ನೀರಲ್ಲ ವಿಷ. ವಿಷವಾಗ್ತಿದೆ ಆರ್‌ಓ ವಾಟರ್ !

ವಿಷವಾಗ್ತಿದೆ ಫಿಲ್ಟರ್ ನೀರು ! ಕುಡೀ ಬೇಡಿ ಆರ್‌ಓ ವಾಟರ್. WHOದಿಂದ ಶಾಕಿಂಗ್ ವರದಿ! ನಾವು ಕುಡಿಯೋ ಫಿಲ್ಟರ್(Filter) ನೀರು ಜೀವಕ್ಕೆ (filter water side effects) ಮಾರಕ! ಎನ್‌ಜಿಟಿ(NGT)ಯಿಂದಲೂ ಎಚ್ಚರಿಕೆ !

ಇದು ವಿಶ್ವ ಆರೋಗ್ಯ ಸಂಸ್ಥೆ WHO ವಿಶ್ವದ ಜನರಿಗೆ ಕೊಟ್ಟ ಕಠಿಣ ಎಚ್ಚರಿಕೆ. ಆರ್‌ಓ ವಾಟರ್ ಅಥವಾ ಫಿಲ್ಟರ್ ನೀರು ಅಂತ ನಾವು ಸಾಮಾನ್ಯ ಭಾಷೆಯಲ್ಲಿ ಕರೀತೀವಿ ಅದು ದೇಹಕ್ಕೆ ಅತ್ಯಂತ ಅಪಾಯಕಾರಿ ಅನ್ನೋ ಶಾಕಿಂಗ್ ಅಂಶವನ್ನು WHO ತಿಳಿಸಿದೆ.

ಬರೀ WHO ಮಾತ್ರವಲ್ಲ ಈ ಹಿಂದೆ ನಮ್ಮ ದೇಶದ ಹಸಿರು ನ್ಯಾಯಾದೀಕರಣ ಗ್ರೀನ್ ಟ್ರಿಬ್ಯುನಲ್(Green Tribunal) ಕೂಡ ಆರ್‌ಓ ನೀರಿನ್ನು ಬ್ಯಾನ್ ಮಾಡಲು ಸೂಚಿಸಿತ್ತು.

ಆದ್ರೆ ನಮ್ಮ ದೇಶದ ದುರಂತ ಏನಾಂದ್ರೆ ಜನರ ಆರೋಗ್ಯಕ್ಕಿಂತ ಸರ್ಕಾರಗಳಿಗೆ ಆರ್‌ಓ ಮೆಷಿನ್ ತಯಾರಿಸೋ ಕಂಪೆನಿಗಳ ಹಿತಾಸಕ್ತಿ ಅವರು ಕೊಡೋ ಕಿಕ್‌ಬ್ಯಾಕ್‌ಗಳೇ ಪ್ರಮುಖವಾಗಿರೋದ್ರಿಂದ ಜನ ಸತ್ರೂ ಪರವಾಗಿಲ್ಲ ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡಲ್ಲ ಅನ್ನೋ ನಿಲುವನ್ನು ಸರ್ಕಾರಗಳು ತೆಗೆದುಕೊಳ್ಳುತ್ತಿವೆ.

ಈಗ ವಿಶ್ವ ಆರೋಗ್ಯ ಸಂಸ್ಥೆಯ ಶಂಖದಿಂದಲೇ ಆರ್‌ಓ ಅಥವಾ ಫಿಲ್ಟರ್ ನೀರಿನ ಅಪಾಯದ ಎಚ್ಚರಿಕೆ ಬಂದಿದೆ.

ಆರ್‌ಓ ನೀರು ನಮ್ಮ ದೇಹಕ್ಕೆ ಪೂರಕ ಅಲ್ಲಾ ಮಾರಕ ಅನ್ನೋದನ್ನು ಘೋಷಿಸಿದೆ. ಹಾಗಾದ್ರೆ ವಿಶ್ವಸಂಸ್ಥೆ ಇಂಥಾ ಎಚ್ಚರಿಕೆ ಕೊಡಲು ಕಾರಣ ಏನು? ಆರ್‌ಓ ವಾಟರ್ ಡೆಡ್ಲಿ ಹೇಗೆ ಅನ್ನೋದನ್ನು ತಿಳಿಯೋಣ ಬನ್ನಿ.

