ಚುನಾವಣಾ ಬಾಂಡ್ ಹಗರಣ ಭಾಗ-3: ಬಯಲಾಗುತ್ತಿದೆ ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ!

ಚುನಾವಣಾ ಬಾಂಡ್ ಹಗರಣ (Electoral Bond Scam) ಇಡೀ ದೇಶವನ್ನೇ ಬೆಚ್ಚಿ (Electoral Bond Scam Part3) ಬೀಳಿಸಿದ ಭಯಾನಕ ಹಗರಣ. ಈ ಹಗರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೂಲಕ ರಾಜಕೀಯ ಪಕ್ಷಗಳು ಹಾಗೂ ಕೆಲವು ಕಂಪನಿಗಳು ನಡೆಸಿದ ವ್ಯವಹಾರದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಒಂದೊಂದೇ ಮಾಹಿತಿಯನ್ನ

ಹೊರ ಕಕ್ಕಿಸಿತ್ತು. ಆಗ ಮುಖವಾಡ ಹಾಕಿಕೊಂಡಿದ್ದ ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್ ಗೋಲ್‌ಮಾಲ್‌ ಹಾಗೂ ದೇಣಿಗೆ ನೀಡಿದ ದಾನಿಗಳ ಬಂಡವಾಳ ಬಯಲಾಯಿತು.

ಈ ಚುನಾವಣಾ ಬಾಂಡ್ ಸ್ಕ್ಯಾಮ್ ಅಲ್ಲಿ ಪಾಲುದಾರರಾಗಿದ್ದ ನಕಲಿ ಮತ್ತು ಕಪ್ಪು ಹಣದ ನೀಡಿದ ಕಾರ್ಪೊರೇಟ್ ಕಂಪನಿಗಳ ಕರಾಳ ಮುಖದ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಆದರೆ ಹೈದರಾಬಾದಿನ

‘ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEGHA ENGINEERING AND INFRASTRUCTURES LTD) ಯಾವ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ದೇಣಿಗೆ

ನೀಡಿದೆ ಎನ್ನುವ ಸಂಪೂರ್ಣ ಮಾಹಿತಿ ಹೀಗಿದೆ.

ಖರೀದಿದಾರರ ಹೆಸರು: ಮೇಘಾ ಇಂಜಿನೀಯರಿಂಗ್ ಗ್ರೂಪ್ ಕಂಪನಿ
ದೇಣಿಗೆಯ ಒಟ್ಟು ಮೊತ್ತ : 966 ಕೋಟಿ ರೂ
೧. ಪಕ್ಷದ ಹೆಸರು: ಭಾರತೀಯ ಜನತಾ ಪಕ್ಷ,
ದೇಣಿಗೆಯ ಒಟ್ಟು ಮೊತ್ತ: 664 ಕೋಟಿ ರೂ.
೨. ಪಕ್ಷದ ಹೆಸರು: ಬಿ.ಆರ್.ಎಸ್ (BRS)
ದೇಣಿಗೆಯ ಒಟ್ಟು ಮೊತ್ತ: 195 ಕೋಟಿ ರೂ.

‘ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಬಿಜೆಪಿ (BJP) ಮತ್ತು ಬಿ.ಆರ್.ಎಸ್ ಜೊತೆಗೆ ಕಾಂಗ್ರೆಸ್‌ ಸೇರಿದಂತೆ ಇನ್ನಿತರ ಪಕ್ಷಗಳ ಚುನಾವಣಾ ಬಾಂಡನ್ನು ಏಪ್ರಿಲ್ (April) 2019 ಮತ್ತು

ಜನವರಿ 2024ರ ನಡುವೆ ಖರೀದಿಸಿತ್ತು. ಆದರೆ ಇದು ಅತೀ ಹೆಚ್ಚು ದೇಣಿಗೆ ನೀಡಿರುವುದು ಮಾತ್ರ ಭಾರತೀಯ ಜನತಾ ಪಕ್ಷಕ್ಕೆ. ಈ ಮಾಹಿತಿಯನ್ನು ಚುನಾವಣಾ ಆಯೋಗವು ಬಿಡುಗಡೆಗೊಳಿಸಿತ್ತು.

ದೇಣಿಗೆಗೆ ಪ್ರತಿಫಲವಾಗಿ ಸರ್ಕಾರದಿಂದ ಗುತ್ತಿಗೆ ರೂಪದಲ್ಲಿ ರಾಶಿ ರಾಶಿ ಯೋಜನೆಗಳು!
ಥಾಣೆ-ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ: 14,400 ಕೋಟಿ ರೂ.
ತೆಲಂಗಾಣ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಗುತ್ತಿಗೆ: 1.15 ಲಕ್ಷ ಕೋಟಿ ರೂ.
ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್: 152 ಕೋಟಿ ರೂ.
ಡಾ.ರೆಡ್ಡೀಸ್ ಲ್ಯಾಬರೇಟರಿ: 80 ಕೋಟಿ ರೂ.
ಟೊರೆಂಟ್ ಫಾರ್ಮಾಸೂಟಿಕಲ್ಸ್: 77.5 ಕೋಟಿ ರೂ.
ನ್ಯಾಟ್ಕೋ ಫಾರ್ಮಾ: 69.25 ಕೋಟಿ ರೂ.
ಬಯೋಕಾನ್ ಲಿಮಿಟೆಡ್: 6 ಕೋಟಿ ರೂ.
ಸಿಪ್ಲಾ: 39.2 ಕೋಟಿ ರೂ.

ಈ ಕಂಪೆನಿಗಳು ಯಾಕೆ? ಇಷ್ಟೊಂದು ಮುತುವರ್ಜಿವಹಿಸಿ ಚುನಾವಣಾ ಬಾಂಡ್ ಖರೀದಿಸಿವೆ. ಇವರಿಗೇನು ಲಾಭ? ಮುಂತಾದ ಅನೇಕ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ

ಕೊನೆಗೆ ಸಿಗೋ ಉತ್ತರ ಈ ಕಂಪೆನಿಗಳನ್ನು ಆಳುವ ರಾಜಕೀಯ (Electoral Bond Scam Part3) ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತವೆ. ಅದಕ್ಕಾಗಿ ಈ ಕಳ್ಳಾಟಗಳು.

ಇದನ್ನು ಓದಿ: ಲೋಕಸಮರ 2024: ಮತದಾನ ನಡೆಯುವ ದಿನ ರಾಜ್ಯಾದ್ಯಂತ ಸಾರ್ವತ್ರಿಕ ರಜೆ

ಭವ್ಯಶ್ರೀ ಆರ್.ಜೆ

Exit mobile version