ಯೂಟ್ಯೂಬ್‌ನಲ್ಲಿ 500 ಸಬ್ಸ್ಕ್ರೈಬರ್ಸ್ ಇದ್ದರೆ ಸಾಕು: ಭರ್ಜರಿ ಹಣ ಗಳಿಸ್ಬಹುದು ಗೊತ್ತಾ?

Tech News: ಜಗತ್ತಿನ ಅತಿ ದೊಡ್ಡ ವೀಡಿಯೋ ಪ್ಲಾಟ್‌ಫಾರ್ಮ್ ಆದ ಯೂಟ್ಯೂಬ್‌ನಲ್ಲಿ (Eligibility criteria for YouTube) ಬಹಳಷ್ಟು ಜನರು ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು

ಮತ್ತು ಸಾಕಷ್ಟು ಹಣವನ್ನು ಗಳಿಸುವುದನ್ನು ನಾವು ನೋಡುತ್ತೇವೆ ಮತ್ತು ಕೇಳುತ್ತೇವೆ. ಜೀವನೋಪಾಯಕ್ಕಾಗಿ ವಿಡಿಯೋ ಮಾಡಿ ಯೂಟ್ಯೂಬ್‌ಗೆ ವೀಡಿಯೋಗಳನ್ನು ಅಪ್‌ಲೋಡ್‌ ಮಾಡೋದನ್ನೇ

ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಅನೇಕ ಮಾಧ್ಯಮ ಸಂಸ್ಥೆಗಳಿಗೆ (Media Company) ಯೂಟ್ಯೂಬ್ ಆದಾಯದ ದೊಡ್ಡ ಮೂಲವಾಗಿದೆ.

ಆದಾಗ್ಯೂ, ಯೂಟ್ಯೂಬ್ ನಿಂದ ಹಣ ಗಳಿಸಲು, ಯೂಟ್ಯೂಬ್ ಪಾರ್ಟ್ನರ್ ಅರ್ಹತೆ (Youtube Partner Eligibility) ಪಡೆದಿರಬೇಕು. ಸದ್ಯ ಖುಷಿ ಸುದ್ದಿ ಏನೆಂದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ಗೆ

ಬೇಕಾದ ಅರ್ಹತಾ ಮಾನದಂಡಗಳನ್ನು ಸಡಿಲಿಸಲಾಗುತ್ತಿದೆ.. ಇದು ಕಾರ್ಯರೂಪಕ್ಕೆ ಬಂದರೆ, ಯೂಟ್ಯೂಬ್‌ನಲ್ಲಿ ಹಣ ಸಂಪಾದಿಸಲು ಬಯಸುವವರಿಗೆ ಇದು ಸುಲಭವಾಗುತ್ತದೆ.

ಇದನ್ನೂ ಓದಿ : ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ ಹೊಂದಬೇಕಾದರೆ ಕೆಲವೊಂದು ಮಾನದಂಡಗಳಿವೆ.ಅದರಲ್ಲಿ ನೀವು 1,000 ಚಂದಾದಾರರನ್ನು ಅಂದರೆ ಸ್ಕ್ರೈಬರ್ಸ್ (Subscribe) ಹೊಂದಿರಬೇಕು;

ವೀಡಿಯೊವು ಒಟ್ಟು 4,000 ಗಂಟೆಗಳ ವೀಕ್ಷಣೆಗಳನ್ನು ಹೊಂದಿರಬೇಕು; ಯೂಟ್ಯೂಬ್ ಶಾರ್ಟ್ಸ್ ವಿಡಿಯೋಗಳು (Shorts Video) 1 ಕೋಟಿ ವೀಕ್ಷಣೆ ಹೊಂದಿರಬೇಕು ಎಂಬಿತ್ಯಾದಿ ಷರತ್ತುಗಳಿವೆ.

500 ಸಬ್ಸ್ಕ್ರೈಬರ್ಸ್ ಸಾಕು ಸಂಪಾದನೆ ಶುರು ಮಾಡಲು :

ಆದರೆ ಇದೀಗ ಈ ನಿಟ್ಟಿನಲ್ಲಿ ಈಗ ಮೂರು ಮಾನದಂಡಗಳನ್ನು ಸಡಿಲಿಸಲಾಗಿದೆ. 1000 ಬದಲಿಗೆ 500 ಚಂದಾದಾರರು(ಸ್ಕ್ರೈಬರ್ಸ್) ಸಾಕು; 4000 ಗಂಟೆಗಳ ವೀಕ್ಷಣೆಯ ಬದಲು 3000 ಗಂಟೆಗಳ ವೀಕ್ಷಣೆ ಸಾಕು.

