ಮೆಸ್ಸಿ Vs ಎಂಬಾಪ್ಪೆ ; ವಿಶ್ವ ಗೆದ್ದ ಮಾಂತ್ರಿಕರು ಯಾರು?

Qatar : ಅಕ್ಷರಶ: ಅದು ಮೆಸ್ಸಿ (FIFA worldcup 2022 WorldRecord) Vs ಎಂಬಾಪ್ಪೆ ಆಟ. ಇಬ್ಬರೂ ಮದಗಜಗಳಂತೆ ಕ್ರೀಡಾಂಗಣದಲ್ಲಿ ಸೆಣಸಿದ ರೀತಿ ಅದ್ಭುತ, ಅಪೂರ್ವ.

ಪಂದ್ಯದ ಕೊನೆ ಕ್ಷಣದ ವರೆಗೂ ಸೋಲೊಪ್ಪಿಕೊಳ್ಳದೆ ಇಬ್ಬರೂ (FIFA worldcup 2022 WorldRecord) ವಿಶ್ವಕಪ್ ಕಿರೀಟಕ್ಕಾಗಿ ಹೋರಾಡಿದ ರೀತಿ ಅವಿಸ್ಮರಣೀಯ.

ಪ್ರಥಮಾರ್ಧದಲ್ಲೇ ಅರ್ಜೆಂಟೈನಾ (Argentina) 2-0 ಗೋಲುಗಳಿಂದ ಗೆದ್ದೇ ಬಿಡ್ತು ಅನ್ನುವಷ್ಟರಲ್ಲಿ ಫ್ರಾನ್ಸ್‌ನ ಎಂಬಾಪ್ಪೆ ಕೊಟ್ಟ ಎರಡು ಗೋಲುಗಳ ಶಾಕ್‌!

ಪಂದ್ಯದ ಕೊನೆ ಕ್ಷಣದಲ್ಲಿ ಮೆಸ್ಸಿ ಹೊಡೆದ ಗೋಲ್‌ ಅರ್ಜೆಂಟೈನಾ 3-2 ರಿಂದ ಇನ್ನೇನು ವಿಶ್ವಕಪ್‌ ವಶ ಮಾಡಿತು ಅನ್ನಷ್ಟರಲ್ಲಿ ಬಿರುಗಾಳಿಯಂತೆ ಎಂಬಾಪ್ಪೆ ಹೊಡೆದ ಆ ಹ್ಯಾಟ್ರಿಕ್ ಗೋಲು ಸಮ ಪಂದ್ಯದ ರೋಚಕತೆ ಹೆಚ್ಚಿಸಿತು.

ಹೆಚ್ಚುವರಿ ಸಮಯದಲ್ಲಿ ಸಮಬಲದ ಹೋರಾಟ ನೀಡಿದ್ರೂ ಎರಡೂ ತಂಡಗಳಿಗೆ ಗೋಲು ಸಿಗದ ಕಾರಣ ಪೆನಾಲ್ಟಿ ಶೂಟೌಟ್ ನೀಡಲಾಯಿತು. ಮೆಸ್ಸಿ,

ಎಂಬಾಪ್ಪೆ ಇಬ್ಬರೂ ಸಫಲರಾಗಿ 1-1 ಸಮಬಲ ಸಾಧಿಸಿದರು. ಆದ್ರೆ ಆ ಬಳಿಕ ಫ್ರಾನ್ಸ್‌ ಎರಡೂ ಪ್ರಯತ್ನದಲ್ಲಿ ವಿಫಲವಾಗಿ ಅರ್ಜೆಂಟೈನಾ ಮೂರೂ ಪ್ರಯತ್ನದಲ್ಲಿ ಸಫಲತೆ ಕಂಡು 4-2 ಗೋಲ್‌ಗಳ ಅಂತರದಲ್ಲಿ ವಿಶ್ವಕಪ್‌ ಗೆದ್ದು ಬೀಗಿದರು.

