ಕ್ರೀಡಾಪಟುಗಳ ಉತ್ತೇಜನಕ್ಕೆ 1000 ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ – ನರೇಂದ್ರ ಮೋದಿ

ನವದೆಹಲಿ ಆ 19 : ಭಾರತೀಯ ಕ್ರೀಡಾ ಪಟುಗಳು ಒಲಿಂಪಿಕ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನಲೆಯಲ್ಲಿ ದೇಶದ ಸ್ಥಳೀಯ ಕ್ರೀಡಾ ಪಟುಗಳನ್ನು ಉತ್ತೇಜಿಸುವ ಹಿನ್ನಲೆಯಲ್ಲಿ  ದೇಶಾದ್ಯಂತ ಸುಮಾರು 1000 ಖೇಲೋ ಇಂಡಿಯಾ ಕೇಂದ್ರ‌ಗಳ ಸ್ಥಾಪನೆ ಮಾಡುವುದಾಗಿ ಪ್ರಧಾನಿ ನರೇಂದ್ರ  ಮೋದಿ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಪ್ಯಾರಾ ಒಲಿಂಪಿಯನ್‌ಗಳು ಮತ್ತು ಅವರ ಪಾಲಕರು, ತರಬೇತುದಾರರ ಜೊತೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕೇಂದ್ರ ಸರ್ಕಾರ ಕ್ರೀಡಾಪಟುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ತಲುಪುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ  ದೇಶದಲ್ಲಿ 360 ಖೇಲೋ ಇಂಡಿಯಾ ಕೇಂದ್ರಗಳಿವೆ. ಈ ಸಂಖ್ಯೆ‌ಯನ್ನು 1000 ಕ್ಕೆ ಏರಿ‌ಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಕ್ರೀಡಾಪಟುಗಳು ದೇಶದ ಯಾವುದೇ ರಾಜ್ಯ, ಪ್ರದೇಶಗಳಿಗೆ ಸೇರಿದವರಾದರೂ, ಯಾವುದೇ ಭಾಷೆ ಮಾತನಾಡುವವರಾದರೂ ಅವರನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಸರ್ಕಾರ ಪ್ರಯತ್ನ ನಡೆಸುತ್ತದೆ. ದೇಶವು ಪದಕಕ್ಕಾಗಿ ಕ್ರೀಡಾಪಟುಗಳ ಮೇಲೆ ಒತ್ತಡ ಹೇರುವುದಿಲ್ಲ. ಬದಲಾಗಿ ಅತ್ಯುತ್ತಮ ಪ್ರದರ್ಶನ ಮಾತ್ರವೇ ಬಯಸುತ್ತದೆ. ಅವರ ಸೋಲು ಮತ್ತು ಗೆಲುವುಗಳಲ್ಲಿ  ದೇಶವೇ ಅವರ ಜೊತೆಗಿರಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

Exit mobile version