• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ವಿಶ್ವದಲ್ಲೇ ಮೊದಲ ಎಥೆನಾಲ್ ಕಾರು ಭಾರತದಲ್ಲಿ ಬಿಡುಗಡೆ! ಈ ಕಾರಿನ ವಿಶೇಷತೆ ಏನು ಗೊತ್ತಾ?

Rashmitha Anish by Rashmitha Anish
in Lifestyle, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ವಿಶ್ವದಲ್ಲೇ ಮೊದಲ ಎಥೆನಾಲ್ ಕಾರು ಭಾರತದಲ್ಲಿ ಬಿಡುಗಡೆ! ಈ ಕಾರಿನ ವಿಶೇಷತೆ ಏನು ಗೊತ್ತಾ?
0
SHARES
1.6k
VIEWS
Share on FacebookShare on Twitter

Delhi : ಸಾರಿಗೆ ಸಚಿವ ನಿತಿನ್‌ ಗಡ್ಕರಿ (ethanol car launched India)ಅವರು ಮಂಗಳವಾರ ಸಂಪೂರ್ಣವಾಗಿ ಎಥೆನಾಲ್‌ ಇಂಧನದಿಂದಲೇ ಚಲಾಯಿಸಬಹುದಾದ ಟೊಯೊಟಾ ಇನೋವಾ ಕಾರನ್ನು

(Toyota Innova HyCross) ಬಿಡುಗಡೆ ಮಾಡಿದ್ದಾರೆ. electrified flex fuel ಮತ್ತು BS-VI (Stage-II) ಕಾರು ಇದಾಗಿದೆ. ಸದ್ಯ ಈ ಕಾರು ಪ್ರಪಂಚದಲ್ಲಿಯೇ ಮೊಟ್ಟ ಮೊದಲನೆಯ

Flex – fuel ethanol powers car ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದರೆ ಈ ಇನೋವಾ ಕಾರು ಎಥೆನಾಲ್‌ ಅಥವಾ ಪೆಟ್ರೋಲ್‌ ಮೂಲಕವೂ ಕೂಡ ಚಲಿಸಲಿದೆ.

ಅಷ್ಟೇ ಅಲ್ಲದೆ ಈ ಕಾರು ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ವಿದ್ಯುತ್‌ಚಾಲಿತವಾಗಿ ಇವಿ ಮೋಡ್‌ನಲ್ಲಿಯೂ (EV Mode)ಚಲಿಸಲಿದೆ.

ethanol car launched India

ಪೆಟ್ರೋಲ್-ಡೀಸೆಲ್‌ಗೆ ಎಥೆನಾಲ್‌(Ethanol) ಅನ್ನು ಹೋಲಿಸಿದರೆ ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ಲಭ್ಯವಿದೆ. ಈ ಎಥೆನಾಲ್‌ ಅನ್ನು ಕಬ್ಬು, ಜೋಳ, ಬಾರ್ಲಿಯ ತ್ಯಾಜ್ಯವನ್ನು ಉಪಯೋಗಿಸಿ

ತಯಾರಿಸುತ್ತಾರೆ. ಪರಿಸರ ಮಾಲಿನ್ಯವೂ ಇದರಿಂದ ಕಡಿಮೆ ಎನ್ನಲಾಗಿದೆ. ಭವಿಷ್ಯದಲ್ಲಿ ಪಳೆಯುಳಿಕೆ ಇಂಧನಕ್ಕೆ ಎಥೆನಾಲ್‌ ಪರ್ಯಾಯವಾಗಲಿದೆ. ಸದ್ಯ ಬಿಡುಗಡೆಯಾಗಿರುವ ಈ ಟೊಯೊಟಾ

ಇನೋವಾ ಹೈ ಕ್ರಾಸ್‌ ಫ್ಲೆಕ್ಸ್‌ ಫ್ಯುಯೆಲ್‌ ಎಂಪಿವಿ ಕಾರಿನ ಮುಖ್ಯ ವಿಶೇಷತೆ ಏನೆಂದರೆ, ತಾನಾಗಿಯೇ ವಿದ್ಯುತ್‌ ಅನ್ನು ಕಾರು ಸ್ವತಃ ಉತ್ಪಾದಿಸಿಕೊಳ್ಳುತ್ತದೆ. ಎಲೆಕ್ಟ್ರಿಕ್‌ ಕಾರಿನಂತೆಯೂ ಇದನ್ನು ಚಲಾಯಿಸಬಹುದು.

ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಶಕ್ತಿ ಯೋಜನೆ ಕೊನೆಗೊಳ್ಳುತ್ತಿದೆ ಎಂಬ ಸುದ್ದಿ : ಯೋಜನೆ ಕೊನೆಯಾಗುತ್ತಾ, ಸರ್ಕಾರ ಏನು ಹೇಳುತ್ತೆ?

ಭವಿಷ್ಯದಲ್ಲಿ ಒಂದು ದಿನ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಖಾಲಿಯಾಗುತ್ತದೆ. ಹಾಗಾದರೆ ಆಗ ಏನು ಮಾಡಬೇಕು? ಎಥೆನಾಲ್ ಈ ಪ್ರಶ್ನೆಗೆ ಉತ್ತರಗಳಲ್ಲಿ ಒಂದಾಗಿದೆ. ಇದು

ರೈತರಿಗೆ ಆದಾಯದ ಮೂಲವೂ ಆಗಲಿದೆ. ವರದಿಗಳ ಪ್ರಕಾರ, 2030 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆಟೊಮೊಬೈಲ್‌ (Auto mobile) ಇಂಡಸ್ಟ್ರಿಯಾಗಲಿದೆ. ಮೋದಿ ಸರ್ಕಾರವು

ಆಟೋ ಉದ್ಯಮದ ಅಭಿವೃದ್ಧಿಗೆ 25,938 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಪಿಎಲ್‌ಐ(PLI) ಯೋಜನೆ ಅಂದರೆ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಸ್ಕೀಮ್.‌ ( Production linked incentive)

ಅನ್ನು ಸಹ (ethanol car launched India) ಜಾರಿಗೆ ತರಲಾಗಿದೆ.

ethanol car launched India

ಪ್ರಸ್ತುತ ಭಾರತವು ವಾರ್ಷಿಕ 16 ಬಿಲಿಯನ್ ಮೌಲ್ಯದ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಿಂದ ಸರ್ಕಾರದ ಹಣಕಾಸಿನ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ತೈಲ ಆಮದು

ನಿಲ್ಲಿಸಬೇಕಾದರೆ ಯಾವುದಾದರು ಪರ್ಯಾಯ ಇಂಧನದ ಅಗತ್ಯವಿದೆ. ತೈಲ ಆಮದು ಕಡಿಮೆಯಾದಷ್ಟೂ ದೇಶದ ಆರ್ಥಿಕತೆ ಉತ್ತಮವಾಗಿರುತ್ತದೆ. ಆದ್ದರಿಂದ ಎಥೆನಾಲ್ ಚಾಲಿತ ಕಾರುಗಳು

ನಮ್ಮೆಲ್ಲರ ಕನಸು ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ(Hardeep Puri) ಕಾರ್ಯಕ್ರಮದಲ್ಲಿ ಹೇಳಿದರು.

ಭಾರತ್ ಎನ್‌ಸಿಎಪಿಯಲ್ಲಿ ನಿತಿನ್ ಗಡ್ಕರಿ ಚಾಲನೆ:

ಇನ್ನು ಮುಂದೆ ದೇಶದಲ್ಲಿ ಕಾರುಗಳ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಾಗುವುದು! ಕಳೆದ ವರ್ಷ 2022-23ರಲ್ಲಿ ಭಾರತದಲ್ಲಿ 17,47,376 ವಾಹನಗಳು ಮಾರಾಟವಾಗಿವೆ. ಇದರರ್ಥ ದಿನಕ್ಕೆ

ಸರಾಸರಿ 4,787 ಕಾರುಗಳು ಗ್ರಾಹಕರ ಪಾಲಾಗಿದೆ. ಇನ್ನು ಇತರೆ ವಾಹನಗಳದ್ದೇ ಬೇರೆ ಲೆಕ್ಕ . ಇಷ್ಟು ದೊಡ್ಡ ಮಾರುಕಟ್ಟೆ ಭಾರತದಲ್ಲಿದೆ. ಸದ್ಯದ ಸ್ಥಿತಿ ಗತಿಯಲ್ಲಿ ಮಧ್ಯಮ ವರ್ಗದ ಜನರ ಆದಾಯ

