Washington : ಅಮೇರಿಕಾ ಸರ್ಕಾರದ ವಶದಲ್ಲಿ ಅನ್ಯಗ್ರಹ ಜೀವಿಗಳಿದ್ದು, ಅವುಗಳನ್ನು ಅಮೇರಿಕಾ (explosive statement about aliens) ಸರ್ಕಾರ ಕಳೆದ ಅನೇಕ ವರ್ಷಗಳಿಂದ ತನ್ನ ವಶದಲ್ಲಿ ಇರಿಸಿಕೊಂಡಿದೆ
ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರುಶ್ (David Grush) ಹೇಳಿಕೆ ನೀಡಿದ್ದು, ಈ ಹೇಳಿಕೆ ಇದೀಗ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.

ವಾಷಿಂಗ್ಟನ್ನಲ್ಲಿ ಮೇಲ್ವಿಚಾರಣಾ ಸಮಿತಿಯ ಮುಂದೆ ಪ್ರಮಾಣ ವಚನದ ಅಡಿಯಲ್ಲಿ ಡೇವಿಡ್ ಗ್ರುಶ್ (David Grush) ಈ ಹೇಳಿಕೆಯನ್ನು ನೀಡಿದ್ದಾರೆ. ಅಮೇರಿಕಾ ಸರ್ಕಾರವು ಅನ್ಯಲೋಕದ ಬಾಹ್ಯಾಕಾಶ ನೌಕೆಗಳಿಗೆ
ಆಶ್ರಯ ನೀಡುತ್ತಿದೆ ಎಂದು ಕಳೆದ ಜೂನ್ನಲ್ಲಿ ಡೇವಿಡ್ ಗ್ರುಶ್ ಹೇಳಿಕೆ ನೀಡಿದ ನಂತರ ವಿಚಾರಣೆಯನ್ನು ನಿಗದಿಪಡಿಸಲಾಗಿತ್ತು. ಈ ವಿಚಾರಣೆಗೆ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಡೇವಿಡ್ ಗ್ರುಶ್ ಅವರು, ಅಮೇರಿಕಾ
ಸರ್ಕಾರವು UFO ಗಳು ಮತ್ತು ಮಾನವರಲ್ಲದ ದೇಹಗಳನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ ಸರ್ಕಾರವು ಅನ್ಯಗ್ರಹ ಜೀವಿಗಳ ಪುರಾವೆಗಳನ್ನು ಕಾಂಗ್ರೆಸ್ನಿಂದ ಮರೆಮಾಡುತ್ತಿದೆ.
ಅಪಘಾತಗೊಂಡ ನೌಕೆ’ಗಳಿಂದ ಪೈಲಟ್ಗಳು ಅಮೆರಿಕ ಸರ್ಕಾರದ ಬಳಿ ಇದ್ದಾರೆಯೇ ಎಂಬ ಪ್ರಶ್ನೆಗೆ, “ಸರ್ಕಾರ ವಶಪಡಿಸಿಕೊಂಡ ಕೆಲವು ವಸ್ತುಗಳ ಜತೆಗೆ ಜೀವಿಗಳೂ ಇದ್ದವು. ಈ ಜೀವಿಗಳು ಮನುಷ್ಯೇತರ ದೇಹಗಳಾಗಿವೆ.
ಈ ವಿಚಾರದ ಬಗ್ಗೆ ‘ನೇರ ತಿಳಿವಳಿಕೆ’ ಇರುವ ವ್ಯಕ್ತಿಗಳು ಇದನ್ನು ಖಚಿತಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಡೇವಿಡ್ ಗ್ರುಶ್ ಆರೋಪಗಳು ಅಮೇರಿಕಾದಲ್ಲಿ ಬೆಂಕಿಯ ಬಿರುಗಾಳಿಯನ್ನು ಎಬ್ಬಿಸಿದ ನಂತರ,
ರಿಪಬ್ಲಿಕನ್ (Republican) ಪಕ್ಷದ ಸಂಸದರ ನೇತೃತ್ವದ ಮೇಲ್ವಿಚಾರಣಾ ಸಮಿತಿಯು ತನಿಖೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇನ್ನೊಂದೆಡೆ ವಿಚಾರಣೆಯ ಸಮಯದಲ್ಲಿ, ಡೇವಿಡ್ ಗ್ರುಶ್ ಅವರು,
ನಾನು ಅನ್ಯಲೋಕದ ಜೀವಿಗಳ ದೇಹವನ್ನು ನೋಡಿಲ್ಲ ಎಂದು (explosive statement about aliens) ಒಪ್ಪಿಕೊಂಡಿದ್ದಾರೆ.

ಡೇವಿಡ್ ಗ್ರುಶ್ ಅವರ ಹೇಳಿಕೆಗಳನ್ನು ಅಮೇರಿಕಾ ಸರ್ಕಾರ ನಿರಾಕರಿಸಿದೆ. ರಕ್ಷಣಾ ಇಲಾಖೆಯ ವಕ್ತಾರರು ಈ ಕುರಿತು ಹೇಳಿಕೆ ನೀಡಿದ್ದು, “ಭೂಮ್ಯತೀತ ವಸ್ತುಗಳ ಸ್ವಾಧೀನ ಅಥವಾ ರಿವರ್ಸ್-ಎಂಜಿನಿಯರಿಂಗ್ಗೆ
(Reverse-Engineering) ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ಹಿಂದೆ ಅಸ್ತಿತ್ವದಲ್ಲಿವೆ ಅಥವಾ ಪ್ರಸ್ತುತ ಅಸ್ತಿತ್ವದಲ್ಲಿವೆ ಎಂದು ಸಮರ್ಥಿಸಲು ಯಾವುದೇ ಪರಿಶೀಲಿಸಬಹುದಾದ ಮಾಹಿತಿ ನಮ್ಮ
ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.