ಕಂಗನಾ ರಣಾವತ್ (Kangana Ranavath) ಅವರು ಇಂದಿರಾ ಗಾಂಧಿ (Emergency Movie Date Release) ಪಾತ್ರ ಮಾಡುವುದರ ಜೊತೆಗೆ ‘ಎಮರ್ಜೆನ್ಸಿ’ ಸಿನಿಮಾದ ಚಿತ್ರವನ್ನು
ನಿರ್ದೇಶನ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷವೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಸಿನಿಮಾ ಕೆಲಸ ವಿಳಂಬವಾಗಿತ್ತು.
ಈಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಜೂನ್ (June) 14ರಂದು ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಮತ್ತಷ್ಟು ತಿಂಗಳು ಕಾಯಬೇಕಿದೆ.
ಇನ್ನು ಈ ‘ಎಮರ್ಜನ್ಸಿ’ (Emergency) ಚಿತ್ರದ ಘೋಷಣೆ ಮಾಡಿದಾಗಲೇ ಅಭಿಮಾನಿಗಳಲ್ಲಿ ಕೂತಹಲಕ್ಕೆ ಕಾರಣವಾಗಿತ್ತು. ಈ ಚಿತ್ರದಲ್ಲಿ ಇವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದು,
‘ಜೀ ಸ್ಟುಡಿಯೋಸ್’ ಮತ್ತು ‘ಮಣಿಕರ್ಣಿಕ ಫಿಲ್ಮ್ಸ್’ (Zee Studios’ and ‘Manikarnika Films’) ಈ ಚಿತ್ರವನ್ನು ಒಟ್ಟಾಗಿ ನಿರ್ಮಿಸಲಾಗುತ್ತಿದೆ. ಕಂಗನಾ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ
ನಾಲ್ಕು ಬರಿ ರಾಷ್ಟ್ರ (Emergency Movie Date Release) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ‘ಎಮರ್ಜೆನ್ಸಿ’ ಚಿತ್ರವು ಇಂದಿರಾ ಗಾಂಧಿ (Indira Gandhi) ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ಸಿನಿಮಾವನ್ನು ಮಾಡಲಾಗಿದೆ. ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಈ ಚಿತ್ರದ ಬಗ್ಗೆ ಇಟ್ಟುಕೊಂಡಿದ್ದು,
ಈ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಈ ಸಿನಿಮಾದ ಬಿಡುಗಡೆ ದಿನಾಂಕ ವಿಳಂಬ ಆಗುತ್ತಲೇ ಬಂದಿತ್ತು. ನವೆಂಬರ್ (November) 24ರಂದು ಈ ಸಿನಿಮಾ
ಬಿಡುಗಡೆಯಾಗಬೇಕಿತ್ತು.
ಇದೇ ವೇಳೆ ‘ಟೈಗರ್ 3’ (Tiger-3) ಸಿನಿಮಾ ಬಿಡುಗಡೆಯಾಗಿತ್ತು ಹಾಗಾಗಿ ಇದೆ ಕಾರಣದಿಂದ ‘ಎಮರ್ಜೆನ್ಸಿ’ ಚಿತ್ರ ಮುಂದೂಡಲಾಗಿತ್ತು ಎನ್ನಲಾಗಿತ್ತು. ಕಂಗನಾ ರಣಾವತ್ ಅವರು ಹೊಸ
ಪೋಸ್ಟರ್ ಹಂಚಿಕೊಂಡಿದ್ದಾರೆ ‘ಎಮರ್ಜೆನ್ಸಿ ಸಿನಿಮಾ ಈ ವರ್ಷ ಜೂನ್ 14ರಂದು ರಿಲೀಸ್ ಆಗಲಿದೆ’ ಎಂದು ಕಂಗನಾ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಚಿತ್ರದ ಕಥೆ, ನಿರ್ದೇಶನ ಹಾಗೂ ನಿರ್ಮಾಣದಲ್ಲೂ ಅವರ ಪಾಲಿದ್ದು, ಪೇಪರ್ನಲ್ಲಿ ‘ಎಮರ್ಜೆನ್ಸಿ’ ಎಂದು ಬರೆದಿದೆ. ಕಂಗನಾ ರಣಾವತ್ ಅವರು ಅನುಪಮ್ ಖೇರ್, ಮಹಿಮಾ ಚೌಧರಿ
(Anupam Kher, Mahima Chaudhary), ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಡೆ, ವಿಶಾಕ್ ನಾಯರ್, ಸತೀಶ್ ಕೌಶಿಕ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನು ಓದಿ: ಬಿಲ್ಕಿಸ್ ಬಾನು ಕೇಸ್: ಗೋಧ್ರಾ ಉಪ ಕಾರಾಗೃಹದಲ್ಲಿ ಶರಣಾದ 11 ಆರೋಪಿಗಳು
- ಭವ್ಯಶ್ರೀ ಆರ್ ಜೆ