮೊಟ್ಟೆ ಸೇವನೆ ಮಾಡಬಾರದು.
ಡೈರಿ ಉತ್ಪನ್ನಗಳು : ಹಾಲು, ಮೊಸರು, ಚೀಸ್ ಅನ್ನು ಮೊಟ್ಟೆಗಳೊಂದಿಗೆ ಸೇವಿಸಬಾರದು. ಇದು ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಚಹಾ : ಮೊಟ್ಟೆ ಮತ್ತು ಚಹಾ ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಹಾಳಾಗುತ್ತದೆ. ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು.
ಹೀಗಾಗಿ ಮೊಟ್ಟೆಯೊಂದಿಗೆ ಚಹಾವನ್ನು ಎಂದಿಗೂ ಸೇವಿಸಬಾರದು.
ಸೋಯಾ ಹಾಲು : ನೀವು ಮೊಟ್ಟೆಯೊಂದಿಗೆ ಸೋಯಾ ಹಾಲನ್ನು ಸೇವಿಸಿದರೆ ಮಲಬದ್ಧತೆಗೆ ಕಾರಣವಾಗಬಹುದು. ಅದೇ ರೀತಿ ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯ
ಪ್ರಕ್ರಿಯೆಗೆ ಹಾನಿಯಾಗುತ್ತದೆ.
ಒಟ್ಟಾರೆಯಾಗಿ ಮೊಟ್ಟೆ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ ಕೂಡಾ ಅದನ್ನು ಸೇವಿಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ಮೊಟ್ಟೆಯೊಂದಿಗೆ ಈ ಮೇಲಿನ
ಆಹಾರಗಳನ್ನು ಸೇವಿಸಲೇಬಾರದು. ಕೆಲವು ಆಹಾರಗಳನ್ನು ಸೇವಿಸುವುದರಿಂದ ಅವು ವಿಷವಾಗಿಯೂ ಪರಿವರ್ತನೆಯಾಗುವ ಅಪಾರವಿರುತ್ತದೆ.
ಇದನ್ನು ಓದಿ: ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ವಿಸ್ತರಣೆ: ಸೆ.26 ರಿಂದಲೇ ಆರಂಭ