ಅದು ಬರೀ ನೀರಲ್ಲ ಜೀವಜಲ. ಅನೇಕ ಲವಣಾಂಶ,ಪೋಷಕಾಂಶಗಳನ್ನೊಳಗೊಂಡಿರೋ ದ್ರವ. ನೀರಿಲ್ಲದೆ ನಮ್ಮ ಒಂದು ಕ್ಷಣವನ್ನೂ ಯೋಚಿಸಲು ಸಾಧ್ಯವಿಲ್ಲ.

ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಮಹತ್ವವನ್ನು ಅರಿಯದೆ ಮನುಷ್ಯ ನೀರನ್ನು ಮಲಿನಗೊಳಿಸಿದ ತನ್ನ ಸುಂದರ ಬದುಕಿಗೆ ತಾನೇ ಕೊಡಲಿಯೇಟು ಕೊಟ್ಟ. ಶುದ್ಧ ನೀರು ಸಿಗುವುದೇ ಅಪರೂಪ ಅನ್ನೋ ಕಾಲಘಟ್ಟಕ್ಕೆ ನಾವು ತಲುಪಿದ್ದೇವೆ.

ಇಂಥಾ ಸಂದಿಗ್ಧ ಸ್ಥಿತಿಯಲ್ಲಿ ನೀರನ್ನು ಶುದ್ಧೀಕರಿಸಲು ಹುಟ್ಟಿಕೊಂಡ ತಂತ್ರಜ್ಞಾನವೇ ಈ ಆರ್‌ಓ. ರಿವರ್ಸ್ ಆಸ್ಮೋಸಿಸ್ (RO)  ಎಂಬ ಪ್ರಕ್ರಿಯೆಯ ಮೂಲಕ ಶುದ್ಧೀಕರಿಸಿರುವ ನೀರನ್ನು ಆರ್‌ಓ ವಾಟರ್ ಅಂತೀವಿ.

ಈ ರಿವರ್ಸ್ ಆಸ್ಮೋಸಿಸ್ ಎಂದರೆ ನೀರಿನಲ್ಲಿರುವ ಉಪ್ಪಿನಾಂಶ ಹಾಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂನಂತಹ(Magnesium) ಅಗತ್ಯ ಪೋಷಕಾಂಶಗಳನ್ನು ತೆಗೆದು ಹಾಕುವುದು.

ಆದ್ರೆ ಈ ಪ್ರಕ್ರಿಯೆಯೇ ಈಗ ದೇಹಕ್ಕೆ ಮಾರಕವಾಗುತ್ತಿದೆ.

ದೇಹಕ್ಕೆ ಬೇಕಾದ  ಅಗತ್ಯವಾದ  ಪೋಷಕಾಂಶಗಳನ್ನು ನೀರಿನಿಂದ ತೆಗೆದು ಹಾಕಿ ಸತ್ತ ಅಥವಾ ಸತ್ವ ಇಲ್ಲದ ನೀರನ್ನು ಕುಡಿಯುವುದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತಿದೆ.

ಇದು ದೆಹಲಿ ಹಸಿರು ರಾಷ್ಟ್ರೀಯ ನ್ಯಾಯಾಧೀಕರಣ ಅಂದ್ರೆ ಗ್ರೀನ್ ಟ್ರಿಬ್ಯೂನಲ್‌ನ ಆದೇಶವಾಗಿತ್ತು.

ಆರ್‌ಓ ನೀರಿನ ಅಪಾಯವನ್ನು ಅರಿತೇ ಈ ಆದೇಶ ಹೊರಡಿಸಿತ್ತು. ಪ್ರತಿ ಲೀಟರ್ ನೀರಿನಲ್ಲಿ 500  ಮಿಲಿ ಗ್ರಾಂ  ಟಿಡಿಎಸ್  ಇರತಕ್ಕದ್ದು.

ಇಲ್ಲವಾದರೆ  ಆ ನೀರನ್ನು ಸೇವಿಸಿದರೆ ಮನುಷ್ಯನು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಕಾರಣದಿಂದಾಗಿ ಆರ್‌ಓ ನೀರನ್ನು ಬ್ಯಾನ್ ಮಾಡಲು ಸೂಚಿಸಿತು.

