ಮುಸ್ಲಿಮರು ಹಿಂದೂ ಹುಡುಗಿಯರನ್ನು ಅಪಹರಿಸಿ, ಪಾಪಕೃತ್ಯ ಮಾಡ್ತಾರೆ: ರಾಮದೇವ್‌ ಬಾಬಾ ಹೇಳಿಕೆ ವಿರುದ್ದ ಎಫ್‌ಐಆರ್‌

Barmer : ರಾಜಸ್ಥಾನದ(Rajasthan) ಬಾರ್ಮರ್‌ನಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಅನ್ಯ ಧರ್ಮಗಳ ಕುರಿತು ಅತ್ಯಂತ ಕೀಳಾಗಿ (FIR against Ramdev statement) ಹೇಳಿಕೆ ನೀಡಿರುವ ಯೋಗ ಗುರು ಬಾಬಾ ರಾಮದೇವ್‌(Baba Ramdev) ವಿರುದ್ದ ಎಫ್‌ಐಆರ್‌(FIR) ದಾಖಲಾಗಿದೆ.

ಇತ್ತೀಚೆಗೆ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ್ದ ಬಾಬಾ ರಾಮ್‌ದೇವ್, ಹಿಂದೂ ಧರ್ಮವು ತನ್ನ ಅನುಯಾಯಿಗಳಿಗೆ ಒಳ್ಳೆಯದನ್ನು ಮಾಡಲು ಕಲಿಸಿದರೆ

, ಇಸ್ಲಾಂ(Islam) ಮತ್ತು ಕ್ರಿಶ್ಚಿಯನ್‌(Christian) ಧರ್ಮಗಳು ಮತಾಂತರದ ಗೀಳನ್ನು ಹೊಂದಿವೆ.

ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್(Namaz) ಮಾಡುತ್ತಾರೆ. ನಂತರ ಅವರು ಹಿಂದೂ ಹುಡುಗಿಯರನ್ನು ಅಪಹರಿಸಿ ಎಲ್ಲಾ ರೀತಿಯ ಪಾಪಗಳನ್ನು ಮಾಡುತ್ತಾರೆ.

ನಮ್ಮ ಮುಸ್ಲಿಂ(Muslim) ಸಹೋದರರು ಬಹಳಷ್ಟು ಪಾಪಗಳನ್ನು ಮಾಡುತ್ತಾರೆ.

ಆದರೆ ಹಿಂದೂ ಧರ್ಮ ಈ ರೀತಿಯ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಕೆಲವರು ಇಡೀ ಜಗತ್ತನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಮಾತನಾಡುತ್ತಾರೆ ಮತ್ತು ಇನ್ನು ಕೆಲವರು ಜಗತ್ತನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಬಯಸುತ್ತಾರೆ.

ಇದು ಅವರ ಕೀಳು ಮನಸ್ಥಿತಿಯ ಸಂಕೇತ. ಅವರು ಭಯೋತ್ಪಾದಕರು ಅಥವಾ ಅಪರಾಧಿಗಳಾಗುತ್ತಾರೆ ನಂತರ ನಮಾಜ್ ಮಾಡುತ್ತಾರೆ.

ಆದರೆ ಹಿಂಸಾಚಾರ ಮತ್ತು ಅಪ್ರಾಮಾಣಿಕತೆಯಲ್ಲಿ ತೊಡಗದಂತೆ ಹಿಂದೂ(Hindu) ಧರ್ಮವು ಜನರಿಗೆ ಕಲಿಸುತ್ತದೆ.

ಇದನ್ನೂ ಓದಿ: ಅಚ್ಚರಿ ಆದ್ರೂ ಸತ್ಯ ! ಮಗುವಿನ ನಿರೀಕ್ಷೆಯಲ್ಲಿದ್ದಾರೆ ತೃತೀಯ ಲಿಂಗಿ ದಂಪತಿ

ಮುಂಜಾನೆ ಬೇಗ ಎದ್ದೇಳಿ, ದೇವರನ್ನು ಪ್ರಾರ್ಥಿಸಿ, ಯೋಗ(Yoga) ಮಾಡಿ, ನಿಮ್ಮ ದೇವರನ್ನು ಆರಾಧಿಸುವ ಮೂಲಕ ಒಳ್ಳೆಯ ಕೆಲಸ ಮತ್ತು ಒಳ್ಳೆಯ (FIR against Ramdev statement) ಕಾರ್ಯಗಳನ್ನು ಮಾಡಿ.

ಇದನ್ನೇ ನಮಗೆ ಹಿಂದೂ ಧರ್ಮ ಮತ್ತು ಸನಾತನ(Sanathana) ಧರ್ಮ ಕಲಿಸುತ್ತದೆ ಎಂದಿರುವ ಬಾಬಾ ರಾಮದೇವ್‌ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಎಲ್ಲೆಡೆ ಹರಿದಾಡುತ್ತಿದೆ.

ಇನ್ನು ರಾಜಸ್ತಾನದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ರಫೀಕ್ ಖಾನ್(Rafiq Khan) ಅವರು ರಾಮದೇವ್‌ ಹೇಳಿಕೆಯನ್ನು ಖಂಡಿಸಿದ್ದು, “ಬಾಬಾ ರಾಮ್‌ದೇವ್ ಒಬ್ಬ ಯೋಗ ಗುರು.

ಕೇಂದ್ರದ ಆಶೀರ್ವಾದದಿಂದ ಅವರ ಕಂಪನಿಗಳು ಪ್ರಗತಿ ಸಾಧಿಸುತ್ತಿವೆ ಹಾಗಾಗಿ ಅವರನ್ನು ಕೋಮುವಾದದ ಅಭಿಮಾನಿಗಳಿಗಾಗಿ ಇಲ್ಲಿಗೆ ಕಳುಹಿಸಲಾಗಿದೆ.

ನೀವು ಯಾವುದೇ ಧರ್ಮದ ಬಗ್ಗೆ ಕಾಮೆಂಟ್ ಮಾಡಿದರೆ ಸೂಕ್ತವಲ್ಲ. ಯಾವ ಧರ್ಮವೂ ದ್ವೇಷವನ್ನು ಕಲಿಸುವುದಿಲ್ಲ. ಅವರು ಪಿತೂರಿಯ ಅಡಿಯಲ್ಲಿ ರಾಜಸ್ಥಾನದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಬಾ ರಾಮದೇವ್‌ಹೇಳಿಕೆಯ ವಿರುದ್ದ ಪಥಾಯ್‌ಖಾನ್‌ಎಂಬುವರು, ಚೌಹಾಟನ್‌ ಪೊಲೀಸ್‌ಠಾಣೆಯಲ್ಲಿ ದ್ವೇಷಪೂರಿತ ಭಾಷಣ ಮತ್ತು ಕೋಮು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

Exit mobile version