ಕೂಡ ಈಗ ಹೆಚ್ಚುತ್ತಿದೆ.ಇತ್ತೀಚೆಗೆ ಕಾರು ಖರೀದಿ ಕೂಡ ಸಾಮಾನ್ಯವಾಗಿದೆ. ಎಥೆನಾಲ್‌ ಇತ್ಯಾದಿ ಪರ್ಯಾಯ ಇಂಧನಗಳ ಪ್ರಯೋಗಕ್ಕೂ ಇಂಥ ಸಂದರ್ಭದಲ್ಲಿ ಭಾರತ ಮುಕ್ತವಾಗಿರುವುದು ಗಮನಾರ್ಹ.

ಭಾರತದಲ್ಲಿ 1980-90ರಲ್ಲಿ ಫಿಯೆಟ್‌ ಪದ್ಮಿನಿ, ಮಾರುತಿ ಜೆನ್‌, ಕಾಂಟೆಸ್ಸಾ, ಮಾರುತಿ 1000, ಮಾರುತಿ ಒಮಿನಿ ಇತ್ಯಾದಿ ಕೆಲ ಮಾದರಿಗಳ ಕಾರುಗಳು ಮಾತ್ರ ಲಭ್ಯವಿದ್ದವು. ಆದರೆ ಈಗ ಮಾರುಕಟ್ಟೆಯಲ್ಲಿ

ಟಾಟಾ ಮೋಟಾರ್ಸ್‌, ಮಾರುತಿ, ಹುಂಡೈ, ಹೋಂಡಾ, ಮಹೀಂದ್ರಾ, ಕಿಯಾ, ರೆನಾಲ್ಟ್‌ ಮುಂತಾದ ಕಾರುಗಳು ಸೇರಿ ಒಟ್ಟು 35ಕ್ಕೂ ಹೆಚ್ಚು ದೇಶ-ವಿದೇಶಿ ಬ್ರಾಂಡ್‌ಗಳ ಕಾರುಗಳು ಭಾರತದಲ್ಲಿ ಲಭ್ಯವಿದೆ.

ರಶ್ಮಿತಾ ಅನೀಶ್

Tags: Automobilesethanolevmodeinnova hycross

Related News

ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಪ್ರಮುಖ ಸುದ್ದಿ

ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

September 24, 2023
ದುಬಾರಿ ಜಮೀನು : ಆಸ್ತಿಗಳ ಮೌಲ್ಯ ಪರಿಷ್ಕರಣೆ, ರಾಜ್ಯದಲ್ಲಿ ದುಬಾರಿಯಾಗುತ್ತಿದೆ ಭೂಮಿ ಮತ್ತು ನಿವೇಶನ ಮೌಲ್ಯ !
ಪ್ರಮುಖ ಸುದ್ದಿ

ದುಬಾರಿ ಜಮೀನು : ಆಸ್ತಿಗಳ ಮೌಲ್ಯ ಪರಿಷ್ಕರಣೆ, ರಾಜ್ಯದಲ್ಲಿ ದುಬಾರಿಯಾಗುತ್ತಿದೆ ಭೂಮಿ ಮತ್ತು ನಿವೇಶನ ಮೌಲ್ಯ !

September 24, 2023
ವಿಶ್ವಕಪ್ ಟೂರ್ನಿ : ವಿಜೇತರಿಗೆ 33.24 ಕೋ., ರನ್ನರ್ ಅಪ್ ತಂಡಕ್ಕೆ16.62 ಕೋಟಿ ರೂ.ಬಹುಮಾನ ಘೋಷಿಸಿದ ಐಸಿಸಿ
Sports

ವಿಶ್ವಕಪ್ ಟೂರ್ನಿ : ವಿಜೇತರಿಗೆ 33.24 ಕೋ., ರನ್ನರ್ ಅಪ್ ತಂಡಕ್ಕೆ16.62 ಕೋಟಿ ರೂ.ಬಹುಮಾನ ಘೋಷಿಸಿದ ಐಸಿಸಿ

September 24, 2023
ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ
ಪ್ರಮುಖ ಸುದ್ದಿ

ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ

September 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.