ಈಗ WHO ಕೂಡ ಇದೇ ನಿರ್ಧಾರ ಕೈಗೊಂಡಿದೆ. ನೀರಿನ ಬಗ್ಗೆ ನೂರಾರು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ, ಅದನ್ನು ವಿಶ್ಲೇಷಿಸಿದ (filter water side effects) ನಂತರ,

ವಿಶ್ವ ಆರೋಗ್ಯ ಸಂಸ್ಥೆಯು  ಆರ್‌ಓ ನೀರು ಪ್ರಾಣಿ ಮತ್ತು ಮಾನವ ಜೀವಿಗಳ ಮೇಲೆ ನಿರ್ದಿಷ್ಟ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು  ವರದಿಯಲ್ಲಿ ಪ್ರಕಟಿಸಿದೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ ಆರ್‌ಓ ನೀರಿನಿಂದ ಅಧಿಕ ರಕ್ತದೊತ್ತಡವುಂಟಾಗುತ್ತೆ. ಹೃದಯ ಕಾಯಿಲೆ, ಗ್ಯಾಸ್ಟ್ರಿಕ್ ಮತ್ತು ಡ್ಯುವೋಡೆನಲ್ ಅಲ್ಸರ್(Duodenal Ulcer),

ದೀರ್ಘಕಾಲದ ಜಠರದುರಿತ, ಗಾಯಿಟರ್, ಗರ್ಭಾವಸ್ಥೆಯ ತೊಡಕುಗಳು  ಮತ್ತು ಶಿಶುಗಳಲ್ಲಿ ಕಾಮಾಲೆ, ರಕ್ತಹೀನತೆ, ಮೂಳೆ ಮುರಿತಗಳು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ನ್ಯೂನತೆಗಳು ಹೀಗೆ ಹಲವಾರು ತೊಡಕುಗಳಿಗೆ ಆರ್‌ಓ ನಾಂದಿಯಾಗುತ್ತಿದೆ ಅಂತ ಅಧ್ಯಯನಗಳಿಂದ ತಿಳಿದು ಬಂದಿದೆ.

ನೋಡಿದ್ರಾ ಸ್ನೇಹಿತ್ರೆ ನಾವು ಎಂಥಾ ಅಪಾಯಕ್ಕೆ ಸಿಲುಕಿದ್ದೇವೆ ಅಂತ.

ಈ ಆರ್‌ಓ ಅಥವಾ ಫಿಲ್ಟರ್ ಮೆಷಿನ್‌ಗಳು(Filter Machine) ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಗಳನ್ನು ಆವರಿಸಿವೆ. ನಮಗೆ ವಿಷ ನೀರು ಕುಡಿಸುತ್ತಿವೆ.

ಸರ್ಕಾರದ ನಿರ್ಲಕ್ಷ ನಮ್ಮನ್ನಾಳುವವರ ಅಜ್ಞಾನ ಮತ್ತು ಸ್ವಾರ್ಥದಿಂದಾಗಿ ಈಗ ಇಡೀ ಮನುಕುಲವೇ ಅಪಾಯಕ್ಕೆ ಸಿಲುಕಿದೆ. ನೀರಿನ ಹೆಸರಲ್ಲಿ ನಮಗೆ ವಿಷ ಕುಡಿಸಲಾಗುತ್ತಿದೆ. ಸ್ಲೋಪಾಯಿಸನ್ ಕೊಟ್ಟು ನಮ್ಮನ್ನು ರೋಗಗಳ ಕೂಪಕ್ಕೆ ತಳ್ಳಲಾಗುತ್ತಿದೆ.

ಕಾಲ ಇನ್ನೂ ಮಿಂಚಿಲ್ಲ ಆರ್‌ಓ ನೀರಿನ ದುಷ್ಪರಿಣಾಮದ ಬಗ್ಗೆ ತಿಳಿದುಕೊಳ್ಳಿ ನಿಮ್ಮ ಸ್ನೇಹಿತರಿಗೂ ತಿಳಿಸಿ. ಆದಷ್ಟು ಫಿಲ್ಟರ್ ನೀರಿನ ಬದಲು ಶುದ್ಧ ಅಥವಾ ಕುದಿಸಿ ಆರಿಸಿದ ನೀರು ಕುಡಿಯಿರಿ.

Exit mobile version