ಐಪಿಎಲ್ 2023 ರ ತಂಡದಿಂದ ಆ ಬೌಲರ್ ಅನ್ನು ಹೊರಗಿಡಿ : ಆರ್‌ಸಿಬಿ ವಿರುದ್ಧ ಫ್ಯಾನ್ಸ್ ಗರಂ

RCB 2023: ಆರ್‌ಸಿಬಿ ತಂಡದ ಬ್ಯಾಟಿಂಗ್‌ (Batting) ಶ್ಲಾಘನೀಯವಾಗಿದೆ, ಆದರೆ ಬೌಲಿಂಗ್ (Bowling) ನಲ್ಲಿ ಮಾತ್ರ ಎಡವುತ್ತಿದೆ. ಗೆಲ್ಲುವ ನಿರೀಕ್ಷೆಯಿದ್ದ ಪಂದ್ಯಗಳನ್ನು ಸೋಲುತ್ತಿರುವುದು ತಂಡಕ್ಕೆ ಮಾಮೂಲಿಯಾಗಿದೆ (Fans disappoint on rcb) ಎಂದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ ಮತ್ತು ಈ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಐಪಿಎಲ್(IPL) 2023ರ ಋತುವಿನ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಎರಡು ಪಂದ್ಯಗಳನ್ನು ಸತತವಾಗಿ ಸೋಲುವ ಮೂಲಕ ಅಚ್ಚರಿಯನ್ನು ಎದುರಿಸಿತು.

ಆದರೆ, ಇದೀಗ ನಂಬರ್ ಒನ್ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ(Mumbai) ತಂಡವು ತಮ್ಮ ಇತ್ತೀಚಿನ ಪಂದ್ಯದಲ್ಲಿ RCB ವಿರುದ್ಧ ಜಯ ಸಾಧಿಸಿದೆ.

35 ಎಸೆತಗಳಲ್ಲಿ 7 ಬೌಂಡರಿ (Boundary), 6 ಸಿಕ್ಸರ್‌ಗಳ ನೆರವಿನಿಂದ 83 ರನ್‌ ಗಳಿಸಿದ ಸೂರ್ಯಕುಮಾರ್‌ ಯಾದವ್‌, 34 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ (Sixer) ನೆರವಿನಿಂದ

ಅಜೇಯ 52 ರನ್‌ ಗಳಿಸಿದ ನೆಹಾಲ್‌ ವಡೇರಾ ಮತ್ತು ಇಶಾನ್‌ ಕಿಶನ್‌ ಅವರ ನೆರವಿನಿಂದ 21 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 42 ರನ್ ಗಳಿಸುವ

ಮೂಲಕ ಮುಂಬೈ ತಂಡ ಆರು ವಿಕೆಟ್‌ಗಳ ಜಯ ಸಾಧಿಸಿತು.

https://youtu.be/si13NZfZStY

ಗೆಲುವು ಸಾಧಿಸಿದ ಮುಂಬೈ (Mumbai) ತಂಡ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಲು ಶಕ್ತವಾಯಿತು.

ವ್ಯತಿರಿಕ್ತವಾಗಿ ಬೆಂಗಳೂರು ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ.

ಈ ಪಂದ್ಯದಲ್ಲಿ ಜಯಭೇರಿ ಬಾರಿಸಿದ ತಂಡವು (Fans disappoint on rcb) ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿರುವುದು ಉಲ್ಲೇಖನೀಯ.

ಆರ್‌ಸಿಬಿಯ(RCB) ಬ್ಯಾಟಿಂಗ್ ಆರಂಭದಿಂದಲೂ ಉತ್ತಮವಾಗಿತ್ತು. ಕೇವಲ ಬೌಲಿಂಗ್ ಬಾಲ್ ನಲ್ಲಿ ಎಡವುತ್ತಿದ್ದಾರೆ.

ಈ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಗೆಲ್ಲಬೇಕಿದ್ದ ಪಂದ್ಯದಲ್ಲಿ ತಂಡ ಸೋಲುವುದು ಮಾಮೂಲಿಯಾಗುತ್ತಿದೆ.

200 ರನ್‌ಗಳ ಗುರಿಯನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗದ ತಂಡಗಳ ಪಟ್ಟಿಯಲ್ಲಿ ಆರ್‌ಸಿಬಿ ತಂಡವು ಅಗ್ರಸ್ಥಾನದಲ್ಲಿದೆ.

2023 ರ ಪಂದ್ಯದಲ್ಲಿಯೇ 200ರ ಗಡಿಯನ್ನು ಮೂರು ಬಾರಿ ಕಳೆದುಕೊಂಡಿದ್ದಾರೆ.

ತಂಡದ ಬೌಲರ್‌ಗಳು ಅದರಲ್ಲೂ ಹರ್ಷಲ್ ಪಟೇಲ್ (Harshal Patel) ಹೆಚ್ಚು ರನ್ ನೀಡುತ್ತಿರುವುದನ್ನು

ಬೆಂಗಳೂರು ಅಭಿಮಾನಿಗಳು ಬೇಸರಗೊಂಡಿದ್ದಾರೆ ಮತ್ತು ಅವರನ್ನು ತಂಡದಿಂದ ತೆಗೆದುಹಾಕಬೇಕೆಂಬ ಕೂಗು ಕೂಡ ಹೆಚ್ಚುತ್ತಿದೆ.

ಒಬ್ಬ ಬೌಲರ್ ಕೂಡ ಮುಂಬೈ ವಿರುದ್ಧ ಪಂದ್ಯದಲ್ಲಿ 10ಕ್ಕಿಂತ ಕಡಿಮೆಯ ಎಕಾನಮಿಯೊಂದಿಗೆ ಬೌಲಿಂಗ್ (Bowling) ಮಾಡಿರಲಿಲ್ಲ. ಅಂತಿಮವಾಗಿ ಸಿರಾಜ್ ಕೂಡ 10.3 ರನ್ ನೀಡಿದರು. ಇದಕ್ಕೆ ಪ್ರತಿಯಾಗಿ ಅಭಿಮಾನಿಗಳು ಬೌಲರ್ ಅನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version