ಫಾಝಿಲ್ ಹತ್ಯೆ ಪ್ರಕರಣ ; 6 ಹಂತಕರ ಬಂಧನ!

Police

ಮಂಗಳೂರು : ಫಾಝಿಲ್(Fazil) ಹತ್ಯೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಶಂಕಿತ ಹಂತಕರನ್ನು ಮಂಗಳೂರು ಪೊಲೀಸರು(Mangaluru Police) ಬಂಧಿಸಿದ್ದಾರೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಮಂಗಳೂರು ನಗರ ಪೋಲಿಸ್‌ ಆಯುಕ್ತ ಶಶಿಕುಮಾರ್‌(Shashikumar) ಅವರು, ಫಾಝಿಲ್‌ ಹತ್ಯೆಯನ್ನು ನಾವು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆರೋಪಿಗಳ ಬಂಧನಕ್ಕಾಗಿ ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ.

ಇದೀಗ ಬೆಂಗಳೂರು(Bengaluru), ಉತ್ತರ ಕನ್ನಡ(Uttarakannada) ಜಿಲ್ಲೆಗಳಲ್ಲಿ ನಮ್ಮ ತಂಡ ಕಾರ್ಯಾಚರಣೆ ನಡೆಸಿ, ಆರು ಶಂಕಿತ ಹಂತಕರನ್ನು ಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಗೆ(Suratkal Police Station) ಕರೆತರಲಾಗಿದೆ. ಆರು ಜನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ವಿಚಾರಣೆಗಾಗಿ ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇನ್ನು ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಸುಹಾಸ್ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರೆಲ್ಲರೂ ಕೋಡಿಕೆರೆ ಲೋಕಿ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಫಾಝಿಲ್ ಹತ್ಯೆ ಮಾಡಿ ಕಾರ್ಕಾಳದಲ್ಲಿ(Karkala) ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಕಾರು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳ ಬೆನ್ನು ಹತ್ತಿದ್ದರು. ಸಾಕಷ್ಟು ಹುಡುಕಾಟದ ನಂತರ ಆರೋಪಿಗಳ ಸುಳಿವು ಸಿಕ್ಕಿತ್ತು. ಆದರೆ ಒಂದೇ ಸ್ಥಳದಲ್ಲಿ ನಿಲ್ಲದ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿ ಬಂಧನಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಅಂತಿಮವಾಗಿ ಆರೋಪಿಗಳು ಇರುವ ಸ್ಥಳದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಅಲ್ಲಿಂದಲೂ ಆರೋಪಿಗಳು ಪರಾರಿಯಾಗಿದ್ದರು.

ಎಚ್ಚೆತ್ತ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ, 20 ಕಿಲೋ ಮೀಟರ್ ದೂರದಲ್ಲೇ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸಿಪಿ ಮಹೇಶ್ ಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದ್ದಾರೆ.

Exit mobile version