ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖವಿರುವ ಸಿಡಿ, ಪತ್ರ ವಶಪಡಿಸಿಕೊಂಡ ED!

West Bengal

Calcutta : ಇತ್ತೀಚೆಗಷ್ಟೆ ಪಶ್ಚಿಮ ಬಂಗಾಳದಲ್ಲಿ (West Bengal) ಶಿಕ್ಷಕರ ನೇಮಕಾತಿಯಲ್ಲಿ (Teachers Recruitment) ಆಕಾಂಕ್ಷಿಗಳಿಗೆ ಉದ್ಯೋಗ ನೀಡುವುದಾಗಿ ಅವರಿಂದ ಹಣವನ್ನು ತೆಗೆದುಕೊಂಡಿರುವ ಘಟನೆ ನಡೆದಿತ್ತು.

ಈ ಹಗರಣದಲ್ಲಿ ತೃಣಮೂಲ ಕಾಂಗ್ರೇಸ್‌ನ (TMC) ಶಾಸಕರಾದ ಮಾಣಿಕ್‌ ಭಟ್ಟಾಚಾರ್ಯರವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ.

ಮೂಲಗಳ ಪ್ರಕಾರ ಒಟ್ಟು 44 ಉದ್ಯೋಗಾಂಕ್ಷಿಗಳು ತಲಾ 7 ಲಕ್ಷ ರೂ.ಗಳಂತೆ ಹಣವನ್ನು ಪಾವತಿಸಿದ್ದಾರೆ. ಈ ಹಣವನ್ನು ತೃಣಮೂಲ ಕಾಂಗ್ರೇಸ್‌ ಕಛೇರಿಯ ಅಧಿಕಾರಿ ಸಂಗ್ರಹಿಸಿದ್ದಾರೆ.

https://youtu.be/zzL_gP3G6nc

ಅದಕ್ಕೆ ಸಂಬಂಧಪಟ್ಟಂತೆ ಟಿಎಂಸಿಯ ಶಾಸಕರಾದ ಮಾಣಿಕ್‌ ಭಟ್ಟಾಚಾರ್ಯರವರನ್ನು (ED Collects CD Mentioned Mamata Banerjee) ಜಾರಿ ನಿರ್ದೇಶನಾಲಯವು ಮಂಗಳವಾರ ಬಂಧಿಸಿದೆ.

ಇದನ್ನೂ ಓದಿ : https://vijayatimes.com/congress-looted-the-state/


ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖವಿರುವ ಪ್ರಕಾರ ಈಗಾಗಲೇ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಜೊತೆಗೆ ಮಾಣಿಕ್‌ ಭಟ್ಟಾಚಾರ್ಯರವರು ನಡೆಸಿದ ಹಲವಾರು ದೂರವಾಣಿ ಸಂವಹನಗಳನ್ನು ಇಡಿ ಪತ್ತೆ ಹಚ್ಚಿದೆ.

ಈ ಹಗರಣದಲ್ಲಿ ಹಲವಾರು ಉನ್ನತ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಜಾರಿ (ED Collects CD Mentioned Mamata Banerjee) ನಿರ್ದೇಶನಾಲಯವು (ಇಡಿ) ಹಲವಾರು ಡಿಜಿಟಲ್‌ ಸಾಕ್ಷಿಗಳನ್ನು ಸಂಗ್ರಹಿಸುತ್ತಿದೆ.

ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ(Mamata Banerjee) ಅವರ ಉಲ್ಲೇಖವಿರುವ ಹಲವಾರು ಪತ್ರ ಹಾಗೂ ಸಿಡಿಗಳನ್ನು ಕೂಡ ವಶಪಡಿಸಿಕೊಂಡಿದೆ.

ಪಶ್ಚಿಮ ಬಂಗಾಳ ಅಲ್ಲದೆ ವಿವಿಧ ರಾಜ್ಯಗಳಲ್ಲಿ ಕೂಡ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗಳಲ್ಲಿ ಕೂಡ ಅಕ್ರಮಗಳಲ್ಲಿ ತೊಡಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ವರದಿ ಮಾಡಿದೆ.
Exit mobile version