ನಕಲಿ ವೈದ್ಯರ ಹಾವಳಿ: ಕಾರ್ಯಾಚರಣೆಗೆ ಇಳಿದ ಆರೋಗ್ಯ ಇಲಾಖೆ, 1,434ಕ್ಕೂ ಹೆಚ್ಚು ವೈದ್ಯರ ವಿರುದ್ಧ ದೂರು ದಾಖಲು

Bengaluru: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾವಿರಾರು ನಕಲಿ ವೈದ್ಯರು ಹಾಗೂ ಕ್ಲಿನಿಕ್​ಗಳು (Fake doctor alert) ತಲೆ ಎತ್ತಿದ್ದು, ಕೊರೊನಾದ ಬಳಿಕ ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು

ನಕಲಿ ಕ್ಲಿನಿಕ್​ಗಳು ಓಪನ್ ಆಗಿದೆ ಹಾಗಾಗಿ ಸಿಲಿಕಾನ್ ಸಿಟಿ ಜನರು ಎಚ್ಚರಿಕೆಯಿಂದಿರಬೇಕಾಗಿದ್ದು, ಸಿಕ್ಕ ಸಿಕ್ಕ ಕ್ಲಿನಿಕ್​ಗಳಿಗೆ ಹೋಗುವುದನ್ನು ನಿಲ್ಲಿಸಬೇಕಾಗಿದೆ.

ಕೊರೊನಾದ (Covid-19) ನಂತರ ಬಹಳಷ್ಟು ಜನರು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿ ನಾನಾ ಮಾರ್ಗಗಳನ್ನು ಹಿಡಿದಿದ್ದಾರೆ. ಇದೇ ನಿಟ್ಟಿನಲ್ಲಿ ಎಂಬಿಬಿಎಸ್ (MMBS) ಪಾಸ್

ಆಗದಿದ್ದರೂ ಅದೆಷ್ಟೋ ಜನರು ಕೊರೊನಾದ ನಂತರ ಕ್ಲಿನಿಕ್ ಓಪನ್ ಮಾಡಿ ಚಿಕಿತ್ಸೆ ಕೊಟ್ಟು ಅಪಾಯ ತಂದುಕೊಂಡಿರುವ ಬಗ್ಗೆ ಈ ಹಿಂದಿನಿಂದಲೂ ಅನೇಕ ವರದಿಗಳು, ಸುದ್ದಿಗಳು

ಹರಿದಾಡುತ್ತಿವೆ. ಇದೀಗ ಆರೋಗ್ಯ ಇಲಾಖೆಯು (Health Department) ನಕಲಿ ವೈದ್ಯರು ಹಾಗೂ ನಕಲಿ ಕ್ಲಿನಿಕ್​ಗಳ ಬಗ್ಗೆ ದೂರುಗಳು ಬರುತ್ತಿದ್ದ ಕಾರಣ ಅಲರ್ಟ್ ಆಗಿದ್ದು, ಸದ್ಯ 1434ಕ್ಕೂ

ಹೆಚ್ಚು ನಕಲಿ ವೈದ್ಯರ ಮೇಲೆ ಕೇಸ್ ದಾಖಲಾಗಿದೆ. ಕೊರೊನಾ ಬಳಿಕ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದಲ್ಲಿ 1500ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ (Fake Doctors)

ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಗ್ಯ ಇಲಾಖೆಗೆ ಈ ಬಗ್ಗೆ ಅತಿ ಹೆಚ್ಚು ದೂರುಗಳು ಬಂದಿರುವ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ

ಸಾರಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಕೇಸ್ ದಾಖಲಿಸಿದೆ. ಈ ನಕಲಿ ವೈದ್ಯರು ಗಡಿ ಭಾಗದಲ್ಲಿ (Fake doctor alert) ಹೆಚ್ಚು ಕ್ಲಿನಿಕ್​ಗಳನ್ನು

ತೆರೆಯುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಹಿಂದೆ ಮುಂದೆ ತಿಳಿಯದೆ. ವೈದ್ಯರ ಪ್ರಮಾಣ ಪತ್ರ ಹಾಗೂ ಆಸ್ಪತ್ರೆಗಳ ಪ್ರಮಾಣಿಕೃತ ಪತ್ರ

ನೋಡದೆ ಚಿಕಿತ್ಸೆ ಪಡೆದು ಸಮಸ್ಯೆಗೆ ತುತ್ತಾಗದ್ದಂತೆ ಸೂಚನೆ ನೀಡಿದೆ. ಹೊರ ರಾಜ್ಯಗಳಿಂದ ಬಂದು ಗಡಿ ಜಿಲ್ಲೆಗಳಲ್ಲಿ ಮೊಬೈಲ್ ಕ್ಲಿನಿಕ್ (Mobile Clinic) ಮೂಲಕ ರಾಜ್ಯದ ಜನರಿಗೆ ಈ

ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೊಸೂರು ಹಾಗೂ ಆನೇಕಲ್ (Hosur, Anekal) ಭಾಗದಲ್ಲಿ ಮೊಬೈಲ್ ಕ್ಲಿನಿಕ್ ಇಟ್ಟುಕೊಂಡು ಚಿಕಿತ್ಸೆ ನೀಡಿ ಜನರ ಪ್ರಾಣಕ್ಕೆ ಅಪಾಯ ತರುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 300ಕ್ಕೂ ಹೆಚ್ಚು ನಕಲಿ ವೈದ್ಯರು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ನಕಲಿ ಕ್ಲಿನಿಕ್ ಹಾಗೂ ವೈದ್ಯರ ಹೆಡೆಮುಡಿ ಕಟ್ಟಲು ಆರೋಗ್ಯ ಇಲಾಖೆ

ಮುಂದಾಗಿದ್ದು, ಸದ್ಯ 1434 ನಕಲಿ ವೈದ್ಯರ ಕ್ಲಿನಿಕ್​ಗಳನ್ನು ಲಾಕ್ ಮಾಡಲಾಗಿದೆ. ಡಿಸೆಂಬರ್ ಕೊನೆಯ ವೇಳೆಗೆ ನಕಲಿ ವೈದ್ಯರು ಹಾಗೂ ಕ್ಲಿನಿಕ್ ಗೆ ಬೀಗ ಹಾಕಲು ಮುಂದಾಗಿದೆ.

ಇದನ್ನು ಓದಿ: ಆ್ಯಸಿಡ್ ದಾಳಿ ಪ್ರಕರಣದಲ್ಲಿ ನಂ.1 ಸ್ಥಾನದಲ್ಲಿರುವ ಬೆಂಗಳೂರು: ಮಹಿಳೆಯರ ಮೇಲೆ ಅತಿ ಹೆಚ್ಚು ಆ್ಯಸಿಡ್ ದಾಳಿ

Exit mobile version