ನಾಲ್ಕನೇ ಮಾತುಕತೆಯೂ ವಿಫಲ: ಪ್ರತಿಭಟನೆ ಮುಂದುವರೆಸಿದ ರೈತರು

New Delhi: ಕೇಂದ್ರ ಸರ್ಕಾರ (Farmers Protests Against Central Govt) ಹಾಗೂ ಪ್ರತಿಭಟನೆ ನಡೆಸುತ್ತಿರುವ ರೈತರ ನಡುವಿನ ನಾಲ್ಕನೇಯ ಮಾತುಕತೆಯೂ

ವಿಫಲವಾಗಿದ್ದು, ರೈತರ ಇದೀಗ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. 5 ವರ್ಷಗಳ ಒಪ್ಪಂದದ ಮೇರೆಗೆ 3 ಬೆಳೆಗಳಿಗೆ ಎಂಎಸ್ಪಿ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು

ರೈತ ಸಂಘಟನೆಗಳು ತಿರಸ್ಕರಿಸಿವೆ. ಕೂಡಲೇ ಸುಗ್ರೀವಾಜ್ಞೆ ಹೊರಡಿಸಲು ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ಇದರಿಂದ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ (Delhi)

ರೈತರ ಪ್ರತಿಭಟನೆ (Farmers Protests Against Central Govt) ಮುಂದುವರಿದಿದೆ.

ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಒಟ್ಟು ಮೂರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕೇಂದ್ರ ಸರಕಾರದ ಪ್ರಸ್ತಾವವನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ.

ಕೇಂದ್ರ ಸಚಿವ ಪಿಯೂಶ್ ಗೋಯಲ್ (Piyush Goel), ಕೃಷಿ ಸಚಿವ ಅರ್ಜುನ್ ಮುಂಡಾ ಹಾಗೂ ಗೃಹ ವ್ಯವಹಾರಗಳ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ರೈತ

ಮುಖಂಡರೊಂದಿಗೆ ಈ ಕುರಿತು ಸುದಿರ್ಘ ಚರ್ಚೆ ನಡೆಸಿದ್ದರು. ಆದರೆ ಅಂತಿಮವಾಗಿ ಮಾತುಕತೆ ವಿಫಲವಾಗಿದೆ.

ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರವನ್ನು ಫೆಬ್ರುವರಿ (February) 21ರಂದು ತಿಳಿಸುವಂತೆ ಕೇಂದ್ರ ಸರ್ಕಾರ ಪ್ರತಿನಿಧಿಗಳು ತಿಳಿಸಿದ್ದರು. ಆದರೆ, ಫೆಬ್ರುವರಿ 21ರ ಗಡುವಿಗೆ

ಮುನ್ನವೇ ರೈತ ಸಂಘಟನೆಗಳು ಕೇಂದ್ರ ಸರಕಾರದ ಪ್ರಸ್ತಾಪವನ್ನು ತಿರಸ್ಕರಿಸಿವೆ. ಕಾನೂನು ಖಾತರಿ ನೀಡಲು ಸುಗ್ರೀವಾಜ್ಞೆಗೆ ಪಟ್ಟು ಮುಂದುವರಿಸಿದ್ದಾರೆ.

ಕೇಂದ್ರ ಸರ್ಕಾರ ರೈತರ ಮುಂದಿಟ್ಟಿರುವ ಪ್ರಸ್ತಾವನೆಯು ಹಾದಿ ತಪ್ಪಿಸುವಂತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಕೊಟ್ಟ ಭರವಸೆಯಂತೆ, ಎಲ್ಲಾ 23

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಖಾತರಿ ನೀಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

4ನೇಯ ಸುತ್ತಿನ ಮಾತುಕತೆಯ ವೇಳೆ ಕೇಂದ್ರ ಸರಕಾರದ ಕಡೆಯಿಂದ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಸಮಗ್ರ ಬೆಳೆಗಳಿಗೆ ವಿಮೆ ಸೌಲಭ್ಯ, 60 ವರ್ಷ ದಾಟಿದ ರೈತರಿಗೆ

ತಿಂಗಳಿಗೆ 10,000 ರೂಪಾಯಿಗಳ ಪಿಂಚಣಿ ಬೇಡಿಕೆಗಳ ಬಗ್ಗೆ ಸರ್ಕಾರ ನಮ್ಮೊಂದಿಗೆ ಚರ್ಚಿಸಿಲ್ಲ ಎಂದು ರೈತ ಸಂಘಟನೆಗಳು ದೂರಿವೆ.

ಇದನ್ನು ಓದಿ: ಪೂಜೆ ಪುನಸ್ಕಾರ ಮನೆಯಲ್ಲಿರಲಿ, ಶಾಲೆಗಳಲ್ಲಿ ಬೇಕಾಗಿಲ್ಲ ಎಂದ ನಟ ಚೇತನ್‌ ಅಹಿಂಸಾ.

Exit mobile version