1840 ರ ಲೆಕ್ಸ್ ಲೋಕಿ (facts about UCC) ವರದಿಯು ಅಪರಾಧಗಳು, ಸಾಕ್ಷ್ಯಗಳು ಮತ್ತು ಒಪ್ಪಂದಕ್ಕೆ ಸಂಬಂಧಿಸಿದಂತೆ ಏಕರೂಪದ ಕಾನೂನುಗಳನ್ನು ರೂಪಿಸಿತು. ಆದರೆ ಹಿಂದೂಗಳು ಮತ್ತು
ಮುಸ್ಲಿಂಮರ ವೈಯಕ್ತಿಕ ಕಾನೂನುಗಳನ್ನು ರೂಪಿಸಲಿಲ್ಲ. ಇದು ಬ್ರಿಟಿಷ್ (British) ಸಾಮ್ರಾಜ್ಯದ ಡಿವೈಡ್ ಮತ್ತು ರೂಲ್ (Divide and Rule) ನೀತಿಯ ಭಾಗವಾಗಿತ್ತು. ವಿವಿಧ ಸಮುದಾಯಗಳ
ನಡುವಿನ ಏಕತೆಯನ್ನು ಮುರಿಯಲು ಮತ್ತು ಭಾರತದ ಮೇಲೆ ಆಳ್ವಿಕೆ ಮಾಡಲು ಬ್ರಿಟಿಷರಿಗೆ ಇದು (facts about UCC) ಅವಕಾಶ ಮಾಡಿಕೊಟ್ಟಿತು.

1937 ರ ಹಿಂದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆಯ ಅಂಗೀಕಾರವನ್ನು ದೇಶಮುಖ್ ಬಿಲ್ ಎಂದೂ ಕರೆಯಲಾಯಿತು. ನಂತರ ಇದು ಸಾಮಾನ್ಯ ಹಿಂದೂ ಕಾನೂನುಗಳ ಅಗತ್ಯವನ್ನು ನಿರ್ಧರಿಸಲು
ಸ್ಥಾಪಿಸಲಾದ ಬಿಎನ್ ರಾವು ಸಮಿತಿಯ ರಚನೆಗೆ ಕಾರಣವಾಯಿತು.
ಇದನ್ನು ಓದಿ: ಇದೀಗ ರಾಜ್ಯಾದ್ಯಂತ ಮತ್ತೆ ನಕಲಿ ನೋಟುಗಳ ಹಾವಳಿ; ಕೇವಲ ಎರಡು ದಿನದಲ್ಲಿ ನಾಲ್ಕು ಪ್ರಕರಣಗಳು ಬೆಳಕಿಗೆ!
‘ಏಕರೂಪ ನಾಗರಿಕ ಸಂಹಿತೆ’ ಎಂಬ ಪದವನ್ನು ಭಾರತೀಯ ಸಂವಿಧಾನದ ಭಾಗ 4, 44 ನೇ ವಿಧಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. “ಭಾರತದ ಭೂಪ್ರದೇಶದಾದ್ಯಂತ ನಾಗರಿಕರಿಗೆ ಏಕರೂಪದ
ನಾಗರಿಕ ಸಂಹಿತೆಯನ್ನು ಪಡೆಯಲು ರಾಜ್ಯವು ಪ್ರಯತ್ನಿಸುತ್ತದೆ.” ಎಂದು ಉಲ್ಲೇಖಿಸಲಾಗಿದೆ.
ವಿಚ್ಛೇದನವನ್ನು ಕಾನೂನುಬದ್ಧಗೊಳಿಸಿದ, ಬಹುಪತ್ನಿತ್ವವನ್ನು ವಿರೋಧಿಸಿ, ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕುಗಳನ್ನು ನೀಡುವ ಹಿಂದೂ ಕಾನೂನುಗಳನ್ನು ಸುಧಾರಿಸಲು
ಡಾ.ಬಿ.ಆರ್. ಅಂಬೇಡ್ಕರ್ (Dr.B.R.Ambedkar) ಅವರು ಹಿಂದೂ ಕೋಡ್ ಬಿಲ್ ಮಸೂದೆಯನ್ನು ರಚಿಸಿದರು.
