ಕಣ್ಣೀರಿನಿಂದ ತಿಳಿಯಬಹುದಾದ ಕಣ್ಣಿನ ಸಮಸ್ಯೆಗಳ ಮಾಹಿತಿ ಇಲ್ಲಿದೆ ತಪ್ಪದೆ ಓದಿ

ಸಾಮಾನ್ಯವಾಗಿ ಮನಸ್ಸಿಗೆ ನೋವಾದಾಗ ಕಣ್ಣೀರು(Facts Of Eyes Tears) ಬರುತ್ತದೆ. ಮನಸ್ಸಿನ ನೋವು, ದುಃಖವನ್ನು ಕಣ್ಣೀರಿನ ಮೂಲಕ ಹೊರ ಹಾಕುತ್ತೇವೆ.

ಕಣ್ಣೀರು ನಿಮ್ಮ ಕಣ್ಣುಗಳಲ್ಲಿನ ಅಗತ್ಯ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ, ಕಣಗಳು ಹಾಗೂ ಧೂಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಕಣ್ಣೀರು ಪ್ರತಿರಕ್ಷಣಾ ವ್ಯವಸ್ಥೆಯ ಒಂದು ಭಾಗವಾಗಿದ್ದು, ನಿಮ್ಮನ್ನು ಸೋಂಕಿನಿಂದ ರಕ್ಷಿಸಲು ಸಹಕಾರಿಯಾಗಿದೆ. ನೀರು ಮತ್ತು ಉಪ್ಪನ್ನು ಒಳಗೊಂಡಿರುವ ಈ ಕಣ್ಣೀರು,

ಕಣ್ಣುರೆಪ್ಪೆಗಳ ಚರ್ಮದ ಅಡಿಯಲ್ಲಿರುವ ಗ್ರಂಥಿಗಳಿಂದ ಹೊರಬರುತ್ತದೆ.

ಪ್ರತಿ ಬಾರಿ ನೀವು ಕಣ್ಣು ಮಿಟುಕಿಸಿದಾಗ ಕಣ್ಣೀರು ಕಣ್ಣಿನ ತುಂಬೆಲ್ಲಾ ಹರಡುತ್ತದೆ, ಈ ಮೂಲಕ ಕಣ್ಣುಗಳಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ.


ಎಪಿಫೊರಾ/ ಟಿಯರಿಂಗ್ ಸ್ಥಿತಿ : ಎಪಿಫೊರಾ ಅಥವಾ ಟಿಯರಿಂಗ್ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ, ನಿರಂತರವಾಗಿ ಕಣ್ಣುಗಳಿಂದ ಕಣ್ಣೀರು ಹೊರಬರುತ್ತದೆ.

ಈ ಸ್ಥಿತಿಯಲ್ಲಿ ಕಣ್ಣೀರು ಬಂದಾಗ ನಾವು ಕಣ್ಣನ್ನು ಬಲವಾಗಿ ಉಜ್ಜಿದರೆ ಕಣ್ಣು ಕೆಂಪಾಗುತ್ತದೆ.

ಸಾಮಾನ್ಯವಾಗಿ, ಚಿಕಿತ್ಸೆಯಿಲ್ಲದೆ ಕಣ್ಣುಗಳಲ್ಲಿ ಬರುವ ನೀರು ನಿಲ್ಲುತ್ತದೆ. ಆದರೆ ಎಪಿಫೊರಾ ಅಥವಾ ಟಿಯರಿಂಗ್ ಸ್ಥಿತಿಯಲ್ಲಿ, ಕಣ್ಣುಗಳಲ್ಲಿ ನೀರು ಬರುವುದು ಚಿಕಿತ್ಸೆಯಿಲ್ಲದೇ ನಿಲ್ಲುವುದಿಲ್ಲ.

ಇದನ್ನೂ ಓದಿ : https://vijayatimes.com/narco-test-to-aftab/


ಒಣಗಿದ ಕಣ್ಣುಗಳು : ಕಣ್ಣಿನಲ್ಲಿ ಕಣ್ಣೀರು ಸರಿಯಾಗಿ ಉತ್ಪತ್ತಿಯಾಗದೇ ಇದ್ದರೆ, ಕಣ್ಣು ಬೇಗನೆ ಒಣಗುತ್ತದೆ. ಇದರಿಂದ, ಕಣ್ಣಿನಲ್ಲಿ ನೀರು ಮತ್ತು ಎಣ್ಣೆಯ ಸರಿಯಾದ ಸಮತೋಲನ ಉಂಟಾಗುವುದಿಲ್ಲ.

ಈ ಸಮಸ್ಯೆ ಅತಿಯಾದಾಗ, ಕೆಲವೊಮ್ಮೆ ಕಣ್ಣು ಹೆಚ್ಚು ನೀರನ್ನು ಹೊರ ಹಾಕುವ ಮೂಲಕ ಶುಷ್ಕತೆಯನ್ನು ಸೂಚಿಸುತ್ತದೆ.


ಪಿಂಕೈ ಅಥವಾ ಕಾಂಜಂಕ್ಟಿವಿಟಿಸ್ : ಮಕ್ಕಳು ಮತ್ತು ವಯಸ್ಕರಲ್ಲಿ ಕಣ್ಣುಗಳಲ್ಲಿ ನಿರಂತರವಾಗಿ ನೀರು ಬರಲು ಸಾಮಾನ್ಯವಾದ ಕಾರಣವೇ ಪಿಂಕೈ.

