`ಇವಿಎಂ ಹ್ಯಾಕ್ಗೆ’ ಯೋಗಿ ಆದಿತ್ಯನಾಥ್ ಸೂತ್ರಧಾರಿ : ಅಖಿಲೇಶ್ ಯಾದವ್!

evm

ಉತ್ತರಪ್ರದೇಶ ಚುನಾವಣೆ ಫಲಿತಾಂಶ ಇನ್ನೇನು ಸಮೀಪಿಸುತ್ತಿರುವ ಬೆನ್ನಲ್ಲೇ, ವಾರಣಾಸಿಯಲ್ಲಿ ಇವಿಎಂ ಹ್ಯಾಕ್ ಕಾಣಿಸಿಕೊಂಡಿದ್ದು, ಇದಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರಪ್ರದೇಶ ಚುನಾವಣೆಯ ಫಲಿತಾಂಶ ಹೊರಬಿಳುವ ಮುನ್ನ ಮತಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಕೇಂದ್ರದಿಂದ ವಿದ್ಯುನ್ಮಾನ ಇವಿಎಂಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಯೋಗಿ ಸರ್ಕಾರವೇ ಇಂಥ ಕಳ್ಳತನ ಕೆಲಸ ಮಾಡುತ್ತಿರುವುದು ಎಂದು ನೇರವಾಗಿ ಆರೋಪಿಸಿದ್ದಾರೆ.

ಇದೇ 2017ರ ಚುನಾವಣೆಗಳಲ್ಲಿ ರಾಜ್ಯದ ನಾನಾ ಭಾಗಗಳು ಸೇರಿದಂತೆ ಒಟ್ಟು 50 ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರ 5 ಸಾವಿರ ಮತಗಳಿಗೂ ಕಡಿಮೆಯಿತ್ತು ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ಹೇಳಿದ್ದಾರೆ. ಈಗಾಗಲೇ ಸಾಕಷ್ಟು ವಿಡಿಯೊಗಳಲ್ಲಿ ನೀವು ನೋಡಿದ್ದೀರಾ, ಎರಡು ಮೂರು ಲಾರಿಗಳ ತುಂಬ ಇವಿಎಂ ಯಂತ್ರಗಳು ಸಿಕ್ಕಿಬಿದ್ದಿವೆ. ಈ ಬಗ್ಗೆ ವಾರಣಾಸಿ ಜಿಲ್ಲಾಧಿಕಾರಿಗಳಾದ ಕೌಶಲ್ ರಾಜ್ ಶರ್ಮಾ ಮಾತನಾಡಿ, ಲಾರಿಯಲ್ಲಿ ಇದ್ದ ಯಾವುದೇ ಇವಿಎಂಗಳ ಬಳಕೆಯಾಗಿಲ್ಲ! ಅದೆಲ್ಲಾ ಬಳಕೆಯಾಗದ ಇವಿಎಂಗಳು ಎಂದು ತಿಳಿಸಿದ್ದಾರೆ.

ನಾವು ಜಿಲ್ಲಾಧಿಕಾರಿಗಳ ಮಾತನ್ನು ಒಪ್ಪುವುದಿಲ್ಲ! ವಾರಣಾಸಿಯಲ್ಲಿ ಬರುತ್ತಿದ್ದ ಎರಡು ಲಾರಿಯಲ್ಲಿ ಒಂದು ಲಾರಿಯನ್ನು ತಡೆದು ನಿಲ್ಲಿಸಿದೆವು, ಈ ಮಧ್ಯೆ ಅಲ್ಲಿಂದ ಶೀಘ್ರವೇ ಮತ್ತರೆಡು ಲಾರಿಗಳು ಪರಾರಿಯಾಗಿವೆ! ಯಾವುದೇ ತೊಂದರೆ ಇಲ್ಲ ಎಂದ ಮೇಲೆ ಆ ಎರಡು ಲಾರಿಗಳು ಯಾಕೆ ಪರಾರಿಯಾಗಬೇಕಿತ್ತು? ಪರಾರಿಯಾಗುವ ಅವಶ್ಯಕತೆ ಏನ್ನಿತ್ತು? ಎಂದು ಪ್ರಶ್ನಿಸಿದ್ದಾರೆ.

Exit mobile version