ಭಾರತದಲ್ಲಿ ಮುಸ್ಲಿಂ (Muslim) , ಕ್ರಿಶ್ಚಿಯನ್ (Christian) ಮತ್ತು ಪಾರ್ಸಿಗಳಿಗೆ ಅವರ ಧಾರ್ಮಿಕ ಕಾನೂನುಗಳ ಅಡಿಯಲ್ಲೇ ಅವರ ವೈಯಕ್ತಿಕ ಕಾನೂನುಗಳಿವೆ. ಮುಸ್ಲಿಂಮರಿಗೆ ಷರಿಯಾ ಕಾನೂನಿನ
ಅಡಿಯಲ್ಲೇ ಅವರ ವೈಯಕ್ತಿಕ ಕಾನೂನಿದೆ. ಷರಿಯಾ ಪ್ರಕಾರವೇ ಅವರ ಮದುವೆ, ವಿಚ್ಚೇದನ, ಆಸ್ತಿ, ಉತ್ತರಾಧಿಕಾರತ್ವ ನಿರ್ಧಾರವಾಗುತ್ತದೆ.
ಸಾಮಾನ್ಯ ಕೌಟುಂಬಿಕ ಕಾನೂನಿನ ರೂಪದಲ್ಲಿ UCC ಹೊಂದಿರುವ ಏಕೈಕ ಭಾರತೀಯ ರಾಜ್ಯ ಗೋವಾ (Goa) . ಇಂದಿಗೂ ಜಾರಿಯಲ್ಲಿರುವ ಪೋರ್ಚುಗೀಸ್ ಸಿವಿಲ್ ಕೋಡ್ ಅನ್ನು 19 ನೇ ಶತಮಾನದಲ್ಲಿ
ಗೋವಾದಲ್ಲಿ ಪರಿಚಯಿಸಲಾಯಿತು ಮತ್ತು ಅದರ ವಿಮೋಚನೆಯ ನಂತರ ಅದನ್ನು ಬದಲಾಯಿಸಲಾಗಿಲ್ಲ.

ಗೋವಾದಲ್ಲಿನ ಏಕರೂಪ ನಾಗರಿಕ ಸಂಹಿತೆಯು ಪ್ರಗತಿಪರ ಕಾನೂನಾಗಿದ್ದು, ಇದು ಗಂಡ ಮತ್ತು ಹೆಂಡತಿಯ ನಡುವೆ ಮತ್ತು ಮಕ್ಕಳ ನಡುವೆ (ಲಿಂಗವನ್ನು ಲೆಕ್ಕಿಸದೆ) ಆದಾಯ ಮತ್ತು ಆಸ್ತಿಯ ಸಮಾನ
ವಿಭಜನೆಯನ್ನು ಅನುಮತಿಸುತ್ತದೆ. ಪ್ರತಿ ಜನನ, ಮದುವೆ ಮತ್ತು ಮರಣವನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ವಿಚ್ಛೇದನಕ್ಕೆ, ಹಲವಾರು ನಿಬಂಧನೆಗಳಿವೆ. ಗೋವಾದಲ್ಲಿ ತಮ್ಮ ವಿವಾಹವನ್ನು
ನೋಂದಾಯಿಸಿರುವ ಮುಸ್ಲಿಮರು ಬಹುಪತ್ನಿತ್ವ ಅಥವಾ ತ್ರಿವಳಿ ತಲಾಖ್ (Talaq) ಮೂಲಕ ವಿಚ್ಛೇದನವನ್ನು ಅಭ್ಯಾಸ ಮಾಡುವಂತಿಲ್ಲ.
ಪಾಕಿಸ್ತಾನ, ಬಾಂಗ್ಲಾದೇಶ (Bangladesh) , ಮಲೇಷಿಯಾ, ಟರ್ಕಿ, ಇಂಡೋನೇಷ್ಯಾ, ಸುಡಾನ್, ಈಜಿಪ್ಟ್(Egypt) ನಂತ ಕಟ್ಟರ್ ಮುಸ್ಲಿಂ ಬಹುಸಖ್ಯಾತ ದೇಶಗಳಲ್ಲೇ ಯುಸಿಸಿ ಜಾರಿಯಲ್ಲಿದೆ.
ಅಧಿಕೃತ ಮುಸ್ಲಿಂ ದೇಶವಾಗಿರುವ ಈಜಿಪ್ತನಲ್ಲಿ 80 ವರ್ಷಗಳ ಹಿಂದೆಯೇ ಇಸ್ಲಾಂ (Islam) ಧರ್ಮದ ಅವಿಭಾಜ್ಯ ಅಂಗವೆಂದು ಹೇಳುವ ತ್ರಿವಳಿ ತಲಾಖ್ ಅನ್ನು ನಿಷೇಧ ಮಾಡಲಾಗಿದೆ. ಅದೇ ರೀತಿ ಎಲ್ಲ
ಧರ್ಮದ ಜನರಿಗೂ ಸಮಾನ ಕಾನೂನು ರಚಿಸಲಾಗಿದೆ.