ಇಂತಹ ಸ್ಥಿತಿಯಲ್ಲಿ ಕಣ್ಣುಗಳು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತವೆ, ಕಣ್ಣುಗಳಲ್ಲಿ ತುರಿಕೆ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಸ್‌ನ ಸೋಂಕು ಪಿಂಕೈಗೆ ಪ್ರಮುಖ ಕಾರಣ ಎನ್ನುತ್ತದೆ ಸಂಶೋಧನೆ.


ಅಲರ್ಜಿ : ಕೆಮ್ಮು, ಸುರಿಯುತ್ತಿರುವ ಮೂಗು ಮತ್ತು ಇತರ ಅಲರ್ಜಿಯ ಲಕ್ಷಣಗಳಿದ್ದರೆ ಆಗಾಗ ಕಣ್ಣೀರು, ತುರಿಕೆ ಉಂಟಾಗುತ್ತದೆ. ಕೆಲವು ಕಾರಣಗಳು ಕಣ್ಣಿನ ಅಲರ್ಜಿಗೂ ಕಾರಣವಾಗುತ್ತವೆ.

ಹಾಗಾಗಿ ಕಣ್ಣುಗಳ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ.


ನಿರ್ಬಂಧವಾದ ಕಣ್ಣೀರಿನ ನಾಳ : ಕಣ್ಣಿನ ಮೇಲ್ಭಾಗದಲ್ಲಿರುವ ಕಣ್ಣೀರಿನ ಗ್ರಂಥಿಗಳಿಂದ ಕಣ್ಣೀರು ಹರಿಯುತ್ತದೆ. ಕಣ್ಣೀರಿನ ನಾಳಗಳು ನಿರ್ಬಂಧಿಸಲ್ಪಟ್ಟಾಗ ಕಣ್ಣೀರು ರೂಪುಗೊಂಡರೂ, ಹೊರ ಬರಲು ಸಾಧ್ಯವಾಗುವುದಿಲ್ಲ.

ಸೋಂಕು, ಗಾಯ ಹಾಗೂ ವೃದ್ಧಾಪ್ಯವು ಈ ಸಮಸ್ಯೆಗೆ ಕಾರಣವಾಗಿರಬಹುದು.

ಇದನ್ನೂ ಓದಿ : https://vijayatimes.com/musk-sacked-indian-employees/


ಕಣ್ಣಿನ ಮೇಲೆ ಉಂಟಾದ ಗೀರುಗಳು : ಕಣಗಳು, ಧೂಳು ಹಾಗೂ ಕಾಂಟ್ಯಾಕ್ಟ್ ಲೆನ್ಸ್‌ಗಳಿಂದ ಕಾರ್ನಿಯಾದ ಮೇಲೆ ಗೀರುಗಳುಂಟಾಗುವ ಸಾಧ್ಯತೆಯಿರುತ್ತದೆ.

ಇದು ಕಣ್ಣುಗಳಿಂದ ಅತಿಯಾಗಿ ನೀರು ಬರಲು ಕಾರಣವಾಗುತ್ತದೆ.

ಕಣ್ಣು ತುಂಬಾ ಸೂಕ್ಷ್ಮ ಭಾಗವಾಗಿದ್ದು, ನೀವು ಕಾರ್ನಿಯಲ್ ಗೀರುಗಳನ್ನು ಹೊಂದಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಅಗತ್ಯವಾಗಿದೆ.


ರೆಪ್ಪೆಗೂದಲಿನ ತೊಂದರೆಗಳು : ಹುಬ್ಬಿನ ಕೂದಲು ಹೇಗೆ ತಪ್ಪು ದಿಕ್ಕಿನಲ್ಲಿ ಬೆಳೆಯುತ್ತದೆಯೋ, ಅದೇ ರೀತಿ ರೆಪ್ಪೆಗಳು ಕೂಡ ಕೆಲವೊಮ್ಮೆ ತಪ್ಪು ದಿಕ್ಕಿನಲ್ಲಿ ಬೆಳೆಯಬಹುದು.

ಇದು ಕಣ್ಣುಗಳಲ್ಲಿ ತುರಿಕೆಗೆ ಕಾರಣವಾಗುವ ಜೊತೆಗೆ ಕಣ್ಣೀರು ಬರಲು ಕಾರಣವಾಗುತ್ತದೆ.


ಬ್ಲೆಫರಿಟಿಸ್ : ಈ ತೊಂದರೆಯು ಕಣ್ಣು ರೆಪ್ಪೆಗಳಲ್ಲಿ ಊತವನ್ನುಂಟು ಮಾಡುತ್ತದೆ. ಕಣ್ಣು ಚುಚ್ಚಿದಂತಾಗುವುದು, ನೀರು ಬರುತ್ತದೆ ಹಾಗೂ ಕಣ್ಣುಗಳು ಕೆಂಪಾಗುತ್ತವೆ. ಇದಕ್ಕೆ ಅಲರ್ಜಿ ಮತ್ತು ಸೋಂಕು ಕಾರಣವಾಗುವ ಸಾಧ್ಯತೆಯಿರುತ್ತದೆ.

ಅದೇ ರೀತಿ, ಬೆಲ್ ಪಾಲ್ಸಿ, ಸ್ಜೋಗ್ರೆನ್ಸ್ ಸಿಂಡ್ರೋಮ್, ದೀರ್ಘಕಾಲದ ಸೈನಸ್, ಥೈರಾಯ್ಡ್ ಸಮಸ್ಯೆ ಹಾಗೂ ರುಮಟಾಯ್ಡ್ ಸಂಧಿವಾತ ಸಮಸ್ಯೆಗಳು ಕಣ್ಣಿನಲ್ಲಿ ಅತಿಯಾದ ನೀರು ಬರಲು ಕಾರಣವಾಗುವ ಇತರ ಸಮಸ್ಯೆಗಳಾಗಿವೆ.

Exit mobile version