ಹಾಗೆಯೇ, ಶಾರ್ಟ್ಸ್ ವಿಡಿಯೋಗಳ ವೀಕ್ಷಣೆ 1 ಕೋಟಿ ಬದಲು 30 ಲಕ್ಷ ಇದ್ದರೆ ಸಾಕು ಎಂದು ಗೂಗಲ್ (Google) ಮಾಲೀಕತ್ವದ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ : 2023 ರ ಏಷ್ಯಾಕಪ್ ಟೂರ್ನಿ ಡೇಟ್ ಫಿಕ್ಸ್ : ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸಲಿದೆಯೇ… ಇಲ್ಲಿದೆ ಮಾಹಿತಿ

ಆದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ಗೆ ನೀವು ಅರ್ಹರಾಗಲು ಬೇಕಾದ ಬೇರೆಲ್ಲಾ ಮಾನದಂಡಗಳು ಹಾಗೇ ಮುಂದುವರಿಯುತ್ತವೆ. ಪ್ರಸ್ತುತ, ಈ ಹೊಸ ಮಾರ್ಪಾಡು ಮೊದಲು ಯುಎಸ್, ಯುಕೆ, ಕೆನಡಾ,

ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಜಾರಿಗೆ ಬರಲಿದೆ. ನಂತರ, ಅದನ್ನು ಬೇರೆಡೆ ಅಳವಡಿಸಬಹುದು. ಈ ಅವಕಾಶಕ್ಕಾಗಿ ಭಾರತೀಯ ಯೂಟ್ಯೂಬರ್‌ಗಳು ಇನ್ನೂ ಕೆಲವು ದಿನ ಕಾಯಬೇಕಾಗಬಹುದು.

ಒಮ್ಮೆ ನೀವು ನಿಮ್ಮ ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿದ ನಂತರ, ನೀವು ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ಗೆ ಅಪ್ಲೈ ಮಾಡಿದ್ದರಾಯ್ತು. ಒಮ್ಮೆ ನೀವು ಯೂಟ್ಯೂಬ್ನಿಗದಿಪಡಿಸಿದ ಮಾನದಂಡಗಳನ್ನು

ಪೂರೈಸಿದ ನಂತರ ಗಳಿಕೆಗಳು ತಾನಾಗಿಯೇ ಪ್ರಾರಂಭವಾಗುತ್ತವೆ. ಅಂದರೆ ಹಣಗಳಿಕೆ ಆಗಲು ಪ್ರಾರಂಭವಾಗುತ್ತದೆ. ನಿಮ್ಮ ವೀಡಿಯೊಗಳಲ್ಲಿ ಜಾಹೀರಾತುಗಳನ್ನು

(Advertisement) ಒದಗಿಸುವ ಮೂಲಕ Google ಆದಾಯವನ್ನು ಗಳಿಸುತ್ತದೆ.

ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ

ನೀವು ಯೂಟ್ಯೂಬ್ ಪಾಲುದಾರರಾಗಿದ್ದರೆ, ಯೂಟ್ಯೂಬ್ ಈ ಆದಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಟಿಪ್ಪಿಂಗ್, ಪೇಯ್ಡ್ ಚ್ಯಾಟ್, ಚಾನಲ್ ಮೆಂಬರ್ಶಿಪ್, ಶಾಪಿಂಗ್ ಫೀಚರ್, ಇತ್ಯಾದಿ ಹೊಸ ರೀತಿಯ

ಆದಾಯಮಾರ್ಗಗಳನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರುಗಳಿಗೆ (Video Creator) ಅವಕಾಶ ಮಾಡಿಕೊಡಲಾಗಿದೆ.

ಹಾಗೆಯೇ ಇನ್ನು ಮುಂದೆ ಯೂಟ್ಯೂಬ್ ವಿಡಿಯೋಗಳಿಗೆ ಮ್ಯೂಸಿಕ್ ಬಳಸಲು ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.ಏಕೆಂದರೆ ಫ್ರೀ ಆಗಿ ಹಂಚಿಕೆಯಾಗುವ ಕಾಪಿರೈಟ್ ಇಲ್ಲದ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್

ಇಟ್ಟಿದೆ.ತಮ್ಮ ಯೂಟ್ಯೂಬ್ ವಿಡಿಯೋಗಳಿಗೆ ಇದರಲ್ಲಿ ಯಾರು ಬೇಕಾದರೂ ಬಳಸಬಹುದು. ಯೂಟ್ಯೂಬ್ ನಿರಂತವಾಗಿ ಇಂತಹ ಮ್ಯೂಸಿಕ್ ಸಂಗ್ರಹವನ್ನು ಹೆಚ್ಚಿಸುತ್ತಲೇ ಇರುತ್ತದೆ.

ರಶ್ಮಿತಾ ಅನೀಶ್

Exit mobile version