ಇದನ್ನೂ ನೋಡಿ : http://ಫಿಫಾ ಫುಟ್ಬಾಲ್‌ ವಿಶ್ವಕಪ್ ಗೆದ್ದ ಸಂಭ್ರವಮವನ್ನು ಅರ್ಜೆಂಟೈನಾ ಪ್ರಜೆಗಳು ಅದ್ದೂರಿಯಿಂದ ಆಚರರಿಸುತ್ತಿದ್ದಾರೆ.


ಹೀಗೆ ರೋಚಕ, ರೋಮಾಂಚಕ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿ ಕ್ರೀಡಾ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿದ ಪಂದ್ಯ ಅದು.

ಕೊನೆಯ ಕ್ಷಣದ ವರೆಗೂ ಗೆಲುವಿನ ಕುರುಹನ್ನೇ ಬಿಟ್ಟುಕೊಡದೆ ನೆರೆದವರ ಎದೆ ಬಡಿತ ಹೆಚ್ಚಿಸಿದ ಅಪರೂಪದ ವಿಶ್ವಕಪ್‌ ಫೈನಲ್ (World cup Final) ಆಟ ಇದು ಅಂದ್ರೆ ತಪ್ಪಾಗಲಾರದು.

ಕತಾರ್‌ನ (Qatar) ಲೂಸೆಲ್‌ ಕ್ರೀಡಾಂಗಣ ಈ ಎಲ್ಲಾ ರೋಚಕತೆ ಭಾನುವಾರ ಸಾಕ್ಷಿಯಾಯಿತು. ಅರ್ಜೆಂಟೈನಾ ಹಾಗೂ ಫ್ರಾನ್ಸ್‌ ನಡುವೆ ನಡೆದ ಪಂದ್ಯ ಫುಟ್ಬಾಲ್‌ ಪ್ರಿಯರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದಲ್ಲಿ ಅನುಮಾನವೇ ಇಲ್ಲ.
ಈ ವಿಶ್ವಕಪ್‌ ಪಂದ್ಯವನ್ನು ಮೆಸ್ಸಿ Vs ಎಂಬಾಪ್ಪೆ ಅಂತಲೇ ಬಿಂಬಿಸಲಾಗಿತ್ತು.

ಅದೇ ರೀತಿ ಪಂದ್ಯವೂ ನಡೆಯಿತು. ಅರ್ಜೇಂಟಯನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ವಿಶ್ವಕಪ್‌ ಗೆಲ್ಲುವ ಕನಸ್ಸನ್ನು ನನಸು ಮಾಡಲು ಧೀರೋದತ್ತನಾಗಿ ಸೆಣಸಿದ್ರೆ,

ಫ್ರಾನ್ಸ್‌ (France) ತಂಡಕ್ಕೆ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲಿಸಿ ಕೊಡಬೇಕು ಎನ್ನುವ ಹಠದಿಂದ ಕಣಕ್ಕಿಳಿದು ಹೋರಾಡಿದ್ದು ಕೈಲಿಯನ್‌ ಎಂಬಾಪ್ಪೆ.

ಇಬ್ಬರ ಆಟ ನೋಡಲು ಕಣ್ಣಿಗೆ ಹಬ್ಬವಾಗಿತ್ತು. ಮದಗಜಗಳಂತೆ ಹೋರಾಡಿ ಸಮಬಲದ ಪ್ರದರ್ಶನ ನೀಡಿ ಕ್ರೀಡಾಪ್ರಿಯರಿಗೆ ರಸದೌತಣ ಬಡಿಸಿದರು.

ಪ್ರಥಮಾರ್ಧದಲ್ಲಿ ಮೆಸ್ಸಿ ಇಡೀ ಆಟದಲ್ಲಿ ತನ್ನ ಸಾಮರ್ಥ್ಯ ಮೆರೆದು ತಂಡಕ್ಕೆ 2-0 ಅಂತರದ ಮುನ್ನಡೆ ಸಾಧಿಸಿ ಕೊಟ್ಟರು.

