ಬಸಳೆ ಸೊಪ್ಪಿನ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳಿತು? ; ಇಲ್ಲಿದೆ ಮಾಹಿತಿ

facts

ತರಕಾರಿ(Vegetables) ಸೇವನೆಯಲ್ಲಿ ಅತ್ಯುತ್ತಮ ಕಬ್ಬಿಣಾಂಶವನ್ನು(Iron) ಹೊಂದಿರುವ ಸೊಪ್ಪು ಅಂದ್ರೆ ಅದು ಬಸಳೆ ಸೊಪ್ಪು(Malabar Spinach) ಎಂಬ ಸಂಗತಿ ಅನೇಕರಿಗೆ ತಿಳಿದಿದೆ. ಇದಲ್ಲದೆ ಬಸಳೆ ಸೊಪ್ಪಿನ ಸೇವನೆಯನ್ನು ರೂಢಿಸಿಕೊಳ್ಳುವುದರಿಂದ ದೇಹಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಇವೆ ಎಂಬುದನ್ನು ತಿಳಿಯೋಣ ಮುಂದೆ ಓದಿ. ತಡಮಾಡದೆ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರುವ ಹಾಗೆ ಕಬ್ಬಿಣಾಂಶ ಮತ್ತು ಹಿಮೋಗ್ಲೋಬಿನ್(Himoglobin) ಕೊರತೆ ನಮ್ಮಲ್ಲಿ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ.

ರೋಗಗಳಿಂದ ದೂರವಿರಲು ಸಾಮಾನ್ಯವಾಗಿ ವೈದ್ಯರು(Doctors) ಹಸಿರು ಸೊಪ್ಪುಗಳನ್ನು ಮತ್ತು ತರಕಾರಿಗಳನ್ನು, ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಮನುಷ್ಯನ ಆರೋಗ್ಯವನ್ನು ಕಾಪಾಡಲು ಯಾವ ಯಾವ ಆಹಾರ ಪದಾರ್ಥಗಳು, ಯಾವ ಯಾವ ಸಮಯ ಸಂದರ್ಭದಲ್ಲಿ ಸಹಾಯ ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಹಾಗಾಗಿ ಕಾಲ ಕಾಲಕ್ಕೆ ಸಿಗುವಂತಹ ಸೊಪ್ಪುಗಳಾಗಿರಬಹುದು, ತರಕಾರಿಗಳು ಮತ್ತು ಹಣ್ಣು- ಹಂಪಲುಗಳನ್ನು ನಾವು ಸೇವನೆ ಮಾಡುತ್ತಿರಬೇಕು.

ನಾವು ಸೇವಿಸುವ ಹಲವು ಬಗೆಯ ತರಕಾರಿಗಳು ಅದರ ಮಹತ್ವ ನಮಗೆ ಕೆಲವು ಬಾರಿ ತಿಳಿದಿರುವುದಿಲ್ಲ. ಅಂತಹ ಪೌಷ್ಟಿಕಾಂಶವನ್ನು ಹೊಂದಿರುವ ಗುಂಪಿಗೆ ಸೇರಿರುವ ಸೊಪ್ಪು ಅಂದ್ರೆ ಅದು ಬಸಳೆ ಸೊಪ್ಪು ಮತ್ತು ಈ ಒಂದು ಸೊಪ್ಪಿನಲ್ಲಿ ಕೂಡ ಹಲವು ವಿಧಗಳಿವೆ ಅವುಗಳೆಂದರೆ ಹಸಿರು ಬಸಳೆ, ಕೆಂಪು ಬಸಳೆ, ನೆಲಬಸಳೆ ಇತ್ಯಾದಿಗಳು. ಈ ಬಸಳೆಯು ಒಂದು ಬಳ್ಳಿ ಜಾತಿಯ ಸಸ್ಯವಾಗಿದೆ ಮತ್ತು ಇದನ್ನು ಹೆಚ್ಚಾಗಿ ನೀರು ಹರಿಯುವ ಜಾಗದಲ್ಲಿ ಬೆಳೆಸಲಾಗುತ್ತದೆ. ಇದರ ಎಲೆಗಳು ದಪ್ಪವಾಗಿರುತ್ತದೆ ಮತ್ತು ಇದರ ಹೂವುಗಳು ಬಿಳಿ ಬಣ್ಣದಲ್ಲಿ ಇರುತ್ತದೆ ಮತ್ತು ಈ ಗಿಡ ತುಂಬಾನೇ ಚಿಕ್ಕದಾಗಿರುತ್ತದೆ.

ಇದರ ಬೀಜಗಳಿಂದ ಹಾಗೂ ಇದರ ಕಾಂಡಗಳಿಂದ ಬಸಳೆ ಗಿಡವನ್ನು ಸಹ ಬೆಳೆಸಬಹುದು. ಇನ್ನು ಈ ಸೊಪ್ಪಿನಿಂದ ಅಡುಗೆಯ ಸಾಂಬಾರು ಮತ್ತು ಪಲ್ಯ, ಬಜ್ಜಿ ಮತ್ತು ಇತ್ಯಾದಿ ಬಗೆಯ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಇದು ಅಡುಗೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಔಷಧಿ ಇರುವಂತಹ ಸಸ್ಯವಾಗಿದೆ. ಇನ್ನು ಈ ಒಂದು ಬಸಳೆ ಸೊಪ್ಪು ಯಾವೆಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂದು ನೋಡುವುದಾದರೆ. ಇದರಲ್ಲಿ ಹೇರಳವಾದ ಪ್ರೋಟಿನ್ ಇದೆ ಮತ್ತು ವಿಟಮಿನ್ (B) ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ ಮತ್ತು ವಿಟಮಿನ್ (B1) (B12) (B6) ಇದೆ ನಿಯಾಸಿನ್ ಇದೆ.

ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನೀಷಿಯಂ ರಂಜಕ, ಪೊಟಾಶಿಯಂ ಮತ್ತು ಝಿಂಕ್ ಕೊಡ ಇದರಲ್ಲಿ ಇದೆ. ಇಷ್ಟೆಲ್ಲಾ ಪೌಷ್ಟಿಕಾಂಶಗಳನ್ನ ಒಳಗೊಂಡಿರುವಂತಹ ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಯಿಲೆ ಯಿಂದ ದೂರವಿರಬಹುದು.

Exit mobile version