ವಿವಾದಾತ್ಮಕ ಹೇಳಿಕೆ ನೀಡಿದ ಕೆಎಸ್‌ ಈಶ್ವರಪ್ಪ ವಿರುದ್ಧ ಪೊಲೀಸ್‌ ಎಫ್‌ಐಆರ್‌ ದಾಖಲು!

Davanagere:  ದೇಶ ವಿಭಜನೆ (Partition of the country) ಹೇಳಿಕೆ (FIR filed against KS Eshwarappa) ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು

ಎಂದು ಹೇಳಿಕೆ ನೀಡಿರುವ ಬಿಜೆಪಿ (BJP) ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ (K. S. Eshwarappa) ವಿರುದ್ಧ ಎಫ್ ಐಆರ್ (FIR) ದಾಖಲಾಗಿದೆ. ನಿಜಲಿಂಗಪ್ಪ ಬಡಾವಣೆಯ

ಕಾಂಗ್ರೆಸ್ (Congress) ಮುಖಂಡ ಹನುಮಂತ ಎಂಬುವರು ನೀಡಿದ ದೂರನ್ನು ಆಧರಿಸಿ ಇಲ್ಲಿನ ಬಡಾವಣೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505 (1) (ಸಿ), 505 (2) ಮತ್ತು 506 ಅಡಿ

ಪೊಲೀಸರು ಪ್ರಕರಣ (FIR filed against KS Eshwarappa) ದಾಖಲಿಸಿದ್ದಾರೆ.

ಕೇಂದ್ರದ ಅನುದಾನ (Grants from the Centre) ತಾರಾತಮ್ಯ ಖಂಡಿಸಿ ರಾಜ್ಯ ಕಾಂಗ್ರೆಸ್ ಈಗಾಗಲೇ ಹಲವಾರು ಹೇಳಿಕೆ ನೀಡಿದೆ.ಈ ನಡುವೆ ಅನುದಾನ ಕೊಡಲಿಲ್ಲ

ಅಂದ್ರೆ ದಕ್ಷಿಣ ರಾಜ್ಯಗಳ ( southern states ) ಪ್ರತ್ಯೇಕ ರಾಷ್ಟ್ರ ಕೊಡಿ ಅಂತ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದ್ದರು. ವಿನಯ್ ಕುಲಕರ್ಣಿ ಕೂಡ ಇದಕ್ಕೆ ಸಹಮತ

ವ್ಯಕ್ತಪಡಿಸಿ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದರು. ಇನ್ನು ಈ ಕುರಿತಾಗಿ ದಾವಣಗೆರೆಯಲ್ಲಿ (Davangere) ಮಾತನಾಡಿದ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಸಂಸದ ಡಿಕೆ ಸುರೇಶ್

(D K Suresh) ಮತ್ತು ವಿನಯ್ ಕುಲಕರ್ಣಿ (Vinay Kulkarni) ಇಬ್ಬರು ರಾಷ್ಟ್ರ ದ್ರೋಹಿಗಳು (Traitors of the nation.). ದೇಶವನ್ನು ತುಂಡು ಮಾಡುವಂತೆ ಹೇಳುತ್ತಿರುವ

ರಾಷ್ಟ್ರ ದ್ರೋಹಿಗಳನ್ನು ಗುಂಡಿಕ್ಕುವ ಕಾನೂನನ್ನು ಪ್ರಧಾನಿ ಮೋದಿಯವರೇ ತರಬೇಕು. ಇವರಿಬ್ಬರನ್ನ ಕಾಂಗ್ರೆಸ್‌ನಿಂದ ಕಿತ್ತೆಸೆಯಬೇಕು ಎಂದು ವಿವಾದದ ಕಿಡಿ ಹೊತ್ತಿಸಿದ್ದರು.

ಇಬ್ಬರನ್ನೂ ಗುಂಡಿಕ್ಕಿ ಕೊಲ್ಲಬೇಕು ಅನ್ನೋ ಈಶ್ವರಪ್ಪರ ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನ ಮತ್ತೆ ಸಿಟ್ಟಿಗೇಳಿಸಿದೆ (Again angered the leaders) . ಈಶ್ವರಪ್ಪ ಮಾತಿಗೆ ಸಿಎಂ

ಸಿದ್ದರಾಮಯ್ಯ ಕೌಂಟರ್ ಕೂಡ ಕೊಟ್ಟಿದ್ದರು.ಅವರಿಗೆಲ್ಲಾ ಕಡಿ, ಬಡಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಬಿಜೆಪಿಗೂ ಸಹ  ಕಡಿ, ಬಡಿ, ಕೊಲ್ಲು, ಕತ್ತರಿಸು ಭಾಷೆ ಬಿಟ್ಟ ಏನು ಬರಲ್ಲ ಅಂತಾ

ಸಿಎಂ (CM) ಟಾಂಗ್ ನೀಡಿದ್ದರು.

ಇನ್ನು ಈ ಕುರಿತಾದ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಮಾಜಿ ಸಚಿವ (Former Minister) ಕೆ. ಎಸ್.ಈಶ್ವರಪ್ಪ ಅವರಿಗೆ ದಾವಣಗೆರೆ ಬಡಾವಣೆ ಠಾಣೆಯ ಪೊಲೀಸರು ನೋಟಿಸ್

ಜಾರಿ ಮಾಡಿದ್ದಾರೆ. ಇಂದು ಬೆಳಗ್ಗೆ 8:30 ಸುಮಾರಿಗೆ ಬಡಾವಣೆ ಠಾಣೆ ಪೊಲೀಸರು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ (Malleshwar of Shimoga) ಈಶ್ವರಪ್ಪ ನಿವಾಸಕ್ಕೆ

ತೆರಳಿ ನೋಟಿಸ್ ಜಾರಿ ಮಾಡಿದ್ದಾರೆ. ಈಶ್ವರಪ್ಪ ಅವರು ನೋಟಿಸ್ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ: ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ: ಅಗ್ನಿವೀರ್ ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭ

Exit mobile version