ಇದನ್ನೂ ನೋಡಿ : https://fb.watch/htluWyZbgo/ ಮೆಸ್ಸಿ ಅಂದ್ರೆ ಮ್ಯಾಜಿಕ್‌. Messi Magic.

ತನ್ನ ತಂಡವನ್ನು ಮುನ್ನಡೆಸುತ್ತಾ, ಪ್ರಾನ್ಸ್‌ ತಂಡದ ಬೆವರಿಳಿಸಿ ಪರಿ ನಿಜವಾಗ್ಲೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.

ಇನ್ನೇನು ಅರ್ಜೆಂಟೈನಾ ವಿಶ್ವಕಪ್‌ 2022 (World Cup 2022) ಅನ್ನು ಬಹಳ ಸುಲಭವಾಗಿ ಸರಳವಾಗಿ ಗೆದ್ದೇ ಬಿಡ್ತು ಅಂತ ಲೆಕ್ಕಾಚಾರ ಹಾಕುತ್ತಿದ್ದಾಗಲೇ ಬಿರುಗಾಳಿಯಂತೆ ಬಡಿದಪ್ಪಳಿಸಿದ್ದು ಕೈಲಿಯನ್ ಎಂಬಾಪ್ಪೆ ಎಂಬ ಫ್ರಾನ್ಸ್‌ನ ದೈತ್ಯ ಪ್ರತಿಭೆ.

ಒಂದು ಪೆನಾಲ್ಟಿ ಶೂಟೌಟ್‌ ಮೂಲಕ 2-1 ಅಂತರದಲ್ಲಿ ತಂಡಕ್ಕೆ ಭರವಸೆಯ ಬೆಳಕಾದ ಎಂಬಾಪ್ಪೆ ಮತ್ತೊಂದು ಗೋಲು ಹೊಡೆದು ಪಂದ್ಯವನ್ನು 2-2 ಅಂಕಗಳಿಂದ ಸಮಬಲಕ್ಕೆ ತಂದು ನಿಲ್ಲಿಸಿದರು.

ಹೆಚ್ಚುವರಿ ಸಮಯದಲ್ಲಿ ಮೆಸ್ಸಿ ಮತ್ತೊಂದು ಗೋಲು ಹೊಡೆದು ಗೆಲುವಿನ ಹಾದಿ ಸುಗಮಗೊಳಿಸಿ 3-2 ಅಂಕಗಳಿಂದ ವಿಶ್ವಕಪ್ ಹತ್ತಿರಕ್ಕೆ ಬಂದಿದ್ರು.

ಆದ್ರೆ ಪಂದ್ಯದ ಕೊನೆಯ ಕ್ಷಣದಲ್ಲಿ ಎಂಬಾಪ್ಪೆ ಹೊಡೆದ ಆ ಮ್ಯಾಜಿಕ್‌ ಗೋಲ್‌ ಇಡೀ ಪಂದ್ಯಕ್ಕೆ ರೋಚಕ ತಿರುವು ನೀಡಿ ಪಂದ್ಯವನ್ನು 3-3 ಅಂಕಗಳಿಂದ ಮತ್ತೆ ಸಮಬಲಗೊಳಿಸಿದ್ರು.

ಕೊನೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೈನಾ ಆಟಗಾರರು ಮೇಲುಗೈ ಸಾಧಿಸಿ 4-2 ಅಂಕಗಳನ್ನು ಗಳಿಸಿ ವಿಶ್ವಕಪ್‌ ಗೆದ್ದ ವೀರರೆನಿಸಿಕೊಂಡರು.


