ಅಬಕಾರಿ ಶಾಕ್‌: ರಾಜ್ಯದಲ್ಲಿ ಮದ್ಯ ಮಾರಾಟ ಕಡಿಮೆ ಹಿನ್ನೆಲೆ, ಅಬಕಾರಿ ಇಲಾಖೆಯ ಆದಾಯ ಧಿಡೀರ್ ಕುಸಿತ !

Bengaluru: ರಾಜ್ಯದಲ್ಲಿ ಮದ್ಯದ ಬೆಲೆಗಳು ಜಾಸ್ತಿಯಾದ ಬಳಿಕ ಮದ್ಯದ ಒಟ್ಟಾರೆ (Excise department revenue decline) ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಅಂಕಿ ಅಂಶಗಳು

ಸ್ಪಷ್ಟಪಡಿಸಿವೆ. ಸಾಮಾನ್ಯವಾಗಿ 61 ಲಕ್ಷದಷ್ಟು ಮದ್ಯದ ಕಾರ್ಟನ್ ಗಳು ಪ್ರತಿದಿನ ಮಾರಾಟವಾಗುತ್ತಿದ್ದವು. ಆದರೆ ಕೇವಲ 18.8 ಲಕ್ಷ ಕಾರ್ಟನ್ ಗಳು (Carton) ಆಗಸ್ಟ್ ನ ಮೊದಲ 14 ದಿನದಲ್ಲಿ

ಮಾರಾಟವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಆಗಸ್ಟ್ ನಲ್ಲಿ ಕೇವಲ 37 ಲಕ್ಷ ಕಾರ್ಟನ್ ಗಳು ಮಾತ್ರ ಮಾರಾಟವಾಗಲಿವೆ ಎಂದು ಹೇಳಲಾಗಿದೆ. ಅಬಕಾರಿ ಇಲಾಖೆಯ

ಆದಾಯವೂ ಕುಸಿತವಾಗಿದೆ ಎಂದು ಇನ್ನೊಂದೆಡೆ (Excise department revenue decline) ಮೂಲಗಳು ತಿಳಿಸಿವೆ.

ಮದ್ಯದ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಗೆ ಮಾಡಿರುವ ವಿಷಯ ಎಲ್ಲೆರಿಗೂ ತಿಳಿದಿದೆ. ಮದ್ಯದ ಮೇಲೆ ಎಷ್ಟೇ ದುಡ್ಡು ಹೆಚ್ಚಾದ್ರು ಮದ್ಯ ಸೇವನೆ ಮಾಡುವವರು ಕುಡಿದೇ ಕುಡಿಯುತ್ತಾರೆ

ಎಂದು ಜನಸಾಮಾನ್ಯರು ಭಾವಿಸುವುದುಂಟು. ಆದರೆ ಮದ್ಯದಂಗಡಿಗಳು ಸರ್ಕಾರಕಕ್ಕೆ ನೀಡುವ ಮಾಸಿಕ ಲೆಕ್ಕಾಚಾರದ ಪ್ರಕಾರ, ಜನಸಾಮಾನ್ಯರ ಈ ಅನಿಸಿಕೆ ಈ ಬಾರಿ ಸುಳ್ಳಾಗಿದ್ದು, ಬಿಯರ್

(Beer) ಮಾರಾಟದಲ್ಲಿ ಒಂದಿಷ್ಟು ಏರಿಕೆ ಕಂಡುಬಂದಿದೆ. ಒಟ್ಟಾರೆಯಾಗಿ ರಾಜ್ಯದ ಮದ್ಯದಂಗಡಿಗಳ ಅಂಕಿ-ಅಂಶಗಳ ಪ್ರಕಾರ ಮದ್ಯ ಮಾರಾಟವು ಶೇ. 25ರಷ್ಟು ಇಳಿಮುಖವಾಗಿದೆ ಎಂದು ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಜು.7ರಂದು ಮಂಡಿಸಿದ್ದ 2023-24ನೇ ಸಾಲಿನ ಬಜೆಟ್ ನಲ್ಲಿ ದೇಶೀಯವಾಗಿ ಉತ್ಪಾದನೆಯಾಗುವ ಎಲ್ಲಾ ರೀತಿಯ ಮದ್ಯದ ಐಎಂಎಲ್

ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ : 350000 ಬಾಕ್ಸ್ ಕಿಂಗ್ ಫಿಷರ್ ಬಿಯರ್ ವಶಕ್ಕೆ ಪಡೆದ ಅಬಕಾರಿ ಇಲಾಖೆ..!

