ಏಕನಾಥ್‌ಶಿಂಧೆ ಸರ್ಕಾರ ಆರು ತಿಂಗಳಲ್ಲಿ ಪತನವಾಗಲಿದೆ : ಶರದ್‌ ಪವಾರ್

Eknath Shinde

ಮುಂಬೈ : ಬಿಜೆಪಿ(BJP) ಜೊತೆ ಸೇರಿ ರಚಿಸಿರುವ ಏಕನಾಥ್‌ ಶಿಂಧೆ(Eknath Shinde) ಸರ್ಕಾರ ಹೆಚ್ಚು ದಿನಗಳ ಕಾಲ ಆಡಳಿತ ನಡೆಸುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ಏಕನಾಥ್‌ ಶಿಂಧೆ ಸರ್ಕಾರ ಪತನವಾಗಲಿದೆ ಎಂದು ಎನ್ಸಿಪಿ(NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಭವಿಷ್ಯ ನುಡಿದಿದ್ದಾರೆ.

ಎನ್ಸಿಪಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಆರು ತಿಂಗಳಲ್ಲಿ ಏಕನಾಥ್‌ ಶಿಂಧೆ ಸರ್ಕಾರ ಪತನವಾಗಲಿದೆ. ಹೀಗಾಗಿ ನಮಗೆ ಕೇವಲ ಆರು ತಿಂಗಳು ಮಾತ್ರ ಅವಕಾಶವಿದ್ದು, ನಾವೆಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ದರಾಗಬೇಕಿದೆ. ಹೀಗಾಗಿ ಎನ್‌ಸಿಪಿ ಶಾಸಕರು ತಮ್ಮ ಕ್ಷೇತ್ರಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಾ, ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.
ಸದ್ಯ ಏಕನಾಥ್‌ಶಿಂಧೆ ಸರ್ಕಾರವನ್ನು ಬೆಂಬಲಿಸುತ್ತಿರುವ ಅನೇಕ ಶಾಸಕರಿಗೆ ಸದ್ಯದ ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನವಿದೆ.

ಸರ್ಕಾರ ರಚನೆಯಾಗಿ, ಖಾತೆ ಹಂಚಿಕೆಯಾದ ಬಳಿಕ ಈ ಅಸಮಾಧಾನ ಸ್ಪೋಟಗೊಳ್ಳಲಿದೆ. ಆಗ ಅನೇಕ ಶಾಸಕರು ಸರ್ಕಾರದ ವಿರುದ್ದ ತಿರುಗಿ ಬೀಳಲಿದ್ದಾರೆ. ಅಂತಿಮವಾಗಿ ಏಕನಾಥ್‌ ಶಿಂಧೆ ಸರ್ಕಾರ ಪತನವಾಗಲಿದೆ. ಹೀಗಾಗಿ ನಾವೆಲ್ಲರೂ ಚುನಾವಣೆಗೆ ತಯಾರಬೇಕೆಂದು ಶರದ್‌ ಪವಾರ್‌ಹೇಳಿದ್ದಾರೆ. ಇನ್ನು ಇಂದು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಪರವಾಗಿ ೧೬೪ ಶಾಸಕರು ಮತಚಲಾಯಿಸಿದರು.

ವಿರುದ್ದವಾಗಿ ೯೯ ಶಾಸಕರು ಮತ ಚಲಾಯಿಸಿದರು. ಈ ಮೂಲಕ ಬಿಜೆಪಿ ಬೆಂಬಲಿತ ಶಿವಸೇನೆ ಬಂಡಾಯ ಸರ್ಕಾರ ಅಧಿಕಾರ ಹಿಡಿದಿದೆ. ಇನ್ನು ಬಿಜೆಪಿಯ ದೇವೇಂದ್ರ ಫಡ್ನವೀಸ್‌(Devendra Fadnavis) ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Exit mobile version