ಆದ್ರೆ ಈ ಪಂದ್ಯದಲ್ಲಿ ಮೆಸ್ಸಿ ತೋರಿದ ನಾಯಕತ್ವ ಗುಣ ಹಾಗೂ ಎಂಬಾಪ್ಪೆ ಹೋರಾಡಿದ ಕ್ಷಣ ಎಲ್ಲರಿಗೂ ಮಾದರಿ ಎನಿಸಿಕೊಂಡಿತು.

ಕೊನೆಯ ಕ್ಷಣದ ವರೆಗೂ ಸೋಲೊಪ್ಪದ ಛಾತಿ. ಇಡೀ ತಂಡವನ್ನು ಹುರಿದುಂಬಿಸಿ ಗುರಿಯತ್ತ ಮುನ್ನುಗ್ಗಿಸುವ, ಕನಸು ನನಸು ಮಾಡುವ ಮೆಸ್ಸಿಯ ಹಠ ಕಂಡು ಇಡೀ ಜಗತ್ತೇ ಭೇಷ್‌ ಎಂದಿದೆ.

ಪಂದ್ಯದುದ್ದಕ್ಕೂ ಅರ್ಜೆಂಟೈನಾ ಅದ್ಭುತ ತಂಡ ಪ್ರದರ್ಶನ ನೀಡಿತು. ಗೋಲ್‌ ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್‌ ಅವರ ವೀರೋಚಿತ ಆಟ ಅರ್ಜೆಂಟೈನಾ ಗೆಲುವಿಗೆ ಪ್ರಮುಖ ಕಾರಣವಾಯಿತು.

ಫ್ರಾನ್ಸ್‌ ತಂಡ ಒಡ್ಡಿದ ಕಠಿಣ ಸವಾಲುಗಳನ್ನು ಅತ್ಯಂತ ಚಾಣಾಕ್ಷತನದಿಂದ ಎದುರಿಸಿದ ಗೋಲುಕೀಪರ್‌ ಮಾರ್ಟಿನೆಜ್‌ (Martinez) ಈ ವಿಶ್ವಕಪ್‌ ಪಂದ್ಯದ ಅತ್ಯುತ್ತಮ ಗೋಲ್‌ಕೀಪರ್‌ ಅನ್ನೋ ಪ್ರಶಂಸೆಗೆ ಭಾಜನರಾಗಿ ‘ಗೋಲ್ಡನ್‌ ಗ್ಲೌಸ್‌’ ಪಶಸ್ತಿಗೆ ಭಾಜನರಾದರು.

ಇದನ್ನೂ ಓದಿ : https://vijayatimes.com/fifa-world-cup-2022-messi/

ಅರ್ಜೆಂಟೈನಾ ಹಿರಿಯ, ಕಿರಿಯ ಆಟಗಾರರನ್ನೊಳಗೊಂಡ ತಂಡವಾಗಿದ್ದ ಕಾರಣ ಈ ತಂಡದ ಆಟ ಪಂದ್ಯದುದ್ದಕ್ಕೂ ಆಕ್ರಮಣಕಾರಿಯಾಗಿ ಆಡುತ್ತಾ ಸಾಗಿತು.

ಆದ್ರೆ ಕಿರಿಯ ಆಟಗಾರರ ಕೌಶಲ್ಯ ಹೊಸ ಭರವಸೆಯನ್ನು ಮೂಡಿಸಿತು. ತಂಡದ ಯುವ ಆಟಗಾರನಾದ ಎನ್ಝೋ ಫೆರ್ನಾಂಡಿಸ್‌ (Enzo Fernandes) ಅವರ ತೋರಿದ ಅದ್ಭುತ ಪ್ರದರ್ಶನಕ್ಕಾಗಿ ‘ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ’ ಗಳಿಸಿದರು.