(IML) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಾಕ್ಸ್ ಮೇಲೆ ಶೇ.20ರಷ್ಟು ಹೆಚ್ಚಿಸಿದ್ದು, ಇನ್ನು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ. 175ನಿಂದ ಶೇ. 185ವರೆಗೆ ಹೆಚ್ಚಿಸಿದ್ದರು.

ದರ 25 ರೂ.ಗಳಿಂದ 45 ರೂ.ಗಳವರೆಗೆ ದೇಶೀಯ ಮದ್ಯದ ಪ್ರತಿ ಪೂರ್ತಿ ಬಾಟಲಿಯ ಮೇಲೆ ಹೆಚ್ಚಳವಾಗಿತ್ತು. ಬಿಯರ್ ಮೇಲೆ 15 ರಿಂದ 45 ರೂ.ಗಳವರೆಗೆ ಹೆಚ್ಚಳವಾಗಿತ್ತು. ಬೆಲೆ ಹೆಚ್ಚಳವಾಗಿದ್ದರಿಂದ

ಅನೇಕ ಮದ್ಯಪ್ರಿಯರು ಬಿಯರ್ ಬಾಟಲಿಗಳ ಮೊರೆ ಹೋಗಿದ್ದರು. ಇಷ್ಟಾದರೂ ಒಟ್ಟಾರೆ ಮಾರಾಟದಲ್ಲಿ ಶೇ.25ರಷ್ಟು ಇಳಿಮುಖವಾಗಲಿದೆ ಎಂದು ತಿಳಿಸಲಾಗಿದೆ.

ಜುಲೈ (July).7ರಂದು ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿದ್ದರು. ಹೊಸ ಮದ್ಯದ ದರ ಬಜೆಟ್ (Budget) ನಂತರದ ದಿನದಿಂದಲೇ ಜಾರಿಯಾಗಿರಲಿಲ್ಲ. ಅಬಕಾರಿ ಇಲಾಖೆಯೇ

ಹಳೆ ಸ್ಟಾಕ್ ಕ್ಲಿಯರ್ (Stock Clear) ಮಾಡಲು ಎಲ್ಲಾ ಮದ್ಯದಂಗಡಿಗಳಿಗೆ ಅವಕಾಶ ಕಲ್ಪಿಸಿತ್ತು. ಆದ್ರೆ ಮದ್ಯದ ದರ ಸದ್ಯದಲ್ಲೇ ಹೆಚ್ಚಾಗುವ ಸಾಧ್ಯತೆಯಿದೆಯೆಂದು ಅನೇಕ ಮದ್ಯಪ್ರಿಯರು

ಹೆಚ್ಚಾಗಿ ಮದ್ಯವನ್ನು ಕೊಂಡಿದ್ದರು. ಹಾಗಾಗಿ, ಆ ತಿಂಗಳ ದಿನದ ಸರಾಸರಿ ಮಾರಾಟದಲ್ಲಿ ಶೇ.10ರಷ್ಟು ಏರಿಕೆಯಾಗಿತ್ತು. ಅಂದರೆ ಸರಾಸರಿ 65 ಲಕ್ಷ ಕಾರ್ಟನ್ ಗಳು ಮಾರಾಟವಾಗಿದ್ದವು.

ಇಲಾಖೆಗೆ 3,549 ಕೋಟಿ ರೂ. ಜೂನ್ ತಿಂಗಳಲ್ಲಿ ಬಂದಿತ್ತು. ಜುಲೈನಲ್ಲಿ 2,980 ಕೋಟಿ ರೂ.ಗಳಷ್ಟು ಆದಾಯ ಬಂದಿತ್ತು, ಆದರೆ ಆಗಸ್ಟ್ ನಲ್ಲಿ ಇದು ಇಳಿಮುಖವಾಗುವ ಸಾಧ್ಯತೆಗಳು

ಇದೆ ಎಂದು ಹೇಳಲಾಗಿದೆ.

ಭವ್ಯಶ್ರೀ ಆರ್.ಜೆ

Exit mobile version