ಬೆಂಕಿ ಅವಘಡ: ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, 7 ಮಂದಿ ಸಜೀವ ದಹನ

Mumbai: ಮಹಾರಾಷ್ಟ್ರದ (Maharashtra) ರಾಜಧಾನಿಯಾದ ಮುಂಬೈನ ಗೋರೆಗಾಂವ್‌ನಲ್ಲಿ 7 ಮಹಡಿ (Fire accident in Mumbai) ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ

ಅವಘಡದಲ್ಲಿ ಕನಿಷ್ಠ 7 ಮಂದಿ (Fire accident in Mumbai) ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ.

ಗೋರೆಗಾಂವ್‌ನ (Goregaon) ಬಹುಮಹಡಿ ಕಟ್ಟಡ ಒಂದರಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಈ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು

ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ ಬೆಂಕಿಯ ನಿಯಂತ್ರಣಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಬೆಂಕಿಯಲ್ಲಿ ಸಜೀವವಾಗಿ ಬೆಂದು ಹೋದ ಏಳು ಮಂದಿಯಲ್ಲಿ ಅಪ್ರಾಪ್ತ ವಯಸ್ಕರು ಸೇರಿ ಒಬ್ಬ ಪುರುಷ ಹಾಗೂ ಐವರು ಮಹಿಳೆಯರು ಗಾಯಗೊಂಡು 40 ಸಂತ್ರಸ್ತರಲ್ಲಿ 12 ಮಂದಿ ಪುರುಷರು ಹಾಗೂ

ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ 28 ಮಹಿಳೆಯರು ಇದ್ದರು ಮತ್ತು ಗಾಯಾಳುಗಳನ್ನು ಮುಂಬೈನ ಎಚ್‌ಬಿಟಿ (HBT) ಆಸ್ಪತ್ರೆ ಹಾಗೂ ಕೂಪರ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ

ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ನಿವಾಸಿಗಳನ್ನು ಜೋಗೇಶ್ವರಿಯಲ್ಲಿನ (Jogeshwari) ಟ್ರಾಮಾ ಕೇಂದ್ರ ಹಾಗೂ ಜುಹುದಲ್ಲಿನ ಕೂಪರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಘಟನೆಯು ಗೋರೆಗಾಂವ್‌

ಪಶ್ಚಿಮದ ಆಜಾದ್ ನಗರ ಸ್ಥಳದ ಎಂಜಿ ರಸ್ತೆಯಲ್ಲಿರುವ ಜೈ ಭವಾನಿ ಕಟ್ಟಡದಲ್ಲಿ ಶುಕ್ರವಾರ ನಸುಕಿನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್

(Bruhanmumbai Municipal Corporation) (ಬಿಎಂಸಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂಬಯಿ ಪೊಲೀಸರು ಮತ್ತು ಬಿಎಂಸಿ (BMC) ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು,ಬೆಂಕಿಯನ್ನು ಆರಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ವಿಡಿಯೋಗಳಲ್ಲಿ ಕಂಡುಬಂದಿವೆ ಅಲ್ಲದೆ

ಕಟ್ಟಡದ ವಾಹನ ಪಾರ್ಕಿಂಗ್ (Parking) ಸ್ಥಳದಲ್ಲಿ ಬೆಂಕಿ ಮೊದಲು ಹೊತ್ತಿಕೊಂಡಿತ್ತು ಬೃಹತ್ ಪ್ರಮಾಣದ ಕನ್ನಾಲಿಗೆಯು ಕಟ್ಟಡವನ್ನು ಆವರಿಸಿಕೊಂಡಿದ್ದು, ಅದೇ ಸ್ಥಳದಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳು

ಮತ್ತು ಕಾರುಗಳು ಕೂಡ ಬೆಂಕಿಯಲ್ಲಿ ಭಸ್ಮವಾಗಿವೆ.ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ,ಆದರೆ ಬಹು ಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಲು ಕಾರಣ ಇನ್ನೂ ತಿಳಿದುಬಂದಿಲ್ಲ.

ಕಟ್ಟಡದ ಬೆಂಕಿ ನಂದಿಸಲು ಐದು ಜಂಬೋ ನೀರಿನ ಟ್ಯಾಂಕರ್‌ಗಳು (Tanker), ಎಂಟು ಅಗ್ನಿಶಾಮಕ ಎಂಜಿನ್‌ಗಳು,ಆಂಬುಲೆನ್ಸ್‌ಗಳು (Ambulance) ರಕ್ಷಣಾ ಕಾರ್ಯಕ್ಕೆ ರವಾನೆಯಾಗಿದ್ದವು ಅಷ್ಟೆ ಅಲ್ಲದೆ

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಅಗ್ನಿ ಶಾಮಕ ಸಿಬ್ಬಂದಿ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದಕೆ ಒಳಗೆ ಸಿಲುಕಿದ್ದವರನ್ನು ರಕ್ಷಿಸುವ ಸಾಹಸ ಕಾರ್ಯ ನಡೆಸಿದ್ದರಿಂದ ಮುಂಜಾನೆ

ಆರು ಗಂಟೆ ಸುಮಾರಿಗೆ ಬೃಹತ್ ಅಗ್ನಿ ಜ್ವಾಲೆಗಳನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಕಟದಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ಸಾಹಸ ಕಾರ್ಯ ನಡೆಸಿದರು ಸಹ ತಾಪಮಾನವನ್ನು ತಗ್ಗಿಸುವ ಪ್ರಯತ್ನ

ಇನ್ನೂ ಮುಂದುವರೆದಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿಯಲು ತನಿಖೆ ನಡೆದ ಸಮಯದಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ಇದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತ್ತು ಮತ್ತು ಬಳಿಕ ಅದು ಇಡೀ ಕಟ್ಟಡಕ್ಕೆ ಆವರಿಸಿತ್ತು ಎಂದು

ಸ್ಥಳೀಯರು ತಿಳಿಸಿದ್ದಾರೆ.

ಇದನ್ನು ಓದಿ: ಕುರುಬರನ್ನು ಎಸ್ಟಿಗೆ ಸೇರಿಸುವಂತೆ ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸು ಮಾಡಿರೋದು ಘೋರವಾದ ಬ್ರಾಹ್ಮಣ್ಯವಾಗಿದೆ – ನಟ ಚೇತನ್

Exit mobile version