ಇನ್ನು ಮೆಸ್ಸಿ ವಿಶ್ವಕಪ್‌ ಫೈನಲ್‌ನಲ್ಲಿ ಎರಡು ಗೋಲುಗಳನ್ನು ಭಾರಿಸಿ ವಿಶ್ವಕಪ್‌ನಲ್ಲಿ ಅತೀ ಹೆಚ್ಚು 13 ಗೋಲು ದಾಖಲಿಸಿ ಫುಟ್ಬಾಲ್ ದಂತಕತೆ ಪೀಲೆ ಅವರ ದಾಖಲೆಯನ್ನು ಅಳಿಸಿ ನೂತನ ವಿಶ್ವ ದಾಖಲೆ ಬರೆದರು.

ಗೋಲ್ಡನ್ ಬೂಟ್‌ (Golden boot) ಪ್ರಶಸ್ತಿಯನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡರೂ, ವಿಶ್ವಕಪ್ ಜೊತೆಗೆ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಗೋಲ್ಡನ್ ಬೂಟ್ ಪ್ರಶಸ್ತಿ ಗಳಿಸಿದರು.

ಇದನ್ನೂ ಓದಿ : https://vijayatimes.com/qatar-world-cup-2022-moments/


ಅದೇ ಎಂಬಾಪ್ಪೆ ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ಮಾಡುತ್ತಾ ಹ್ಯಾಟ್ರಿಕ್ ಗೋಲು ದಾಖಲಿಸಿ ತಂಡಕ್ಕೆ ಗೌರವಯುತ ಸೋಲನ್ನು ತಂದುಕೊಟ್ಟರು.

ಎಂಬಾಪ್ಪೆ ವೇಗ ಫುಟ್ಬಾಲ್ ಲೋಕ ಕಂಡ ಮೆರಡೋನಾ, ಪೀಲೆ ಮುಂತಾದವರ ವೇಗವನ್ನು ಸ್ಮರಿಸುವಂತೆ ಮಾಡಿತು. ಅವರ ಶಕ್ತಿಶಾಲಿ ಆಟ ಕಂಡು ಫುಟ್ಬಾಲ್‌ ಪ್ರಿಯರು ಮಬ್ಬೆರಗಾದರು.

ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ 12 ಗೋಲ್‌ ಬಾರಿಸಿದ ಕಿರಿದ ಆಟಗಾರ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇವರ ವೀರೋಚಿತ ಆಟ ತಂಡಕ್ಕೆ ಗೆಲುವು ತರಲಿಲ್ಲವಾದರೂ ಎಂಬಾಪ್ಪೆ ದೈತ್ಯ ಪ್ರತಿಭೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.ಇವರ ಅಮೋಘ ಪ್ರದರ್ಶನ ಮೆಚ್ಚಿ ಇವರಿಗೆ ಗೋಲ್ಡನ್‌ ಶೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕತಾರ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಮೆಸ್ಸಿ ಹಾಗೂ ಎಂಬಾಪ್ಪೆ ತಂಡಗಳ ನಡುವಿನ ಕಾದಾಟದಲ್ಲಿ ಅರ್ಜೆಂಟೈನ ಗೆದ್ದು ವಿಶ್ವಕಪ್ ತನ್ನದಾಗಿಸಿತು.

ಆದ್ರೆ ಒಟ್ಟಾರೆಯಾಗಿ ನೋಡುವುದಾದರೆ ಇಲ್ಲಿ ಗೆದ್ದು ಬೀಗಿದ್ದು ಕ್ರೀಡೆ, ಕ್ರೀಡಾಸ್ಫೂರ್ತಿ ಮತ್ತು ಅತ್ಯಂತ ಶಿಸ್ತಾಗಿ, ಹತ್ತಾರು ಸವಾಲುಗಳನ್ನು ಸ್ವೀಕರಿಸಿ ಅದ್ಭುತವಾಗಿ ಕ್ರೀಡಾಕೂಟವನ್ನು ಆಯೋಜಿಸಿದ ಕತಾರ್‌ ಸರ್ಕಾರ (Qatar Govt) ಹಾಗೂ ಫೀಫಾ ಆಡಳಿತ ಮಂಡಳಿ.
Exit mobile version